ಮಂಗಳೂರು

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನೆಹರೂ ಸ್ಮರಣೆ

  • Published in ಮಂಗಳೂರು
  • Read 37 times
  • Comments::DISQUS_COMMENTS
ಮಂಗಳೂರು :ದೇಶದ ಪ್ರಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂರವರ ಪುಣ್ಯತಿಥಿಯನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪಕ್ಷದ ಕಛೇರಿಯಲ್ಲಿ ಆಚರಿಸಲಾಯಿತು. ನೆಹರೂರವರ ಭಾವಚಿತ್ರಕ್ಕೆ ಪುಷ್ಪಾಂಜನೆಯನ್ನು ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಶ್ರೀ ಇಬ್ರಾಹಿಂ ಕೊಡಿಜಾಲ್‍ರವರು, ದಿ| ನೆಹರೂರವರು ವಿಶ್ವದ ಶಾಂತಿದೂತರಾಗಿದ್ದರು.
 
  
 
 
ಸ್ವತಂತ್ರ ಭಾರತದ ಪ್ರಪ್ರಥಮ ಪ್ರಧಾನಿಯಾಗಿ ದೇಶದಲ್ಲಿ ಆರ್ಥಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಅಡಿಪಾಯ ಹಾಕಿಕೊಟ್ಟಿದ್ದರು. ಅವರ ಅಧಿಕಾರ ಅವಧಿಯಲ್ಲಿ ಪಂಚವಾರ್ಷಿಕ ಯೋಜನೆಗಳು ಜಾರಿಗೆಗೊಂಡು ದೇಶದಲ್ಲಿ ಅನೇಕ ಅಣೆಕಟ್ಟುಗಳನ್ನು ಕೈಗಾರಿಕೆಗಳನ್ನು ಸ್ಥಾಪಿಸುವಲ್ಲಿ ಸಫಲರಾಗಿದ್ದರು. ಅನೇಕ ನೀರಾವರಿಗೆ ಸಂಬಂಧಿಸಿದ ಯೋಜನೆಗಳು ರೂಪಿಸಿ ದೇಶಾದ್ಯಂತ ರೈತರಿಗೆ ಬಹಳಷ್ಟು ನೆರವಾಗಿದ್ದರು. ದೇಶದ ಅಭಿವೃದ್ಧಿಯ ಹರಿಕಾರರಾಗಿದ್ದುಕೊಂಡು ಮಹಾತ್ಮ ಗಾಂಧೀಜಿಯವರ ಕನಸಿನ ರಾಮರಾಜ್ಯ ಕಟ್ಟಲು ಸಹಕಾರಿಯಾಗಿದ್ದರು ಎಂದರು. ಯುವ ಕಾಂಗ್ರೆಸ್ ಅಧ್ಯಕ್ಶ ಮಿಥುನ್ ರೈ, ಸೇವಾದಳದ ಸಂಘಟಕ ಅಶ್ರಫ್, ನಗರ ಬ್ಲಾಕ್ ಅಧ್ಯಕ್ಷ ವಿಶ್ವಾಸದಾಸ್ ಸಂದೋರ್ಬೋಚಿತವಾಗಿ ಮಾತನಾಡಿದರು.
 
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಶ್ರೀ ಟಿ.ಕೆ. ಸುಧೀರ್, ಶ್ರೀ ನಜೀರ್ ಬಜಾಲ್, ಸೌತ್ ಬ್ಲಾಕ್ ಅಧ್ಯಕ್ಷ ಶ್ರೀ ನಾಗೇಂದ್ರ ಕುಮಾರ್, ಪಾಲಿಕೆಯ ಹಣಕಾಸು ಸಮಿತಿ ಅಧ್ಯಕ್ಷ ಹರಿನಾಥ, ಪರಿಶಿಷ್ಟ ವರ್ಗದ ಘಟಕ ಅಧ್ಯಕ್ಷ ಪದ್ಮನಾಭ ನರಿಂಗಾನ, ಅಬೂಬಕರ್, ನಾಗೇಶ್ ಶೆಟ್ಟಿ, ಉದಯ ಕುಂದರ್, ಸಿ.ಎಂ. ಮುಸ್ತಾಫಾ, ಚಂದ್ರಶೇಖರ್, ಅಹ್ಮದ್ ಬಾವಾ, ಸಂಜೀವ, ಅಬ್ದುಲ್ ಖಾದರ್, ಮೆಕ್‍ಬೂಲ್, ಜಾರ್ಜ್, ಥೆರಸಾ ಪಿಂಟೋ, ರಾಜೀವಿ ಮೊದಲಾದವರು ಉಪಸ್ಥಿತರಿದ್ದರು.
More in this category: « ಕವಿತಾ ರೆಸಿಡೆನ್ಸಿಯಲ್ಲಿ ಬೆಂಕಿ ಅವಘಡ ಶ್ರೀ ಭಗವತಿ ತೀಯಾ ಸೇವಾ ಸಂಘ ಜಪ್ಪು ಇದರ ವಾರ್ಷಿಕೋತ್ಸವ »
Tweet