Menu

ಸ್ವಚ್ಚತೆಯ ಹೆಸರಿನಲ್ಲಿ ದೊರಕಿತು ಪಾಳುಬಿದ್ದ ಶಾಚಾಲಯಕ್ಕೆ ಮುಕ್ತಿ

  • Published in ಕಾರ್ಕಳ
  • Read 30 times
  • Comments::DISQUS_COMMENTS
ಕಾರ್ಕಳ: ಅಡಿಪಾಯ ಕಳಚಿ ಅಪಾಯದಂಚಿನಲ್ಲಿದ್ದ ಸಾರ್ವಜನಿಕ ಶೌಚಾಲಯದ ಕಟ್ಟಡಕ್ಕೆ ಕೊನೆಗೂ ಸ್ವಚ್ಚತೆಯ ಹೆಸರಿನಲ್ಲಿ ಮುಕ್ತಿ ದೊರಕಿದೆ.
ಕಾರ್ಕಳದಲ್ಲಿ ಆರಂಭಿಸಲಾಗಿದ್ದ ಪ್ರಪ್ರಥಮ ಸಾರ್ವಜನಿಕ ಶೌಚಾಲಯ ಇದಾಗಿದೆ. ಶೌಚಾಲಯದ ತಳಭಾಗವನ್ನು ಕಡಿದು ಬಸ್‍ನಿಲ್ದಾಣಕ್ಕೆ ಪ್ರವೇಶ ದಾರಿ ನಿರ್ಮಾಣ ಮಾಡಿರುವುದು ಈ ಎಲ್ಲಾ ಸಮಸ್ಸೆಗೆ ಮೂಲ ಕಾರಣವಾಗಿದೆ. ಶೌಚಾಯದ ಮೇಲ್ಭಾಗದಲ್ಲಿ ನಿರ್ಮಿಸಲಾಗಿದ್ದ ನೀರಿನ ಟ್ಯಾಂಕ್ ಸಾಂದ್ರತೆ ಹಾಗೂ ಘನವಾಹನಗಳ ಓಡಾಟ ಹೆಚ್ಚಳದಿಂದ ಶೌಚಾಯಲಯ ಅಡಿಪಾಯದ ಕರಿಕಲ್ಲುಗಳು ಒಂದಾದಾಗಿ ಕುಸಿಯಲಾರಂಭಿಸಿತು.  
 
ಅಪಾಯದಂಚಿನಲ್ಲಿ ಇರುವ ಸಾರ್ವಜನಿಕ ಸುಲಭ್ ಶೌಚಾಲಯದ ಕಟ್ಟಡದ ಬಗ್ಗೆ ಮಾಧ್ಯಮ ಸಚಿತ್ರ ವರದಿಯನ್ನು ಪ್ರಕಟಿಸಿತು. ಇದರಿಂದ ಎಚ್ಚೆತ್ತುಕೊಂಡ ಉಡುಪಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಸಹಿತ ಅಧಿಕಾರಿಗಳ ತಂಡ ಘಟನಾಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರು ಬಳಕೆಗೆ ಉಪಯೋಗಿಸುತ್ತಿದ್ದ ಅಪಾಯಕಾರಿ ಸುಲಭ್ ಶೌಚಾಲಯಕ್ಕೆ ಬೀಗ ಜಡಿಯುವಂತೆ ಹಾಗೂ ಅದನ್ನು ಕೆಡವುವಂತೆ ಕಾರ್ಕಳ ಪುರಸಭೆಯ ಅಂದಿನ ಮುಖ್ಯಾಧಿಕಾರಿಯಾಗಿದ್ದ ಗೋಪಾಲಕೃಷ್ಣ ಶೆಟ್ಟಿ ಅವರಿಗೆ ಅದೇಶಿಸಿದ್ದರು.
 
ಶೌಚಾಲಯಕ್ಕೆ ಬೀಗ ಜಡಿದ ಪುರಸಭೆ ಶೌಚಾಲಯವನ್ನು ಕೆಡವು ಪ್ರಯತ್ನ ನಡೆಸಿತ್ತಾದರೂ ಅದ್ಯಾವುದೋ ಕಾಣದ ಕೈಗಳಿಗೆ ಮಣಿದ ಪುರಸಭೆಯ ಅಂದಿನ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಕಾಮಗಾರಿಯನ್ನು ಮೊಟಕುಗೊಳಿಸಿದ್ದರು.

ಪುರಸಭಾ ನಿಯಾಮಾವಳಿಯನ್ನು ಉಲ್ಲಂಘನೆಯಾದಾಗ...
ಪುರಸಭಾ ಕಾಯ್ದೆಯ ಪ್ರಕಾರ ಪುರಸಭಾ ವ್ಯಾಪ್ತಿಯಲ್ಲಿ ಅಪಾಯಕಾರಿ ಕಟ್ಟಡಗಳು ಕಂಡುಬಂದಲ್ಲಿ ಜಾಗದ ಮಾಲಕರಿಗೆ(ವಾರಿಸ್ತದಾರರಿಗೆ) ನೋಟಿಸ್ ಜಾರಿಗೊಳಿಸಿ ಅಪಾಯಕಾರಿ ಕಟ್ಟಡ ಇರುವ ಬಗ್ಗೆ ಮಾಹಿತಿ ನೀಡಿ ಅದನ್ನು ತೆರವು ಗೊಳಿಸುವಂತೆ ಸೂಚನೆ ನೀಡಬೇಕಾಗುತ್ತದೆ. ತಪ್ಪಿದಲ್ಲಿ ಅಪಾಯಕಾರಿ ಕಟ್ಟಡವನ್ನು ಪುರಸಭೆಯು ತೆರವುಗೊಳಿಸಿ ಅದರ ಖರ್ಚು ವೆಚ್ಚವನ್ನು ಜಾಗದ ಮಾಲಿಕನಿಂದ ವಸೂಲಿ ಮಾಡಬೇಕಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಹಾಗೂ ಅಧಿಕಾರಿಗಳು ಅದೇಶ ನೀಡಿ ವರ್ಷಗಳು ಕಳೆದರೂ ಅಪಾಯಕಾರಿ ಶೌಚಾಲಯ ಕಟ್ಟಡ ಕಡೆವುವಲ್ಲಿ ಪುರಸಭೆ ವಿಳಂಬ ನೀತಿ ಅನುಸರಿಸಿದೆ. ಜಾಗದ ಒಡೆತನ ಹಾಗೂ ಕ್ರಮ ಕೈಗೊಳ್ಳಬೇಕಾಗಿದ್ದ ಇಲಾಖೆ ಕಾರ್ಕಳ ಪುರಸಭೆಯಾಗಿರುವುದರಿಂದ ಯಾರ ವಿರುದ್ಧ ಯಾರು ಕ್ರಮ ಕೈಗೊಳ್ಳುವುದೆಂಬ ಯಕ್ಷಪ್ರಶ್ನೆ ಕಾಡುತ್ತಿದೆ.

ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ವಿಶಾಲ್ ಕಾರ್ಕಳಕ್ಕೆ ಭೇಟಿ
ಜನವರಿ ತಿಂಗಳ ಅಂತ್ಯದಲ್ಲಿ ಕಾರ್ಕಳ ನಗರದಲ್ಲಿ ಜರುಗಿದ್ದ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಪೂರ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ. ವಿಶಾಲ ಅವರು ಕಾರ್ಕಳಕ್ಕೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಪರಿಶೀಲನೆ ನಡೆಸಿರುವಾಗ ಹೃದಯಭಾಗದಲ್ಲಿ ಇರುವಂತಹ ಪಾಳುಬಿದ್ದ ಸಾರ್ವಜನಿಕ ಶೌಚಾಲಯದ ಬಗ್ಗೆ ಪತ್ರಿಕಾ ಪ್ರತಿನಿಧಿ ಗಮನಕ್ಕೆ ತಂದಿದ್ದರು. ಕೂಡಲೇ ಕ್ರಮಕೈಗೊಳ್ಳುವಂತೆ ಕಾರ್ಕಳ ಪುಸಭಾ ಮುಖ್ಯಧಿಕಾರಿ ರಾಯಪ್ಪ ಅವರಿಗೆ ಅದೇಶಿಸಿದ್ದರು.

ಸ್ವಚ್ಚತೆಯ ನೆಲೆಯಲ್ಲಿ ಮುಕ್ತಿ
-ರಾಯಪ್ಪ ಕಾರ್ಕಳ ಪುರಸಭಾ ಮುಖ್ಯಾಧಿಕಾರಿ
ಉಡುಪಿ ಬಸ್‍ನಿಲ್ದಾಣ ಪರಿಸರದಲ್ಲಿ ಇದ್ದ ಪಾಳುಬಿದ್ದ ಸಾರ್ವಜನಿಕ ಶೌಚಾಲಯವು ಸಾಂಕ್ರಾಮಿಕ ತಾಣವಾಗಿ ಮಾರ್ಪಟ್ಟಿರುವುದರಿಂದ ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ. ಇದೇ ಕಾರಣವನ್ನು ಮುಂದಿಟ್ಟು ಪುರಸಭಾ ಕೌನ್ಸಿಲ್ ಸಭೆಯಲ್ಲಿ ಮಂಡಿಸಿದಾಗ ಅದನ್ನು ಕೆಡವುವಂತೆ ಒಪ್ಪಿಗೆ ಸಿಕ್ಕಿದೆ. ಸ್ವಚ್ಚಭಾರತ ಯೋಜನೆಯಡಿ ಅನುದಾನ ದೊರತಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿದೆ.
 
*ಆರ್.ಬಿ.ಜಗದೀಶ್ 
More in this category: « ಮರ್ಮಾಂಗ ತುಳಿದು ಜೀವಬೆದರಿಕೆ ಪ್ರಕೃತಿ ವಿದ್ಯಾ ಸಂಸ್ಥೆಯಲ್ಲಿ ಶಾಲಾ ಪ್ರಾರಂಭೋತ್ಸವ. »
back to top