Menu

ಕಾಸರಗೋಡು ಗೋ ತಳಿ ಸಾಕಣೆ ಕೇಂದ್ರ: ಉದ್ಘಾಟನೆಗೊಂಡರೂ ಕಾರ್ಯಾರಂಭಗೊಂಡಿಲ್ಲ

  • Published in ಕೇರಳ
  • Read 21 times
  • Comments::DISQUS_COMMENTS
ಬದಿಯಡ್ಕ: ಬದಿಯಡ್ಕ ಪಂಚಾಯತ್‍ನ ಬೇಳ ಕುಮಾರಮಂಗಲದಲ್ಲಿ ಕಾಸರಗೋಡು ತಳಿಯ ಗೋವುಗಳನ್ನು ಸಂರಕ್ಷಿಸುವ ಮತ್ತು ಊರಿನ ದನದ ಶುದ್ಧ ಹಾಲನ್ನು ಸ್ಥಳೀಯರಿಗೆ ವಿತರಿಸುವ ಉದ್ದೇಶದಿಂದ ರಾಜ್ಯ ಪಶುಸಂಗೋಪನಾ ಇಲಾಖೆಯ ನೇತೃತ್ವದಲ್ಲಿ ಕಾಸರಗೋಡು ತಳಿ ಗೋವುಗಳ ಸಾಕಣೆ ಕೇಂದ್ರ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಇದರ ಪ್ರಥಮ ಹಂತದ ಉದ್ಘಾಟನೆಯನ್ನು ರಾಜ್ಯ ಕೃಷಿ ಸಚಿವ ಕೆ.ಪಿ. ಮೋಹನನ್ 2013ರ ಸೆ. 13ರಂದು ಉದ್ಘಾಟಿಸಿದ್ದರು. ಆಗ ಪ್ರಥಮ ಹಂತವಾಗಿ ಸ್ಥಳಕ್ಕೆ ಕಂಪೌಂಡ್ ಮತ್ತು ಆಫೀಸು ಕಚೇರಿಯ ಕಾಮಗಾರಿ ಪೂರ್ತಿಕರಿಸಲಾಗಿತ್ತು. ಉದ್ಘಾಟನೆ ಕಾರ್ಯಕ್ರಮದಲ್ಲಿ ಸಚಿವರು ಒಂದು ವರ್ಷದಲ್ಲಿ ಕಾಮಗಾರಿ ಪೂರ್ತೀಗೊಳಿಸಿ 100 ಕಾಸರಗೋಡು ತಳಿಯ ದನಗಳನ್ನು ಸಾಕುವ ವ್ಯವಸ್ಥೆಯನ್ನು ಮಾಡಲಾಗುವುದು ಎಂಬುದಾಗಿ ಹೇಳಿದ್ದರು.
 
2 ಕೋಟಿ 40 ಲಕ್ಷ ರೂ. ವ್ಯಯಿಸಿ ಹಟ್ಟಿ ನಿರ್ಮಾಣ: ಇದಕ್ಕೆ ಬೇಕಾದ 6 ಎಕರೆ ಸ್ಥಳವನ್ನು ಬದಿಯಡ್ಕ ಗ್ರಾ.ಪಂ. ಪಶುಸಂಗೋಪನಾ ಇಲಾಖೆಗೆ ನೀಡಿದೆ. ಇಲ್ಲಿ ಈ ಸ್ಥಳಕ್ಕೆ ಕಂಪೌಡ್, ಆಫೀಸು, ದನಗಳಿಗೆ ಕುಡಿಯಲು ನೀರಿಗೆ ಬೇಕಾಗಿ ಬೃಹತ್ ಬಾವಿ ನಿರ್ಮಾಣ, ದನಗಳನ್ನು ಕಟ್ಟಿಹಾಕಲು ಮೂರು ಪ್ರತ್ಯೇಕ ಶೆಡ್‍ಗಳ ನಿರ್ಮಾಣ, ನೀರೆತ್ತಲು ಪಂಪಿನ ವ್ಯವಸ್ಥೆ, ವಿದ್ಯುದ್ದೀಕರಣ ಮುಂತಾದ ಕಾಮಗಾರಿಗಳನ್ನು ಸುಮಾರು 2 ಕೋಟಿ 40 ಲಕ್ಷ ರೂ. ವ್ಯಯಿಸಿ ನಿರ್ಮಿಸಲಾಗಿದೆ. ಇಲ್ಲಿ ಹುಲ್ಲು ಗಾವಲು ನಿರ್ಮಿಸಲು ಅಕೇಶಿಯಾ ಮರಗಳು ತಡೆಯಾಗುತ್ತಿದ್ದು, ಇದನ್ನು ಕಡಿಯಲು ಅರಣ್ಯ ಇಲಾಖೆಯ ಅನುಮತಿ ಪಡೆಯಲಾಗುವುದು ಎಂಬುದಾಗಿ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಾಸರಗೋಡು ಗೋತಳಿಯ ಹಸುಗಳಿಗೆ ಔಷಧೀಯ ಗುಣವಿದ್ದು, ಇವುಗಳ ಗೋಮೂತ್ರ ದಿಂದ ಆರ್ಕವನ್ನು ತಯಾರಿಸಿ ಮಾರಕ ರೋಗವಾದ ಕ್ಯಾನ್ಸರ್ ರೋಗ ಚಿಕಿತ್ಸೆಗೂ ಕೂಡ ಬಳಕೆ ಮಾಡುತ್ತಾರೆ. ಇದರಿಂದ ಗೋ ಮೂತ್ರಕ್ಕೂ ಕೂಡ ಬಾರಿ ಬೇಡಿಕೆಯಿದೆ.

ಹೆಚ್ಚಿದ ಬೇಡಿಕೆ
ಕಳೆದ 2 ವರ್ಷಗಳಿಂದ ಕಾಸರಗೋಡು ತಳಿಯ ಗೋವುಗಳಿಗೆ ಬೇಡಿಕೆ ಹೆಚ್ಚಿದ್ದು, 1 ಹಸುವಿಗೆ ರೂ. 15,000ದಿಂದ ರೂ. 50,000 ತನಕ ಬೆಲೆ ಇದೆ. ಕಾಸರಗೋಡು ತಳಿಯ ಬಳಿ ಕಪಿಲ ಎಂಬ ಗೋವಿಗೆ ರೂ. 1ಲಕ್ಷ ತನಕ ಬೇಡಿಕೆ ಇದೆ ಎನ್ನತ್ತಾರೆ. ಕಾಸರಗೋಡು ತಳಿಯನ್ನು ರಕ್ಷಿಸುವ ಉದ್ದೇಶ ದಿಂದ ಸರಕಾರ ಪ್ರಾರಂಭಿಸಿದ ಈ ಯೋಜನೆಯು ಆದಷ್ಟು ಬೇಗನೆ ಕಾರ್ಯರೂಪಕ್ಕೆ ಬರ ಬೇಕಾದುದು ಅನಿವಾರ್ಯವಾಗಿದ್ದು, ಅಧಿಕಾರಿಗಳು ಇದಕ್ಕೆ ಬೇಕಾದ ಕ್ರಮತೆಗೆದುಕೊಳ್ಳಲು ಮುಂದಾ ಗಬೇಕು ಎಂದು ಊರವರು ಆಗ್ರಹಿಸಿಸಿದ್ದಾರೆ.

ಅಭಿವೃದ್ಧಿ ಕುಂಟಿತ
ಈ ಯೋಜನೆಯನ್ನು ಬಹು ನೀರಿಕ್ಷೆಯಿಂದ ಪ್ರಾರಂಭಗೊಳಿಸಲಾಯಿತಾದರೂ ಇದರ ಮುಂದಿನ ಕೆಲಸ ಕಾರ್ಯಗಳು ಕುಂಟುತ್ತಾ ಸಾಗುತ್ತಿವೆ. ಇಲ್ಲಿ ಬೇಕಾದ ಉದ್ಯೋಗಸ್ಥರ ನೇಮಕಾತಿಯನ್ನು ಇನ್ನು ಕೂಡ ನಡೆಸಿಲ್ಲ. ತೀವ್ರ ಆರ್ಥಿಕ ಕ್ಷಾಮವಿರುವ ಕಾರಣ ಕೂಡಲೇ ಉದ್ಯೋಗಸ್ಥರನ್ನು ನೇಮಕಾತಿ ನಡೆಸಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂಬುದು ಹಣಕಾಸು ಸಚಿವ ಕೆ.ಎಂ. ಮಾಣಿ ಅವರ ಆಭಿಪ್ರಾಯ. ಬದಿಯಡ್ಕ ಪಂಚಾಯತ್‍ನ ಅಭಿವೃದ್ಧಿಯ ದೃಷ್ಟಿಯಲ್ಲಿ ಇದು ಒಂದು ಮಹತ್ವರ ಯೋಜನೆಯಾಗಿದೆ. ಆದರೆ ಈ ಯೋಜನೆ ಯಾವಾಗ ಸಾಕಾರಗೊಳ್ಳುತ್ತದೆ ಎಂಬುದಾಗಿ ಕಾದು ನೋಡಬೇಕು. ಈ ಯೋಜನೆ ಸಾಕಾರ ಗೊಂಡರೆ ಶುದ್ಧ ಊರ ತಳಿಯ ಹಸುವಿನ ಹಾಲು ಬೇಳ, ನೀರ್ಚಾಲು ಮತ್ತು ಬದಿಯಡ್ಕದ ಜನತೆಗೆ ಲಭ್ಯವಾಗಲಿದೆ.
More in this category: « ಬದಿಯಡ್ಕ: ರಸ್ತೆ ಪಕ್ಕದಲ್ಲಿ ತ್ಯಾಜ್ಯ: ಸ್ವಚ್ಛ ಭಾರತ್ ಮರೆತರೇ ಇಲ್ಲಿನವರು ? ಗೋ ಯಾತ್ರೆ: ಸೀತಾಂಗೋಳಿಯಲ್ಲಿ ಭವ್ಯ ಸ್ವಾಗತ »
back to top