Menu

ಒಂದೇ ಕುಟುಂಬದ ಐವರು ನಾಪತ್ತೆ: ಕ್ರಮಕ್ಕೆ ಮಹಿಳಾ ಮೋರ್ಚಾ ಆಗ್ರಹ

  • Published in ಕೇರಳ
  • Read 25 times
  • Comments::DISQUS_COMMENTS
ಬದಿಯಡ್ಕ: ಕುಂಬ್ಡಾಜೆ ಸಮೀಪದ ಬಲೆಕ್ಕಳದಿಂದ ನಾಪತ್ತೆಯಾದ ಐದು ಮಂದಿಯ ಪತ್ತೆಗೆ ಪೊಲೀಸರು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಮಹಿಳಾ ಮೋರ್ಚಾ ಒತ್ತಾಯಿಸಿದೆ.
 
ಐದು ಮಂದಿ ನಾಪತ್ತೆಯಾಗಿ ಹತ್ತು ದಿನಗಳು ಕಳೆದರೂ ಪೋಲೀಸರು ತನಿಖೆ ನಡೆಸಲು ಮುಂದಾಗುತ್ತಿಲ್ಲ. ಇದು ಹಲವು ಸಂಶಯಗಳಿಗೆ ಎಡೆ ಮಾಡುತ್ತಿದೆ. ನಾಪತ್ತೆಯಾದವರಲ್ಲಿ ಪ್ರಾಯ ಪೂರ್ತಿಯಾಗದ ಓರ್ವ ಯುವತಿ ಹಾಗೂ ಇಬ್ಬರು ಪುಟ್ಟ ಮಕ್ಕಳಿದ್ದಾರೆಂಬುದು ಪ್ರಕರಣದ ಗಂಭೀರತೆಯನ್ನು ಸೂಚಿಸುತ್ತದೆ ಎಂದು ಮಹಿಳಾ ಮೋರ್ಚಾ ಹೇಳಿದೆ, ಈ ಪ್ರಕರಣವನ್ನು ಬೇ„ಸಿ ನಾಪತ್ತೆಯಾದವರನ್ನು ಪತ್ತೆ ಹಚ್ಚಿ ಈ ಪ್ರಕರಣದ ಹಿಂದಿನ ನಿಗೂಡತೆಯನ್ನು ಬಯಲಿಗೆಳೆಯಬೇಕೆಂದು ಮಹಿಳಾ ಮೋರ್ಚಾ ಪೊಲೀಸ್ ಅ„ಕಾರಿಗಳನ್ನು ಒತ್ತಾಯಿಸಿದೆ.

ಈ ಮಧೈ ಬಿಜೆಪಿ ಮಹಿಳಾ ಮೋರ್ಚಾ ನಿಯೋಗ ನಾಪತ್ತೆಯಾದವರ ಬಲೆಕ್ಕಳ ಮನೆಗೆ ಬೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಬಿಜೆಪಿ ರಾಜ್ಯ ಉಪಾದ್ಯಕ್ಷೆ ಪ್ರಮಿಳಾ ಸಿ.ನಾಯಕ್, ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಶೈಲಜ ಭಟ್, ಜಿಲ್ಲಾ ಸಮಿತಿ ಅಧ್ಯಕ್ಷೆ ರತ್ನಾವತಿ, ಮಂಡಲ ಅಧ್ಯಕ್ಷೆ ಜನನಿ, ಕುಂಬ್ಡಾಜೆ ಪಂಚಾಯತು ಸಮಿತಿ ಕಾರ್ಯದರ್ಶಿ ಯಶೋದಾ ಮೊದಲಾದವರು ನಿಯೋಗದಲ್ಲಿದ್ದರು.

ಈ ತಂಡವು ನಾಪತ್ತೆಯಾದ ಪ್ರೇಮ, ರಮ್ಯರ ತಂದೆ ಭಟ್ಯ ನಾಯ್ಕ, ತಾಯಿ ಚಂದ್ರಾವತಿ ಹಾಗೂ ಮನೆಯವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
More in this category: « ತಂಡದಿಂದ ಬೋರ್‍ವೆಲ್ ಲಾರಿಗೆ ತಡೆ; ಮನೆಗೆ ಹಾನಿ ನೀರ್ಚಾಲು: ಕನ್ನಡ ಲೇಖಕರು, ಪ್ರಕಾಶಕರ ಸಮಾವೇಶ »
back to top