Menu

ಪೆರ್ಲ: 818ನೇ ಮದ್ಯವರ್ಜನ ಶಿಬಿರ ಉದ್ಘಾಟನೆ

  • Published in ಕೇರಳ
  • Read 19 times
  • Comments::DISQUS_COMMENTS
ಬದಿಯಡ್ಕ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂಬಳೆ, ಕಾಸರಗೋಡು ಹಾಗೂ ಮದ್ಯವರ್ಜನ ವ್ಯವಸ್ಥಾಪನ ಸಮಿತಿ ಪೆರ್ಲ, ವಲಯ ಸ್ವಸಹಾಯ ಸಂಘಗಳ ಒಕ್ಕೂಟ, ಜ್ಞಾನ ವಿಕಾಸ ಕೇಂದ್ರ ನವಜೀವನ ಸಮಿತಿಗಳ ಆಶ್ರಯದಲ್ಲಿ 818ನೇ ಮದ್ಯವರ್ಜನ ಶಿಬಿರಕ್ಕೆ ಪೆರ್ಲದ ಭಾರತೀ ಸದನದಲ್ಲಿ ಗುರುವಾರ ಚಾಲನೆ ನೀಡಲಾಯಿತು.
 
ಧ.ಗ್ರಾ. ಯೋಜನೆಯ ಪ್ರಗತಿನಿ„ ನಿರ್ದೇಶಕ ಸಂಪತ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಟಿ.ಪ್ರಸಾದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಪೊಲೀಸ್ ಠಾಣಾ„ಕಾರಿ ದಾಮೋದರನ್, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಮಂಜೇಶ್ವರ ಬ್ಲೋಕ್ ಪಂ.ಸದಸ್ಯ ರಾಮಕೃಷ್ಣ ರೈ ಕುದ್ವ, ಧ.ಗ್ರಾ. ಯೋಜನಾಧಿಕಾರಿ ಸಂಧ್ಯಾ ವಿ.ಶೆಟ್ಟಿ, ಶಂಕರ ಸೇವಾ ಸಮಿತಿಯ ನಾರಾಯಣ ಶಾಸ್ತ್ರಿ ಕೊಲ್ಲೆಂಕಾನ, ಡಾ.ಸ್ವಪ್ನಾ ಜೆ ಉಕ್ಕಿನಡ್ಕ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
 
ಶಿಬಿರಾಧಿಕಾರಿ ದೇವಿ ಪ್ರಸಾದ್ ಪ್ರಸ್ತಾವಿಕವಾಗಿ ಮಾತನಾಡಿದರು. ಮೈಸೂರು ವಲಯ ಮೇಲ್ವಿಚಾರಕ ರಮೇಶ್ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು. ಜನ ಜಾಗೃತಿಯ ಪೆರ್ಲ ವಲಯ ಅಧ್ಯಕ್ಷ ಬಿ.ಪಿ. ಶೇಣಿ ಸ್ವಾಗತಿಸಿ ಧ.ಗ್ರಾ. ಯೋಜನೆಯ ಮೇಲ್ವಿಚಾರಕ ಮೋಹನ್ ಕೆ. ವಂದಿಸಿದರು.
More in this category: « ಭ್ರಷ್ಟಾಚಾರವನ್ನು ಖಂಡಿಸಿ ಬದಿಯಡ್ಕದಲ್ಲಿ ಧರಣಿ ಬೈಕ್-ವ್ಯಾನ್ ಢಿಕ್ಕಿ : ಸವಾರನಿಗೆ ಗಾಯ »
back to top