Log in

ಉರ್ವಸ್ಟೋರ್ ಮಾರ್ಕೆಟ್‍ನಿಂದ ಕೋಟೆಕಣಿ ಪರಿಶಿಷ್ಟ ಜಾತಿ ಕಾಲೊನಿಗೆ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆ

ಮಂಗಳೂರು: ಶಾಸಕ ಜೆ. ಆರ್. ಲೋಬೊರವರು 25 ಲಕ್ಷ ವೆಚ್ಚದಲ್ಲಿ ಉರ್ವಸ್ಟೋರ್ ಮಾರ್ಕೆಟ್‍ನಿಂದ ಕೋಟೆಕಣಿ ಪರಿಶಿಷ್ಟ ಜಾತಿ ಕಾಲೊನಿಗೆ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆ ಅದಿತ್ಯವಾರ ನೆರವೆರಿಸಿದರು.
 
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೊನಿಗಳಿಗೆ ರಸ್ತೆ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ರಾಜ್ಯ ಸರಕಾರ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಪ್ರಸ್ತುತ ಸಾಲಿನಲ್ಲಿ ರೂ. 2.00 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಇದರಂತೆ ಪರಿಶಿಷ್ಟ ಜಾತಿಯ ಕಾಲೊನಿಗಳ ಅಭಿವೃದ್ಧಿಗೆ ರೂ. 160.00 ಲಕ್ಷ ಹಾಗೂ ಪರಿಶಿಷ್ಟ ಪಂಗಡ ಕಾಲೊನಿಗಳ ಅಭಿವೃದ್ಧಿಗೆ ರೂ. 40.00 ಲಕ್ಷದ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ, ಶಾಸಕರು ತೀಳಿಸಿದರು.

ಈ ಸಂದರ್ಭದಲ್ಲಿ ಸ್ಥಳಿಯ ಕಾರ್ಪೋರೆಟರ್ ರಾಧಕೃಷ್ಣ, ಕಾಂಗ್ರೆಸ್ ಮುಂಖಡರಾದ ವಿಶ್ವಾಸ್ ದಾಸ್, ಬಿ.ಜಿ ಸುವರ್ಣ, ಟಿ.ಕೆ. ಸುಧೀರ್, ಅರುಣ್ ಕುವೆಲ್ಹೊ, ಗಣೇಶ್ ಕುಮಾರ್, ರಮಣಿ ಉಮೇಶ್, ಮಲ್ಲಿಕಾ, ರವಿ ಉರ್ವಾ, ದಿನೇಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
  • Read: 140 times

ಜೆಟ್ ಏರ್ ವೇಸ್ ವಿಮಾನದಲ್ಲಿ 60 ಲ.ರೂ ಬೆಲೆ ಬಾಳುವ ಚಿನ್ನ ಪತ್ತೆ

ಮಂಗಳೂರು: ಜೆಟ್ ಏರ್ ವೇಸ್ ವಿಮಾನದ ಶೌಚಾಲಯದಲ್ಲಿ ಸುಮಾರು 2.2 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು ಇದರ ಮೌಲ್ಯ ಸುಮಾರು 60 ಲಕ್ಷ ರೂಪಾಯಿ ಎನ್ನಲಾಗಿದೆ.
 
ದುಬೈನಿಂದ ಬಂದಿದ್ದ ಈ ವಿಮಾನದಲ್ಲಿ ಚಿನ್ನಸಾಗಿಸಲಾಗಿತ್ತು. ಎರಡು ಪೊಟ್ಟಣಗಳಲ್ಲಿ 22 ಚಿನ್ನದ ಬಿಲ್ಲೆಗಳಿದ್ದವು. ಪ್ರತಿಯೊಂದು ಬಿಲ್ಲೆಯೂ ತಲಾ 100 ಗ್ರಾಂ ತೂಗುತ್ತಿತು. ಈ ಬಗ್ಗೆ ತನಿಖೆ ನಡೆದಿದೆ.
  • Read: 108 times

ಮಂಗಳೂರಿನಲ್ಲಿ ಏರ್‍ಟೆಲ್ 4ಜಿ ಸೇವೆ ಆರಂಭ

• ಬೆಂಗಳೂರಿನ ನಂತರ ಇದೇ ಮೊದಲ ಬಾರಿಗೆ ಕರ್ನಾಟಕದ ಮಂಗಳೂರಿನಲ್ಲಿ ಏರ್‍ಟೆಲ್ ಗ್ರಾಹಕರಿಗೆ ಅತಿ ವೇಗದ ಇಂಟರ್‍ನೆಟ್ 4ಜಿ ಅನುಭವ ಪಡೆಯುವ ಅವಕಾಶ.
• 4ಜಿ ರೆಡಿ ಸಾಧನಗಳನ್ನು ಹೊಂದಿರುವ ಮಂಗಳೂರಿನ ಏರ್‍ಟೆಲ್ ಗ್ರಾಹಕರು ಆನ್‍ಲೈನ್‍ನಲ್ಲಿ ರಜಿಸ್ಟರ್ ಮಾಡಿಕೊಂಡು ತಮ್ಮ ಮನೆಗೇ ಏರ್‍ಟೆಲ್ 4ಜಿ ಸಿಮ್ ತರಿಸಿಕೊಳ್ಳಬಹುದು ಅಥವಾ ಸಮೀಪದ ಏರ್‍ಟೆಲ್ ಸ್ಟೋರ್‍ಗೆ ತೆರಳಬಹುದು.
 
ಮಂಗಳೂರು, ಜೂನ್ 6: ಏಷ್ಯಾ ಹಾಗೂ ಆಫ್ರಿಕಾ ಸೇರಿದಂತೆ 20 ದೇಶಗಳಲ್ಲಿ ಅಸ್ತಿತ್ವದಲ್ಲಿರುವ ಜಾಗತಿಕ ಪ್ರಮುಖ ಟೆಲಿಕಮ್ಯುನಿಕೇಶನ್ಸ್ ಕಂಪನಿ ಭಾರ್ತಿ ಏರ್‍ಟೆಲ್ ಲಿಮಿಟೆಡ್ (ಭಾರ್ತಿ ಏರ್‍ಟೆಲ್) ಇಂದು ಮಂಗಳೂರಿನಲ್ಲಿ 4ಜಿ ಸೇವೆಯನ್ನು ಬಿಡುಗಡೆಗೊಳಿಸಿರುವುದಾಗಿ ಪ್ರಕಟಿಸಿದೆ. ಈ ಮೂಲಕ ನಗರದಲ್ಲಿನ ಏರ್‍ಟೆಲ್ ಗ್ರಾಹಕರು 4ಜಿ ಎಲ್‍ಟಿಇ ಟೆಕ್ನಾಲಜಿ ಹಾಗೂ ಅತ್ಯಂತ ಸುಧಾರಿತ ಇಂಟರ್‍ನೆಟ್ ಅನುಭವವನ್ನು ಪಡೆಯಬಹುದು. ಮಂಗಳೂರಿನಲ್ಲಿರುವ ಏರ್‍ಟೆಲ್ ಗ್ರಾಹಕರು ಕಾಂಪ್ಲಿಮೆಂಟರಿಯಾಗಿ 3ಜಿ ದರದಲ್ಲಿ 4ಜಿಗೆ ಅಪ್‍ಗ್ರೇಡ್ ಮಾಡಿಕೊಳ್ಳಬಹುದು ಮತ್ತು 4ಜಿ ವೇಗದಲ್ಲಿ ಅದ್ಭುತ ಅನುಭವವನ್ನು ಪಡೆಯುವವರಲ್ಲಿ ಮೊದಲಿಗರಾಗಬಹುದು.

ಏರ್‍ಟೆಲ್ 4ಜಿ ಅತಿ ವೇಗದ ಇಂಟರ್‍ನೆಟ್ ಅನ್ನು ಒದಗಿಸುತ್ತಿದ್ದು, ಹೈ ಡೆಪಿsನಿಶನ್ ವಿಡಿಯೋವನ್ನು ಬಫ್‍ರಿಂಗ್ ಇಲ್ಲದೇ ನೋಡಬಹುದು, 30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ 10 ಸಿನಿಮಗಳನ್ನು ಡೌನ್‍ಲೋಡ್ ಮಾಡಬಹುದು, ಐದಕ್ಕಿಂತ ಕಡಿಮೆ ಸಮಯದಲ್ಲಿ ಇಡೀ ಫೋಟೋ ಅಲ್ಬಂಗಳನ್ನು ಅಪ್‍ಲೋಡ್ ಮಾಡಬಹುದು (ಉದಾ., ಪ್ರತಿ ಸೆಕೆಂಡಿಗೆ ಎರಡು ಹೈ ರೆಸೊಲ್ಯುಶನ್ ಫೋಟೊ ಅಪ್‍ಲೋಡ್ ಮಾಡುವುದು) ಗುಣಮಟ್ಟದಲ್ಲಿ ರಾಜಿ ಇಲ್ಲದೇ ಹಲವು ಸಾಧನಗಳನ್ನು ಸಂಪರ್ಕಿಸುವುದೂ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯಲು ಗ್ರಾಹಕರಿಗೆ ಇದು ಅವಕಾಶ ಮಾಡಿಕೊಡುತ್ತದೆ.

ಉದ್ಘಾಟನೆ ವೇಳೆ ಮಾತನಾಡಿದ ಭಾರ್ತಿ ಏರ್‍ಟೆಲ್ ಲಿಮಿಟೆಡ್ ಕರ್ನಾಟಕ ಸಿಇಒ ಸಿ.ಸುರೇಂದ್ರನ್, ಅಂದಾಜಿನ ಪ್ರಕಾರ, ಮುಂದಿನ ಮೂರು ವರ್ಷಗಳಲ್ಲಿ ಸುಮಾರು ಅರ್ಧದಷ್ಟು ಭಾರತೀಯರು ಆನ್‍ಲೈನ್‍ನಲ್ಲಿ ಇರುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಭಾರತೀಯರು ಇಂಟರ್‍ನೆಟ್ ಅನ್ನು ಪಡೆಯುತ್ತಿದ್ದಂತೆಯೆ, ಮಂಗಳೂರಿನಲ್ಲಿ ನಮ್ಮ ಗ್ರಾಹಕರಿಗೆ ಅತ್ಯಂತ ವೇಗದ ಏರ್‍ಟೆಲ್ 4ಜಿ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಉದ್ಘಾಟನೆ ನೆರವೇರಿಸಲಾಗಿದೆ. ನಮಗೆ ಗ್ರಾಹಕರೇ ನಮ್ಮ ಎಲ್ಲ ಕಾರ್ಯಗಳ ಕೇಂದ್ರಬಿಂದುವಾಗಿದ್ದಾರೆ ಮತ್ತು ಅವರಿಗೆ ಅತ್ಯುತ್ತಮ ಗುಣಮಟ್ಟದ ಸೇವೆಯನ್ನು ನೀಡುವುದೇ ಪ್ರಥಮ ಆದ್ಯತೆಯಾಗಿರುತ್ತದೆ. ಬೆಂಗಳೂರಿನಲ್ಲಿ ಏರ್‍ಟೆಲ್ 4ಜಿ ಸೇವೆಗೆ ಅಮೋಘ ಪ್ರತಿಕ್ರಿಯೆಯನ್ನು ಅನುಭವಿಸಿದ ನಂತರದಲ್ಲಿ, 4ಜಿ ಸೇವೆಯನ್ನು ಅನುಭವಿಸಲು ಕರ್ನಾಟಕದಲ್ಲಿ ಮಂಗಳೂರಿನ ಗ್ರಾಹಕರಿಗೆ ದ್ವಿತೀಯ ಅವಕಾಶವನ್ನು ನೀಡುತ್ತಿದ್ದೇವೆ. ಈಗ 3ಜಿ ದರದಲ್ಲಿ 4ಜಿ ಸೇವೆಯನ್ನು ಕಾಂಪ್ಲಿಮೆಂಟರಿಯಾಗಿ ಅಪ್‍ಗ್ರೇಡ್ ಮಾಡಿಕೊಳ್ಳಬಹುದಾಗಿದೆ. ಮಂಗಳೂರಿನಲ್ಲಿ ಜಾಗತಿಕ ಮಟ್ಟದ 4ಜಿ ನೈಜ ಅನುಭವವನ್ನು ನೀಡುವ ನಿಟ್ಟಿನಲ್ಲಿ ನಾವು ಅತ್ಯಂತ ಉತ್ಸುಕರಾಗಿದ್ದೇವೆ.

4ಜಿಗೆ ಕಾಂಪ್ಲಿಮೆಂಟರಿ ಅಪ್‍ಗ್ರೇಡ್ ಲಾಭ ಪಡೆಯಲು, ಮಂಗಳೂರಿನಲ್ಲಿ ಸಮೀಪದಲ್ಲಿರುವ ಯಾವುದೇ ಏರ್‍ಟೆಲ್ ಸ್ಟೋರ್‍ಗಳಿಗೆ ಏರ್‍ಟೆಲ್ ರೆಡಿ ಸಾಧನವನ್ನು ಹೊಂದಿರುವ ಪ್ರಸ್ತುತ ಏರ್‍ಟೆಲ್ ಗ್ರಾಹಕರು ತೆರಳಿ, ಹಿಂದೆಂದೂ ಕಾಣದ ಮೊಬೈಲ್ಇಂಟರ್‍ನೆಟ್ ಅನುಭವವನ್ನು ಪಡೆಯಲು 4ಜಿ ಸಿಮ್ಗೆ ಅಪ್‍ಗ್ರೇಡ್ ಮಾಡಿಕೊಳ್ಳಬಹುದು. 

ಏರ್‍ಟೆಲ್ ವಿವಿಧ ರೀತಿಯ ವೈರ್‍ಲೆಸ್ 4ಜಿ ಸಾಧನಗಳಾದ ಏರ್‍ಟೆಲ್ 4ಜಿ ಡಾಂಗಲ್, ಏರ್‍ಟೆಲ್ ವಿಂಗಲ್, ಮೈಫೈ (ಹಾಟ್‍ಸ್ಪಾಟ್), ಇಂಡೋರ್ ಸಿಪಿಇ (ರೂಟರ್) ಮತ್ತು ಔಟ್‍ಡೋರ್ ಸಿಪಿಇ (ರೂಟರ್)ಗಳನ್ನು ನೀಡುತ್ತಿದ್ದು, 4ಜಿ ನೆಟ್‍ವರ್ಕ್‍ಗಳ ಅನುಭವವನ್ನು ಮೊಬೈಲ್‍ಗಳಲ್ಲಿ ಪಡೆಯಲು ಮತ್ತು ಸೂಪರ್‍ಫಾಸ್ಟ್ ಇಂಟರ್‍ನೆಟ್ ಅನ್ನು ಪಡೆಯಲು ಇದು ಅನುವು ಮಾಡುತ್ತದೆ.

ಗ್ರಾಹಕರಿಗೆ 4ಜಿ ಮೊಬೈಲ್ ಸಾಧನಗಳ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಸದ್ಯ ಕ್ಷೀಣಗತಿಯಲ್ಲಿರುವ 4ಜಿ ಸಾಧನಗಳ ವ್ಯವಸ್ಥೆಯನ್ನು ಸುಧಾರಿಸಲು ಫ್ಲಿಪ್‍ಕಾರ್ಟ್, ಮೊಟೊರೊಲಾ ಮತ್ತು ಸ್ಯಾಮïಸಂಗ್ ಸೇರಿದಂತೆ ಹಲವು ಶ್ರೇಣಿಯ ಸಾಧನಗಳ ಜತೆ ಏರ್‍ಟೆಲ್ ಸಹಭಾಗಿತ್ವ ಹೊಂದಿದೆ.

ಇದರ ಅಂಗವಾಗಿ, ಫ್ಲಿಪ್‍ಕಾರ್ಟ್‍ನಿಂದ ಖರೀದಿಸಿದ ಮೊಟೊ ಇ 4ಜಿಯನ್ನು ಖರೀದಿಸಿದರೆ 500 ರೂ. ಕ್ಯಾಶ್‍ಬ್ಯಾಕ್ ಕೊಡುಗೆಯನ್ನು ಏರ್‍ಟೆಲ್ ಶೀಘ್ರವೇ ನೀಡಲಿದೆ. ಸದ್ಯ ಸ್ಯಾಮ್ಸಂಗ್ ಇಂಡಿಯಾ ರಿಟೇಲ್ ಸ್ಟೋರ್‍ಗಳು ಸುಲಭವಾಗಿ 4ಜಿ ಸ್ಮಾರ್ಟ್_ ಫೋನ್‍ಗಳಿಗೆ ಏರ್‍ಟೆಲ್ 4ಜಿ ಸಿಮ್ ಸ್ವ್ಯಾಪ್ ಮಾಡುವ ಸೌಲಭ್ಯವನ್ನು ಕಲ್ಪಿಸಿದೆ. ಮುಂದಿನ ಕೆಲವು ದಿನಗಳಲ್ಲಿ, ಭಾರತದಲ್ಲಿ ಲಭ್ಯವಿರುವ ಸ್ಯಾಮ್ಸಂಗ್ 4ಜಿ ಹ್ಯಾಂಡ್‍ಸೆಟ್‍ಗಳ ಜತೆ ಏರ್‍ಟೆಲ್ 4ಜಿ ಸಿಮ್ಗಳನ್ನೂ ಸ್ಯಾಮ್ಸಂಗ್ ನೀಡಲಿದೆ. ಏರ್‍ಟೆಲ್ 4ಜಿ ಡಬಲ್ ಡಾಟಾ ಕೊಡುಗೆಯು ಸದ್ಯ ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್6, ಗ್ಯಾಲಾಕ್ಸಿ ಎಸ್6 ಎಡ್ಜ್, ಗ್ಯಾಲಾಕ್ಸಿ ಎ7 ಮತ್ತು ಗ್ಯಾಲಾಕ್ಸಿ ಎ5 ಮೊಬೈಲ್ ಸಾಧನಗಳಿಗೆ ಲಭ್ಯವಿದೆ. ಏರ್‍ಟೆಲ್ 4ಜಿ ಮಾರ್ಕೆಟ್‍ಗಳಲ್ಲಿ ಕೋರ್ ಪ್ರೈಮ 4ಜಿ ಮೊಬೈಲ್‍ಗಳನ್ನು ಬಿಡುಗಡೆ ಮಾಡಲು ಸ್ಯಾಮ್ಸಂಗ್ ಉದ್ದೇಶಿಸಿದೆ.
 
2012ರ ಏಪ್ರಿಲ್‍ನಲ್ಲಿ ಕೋಲ್ಕತದಲ್ಲಿ ಏರ್‍ಟೆಲ್ ಭಾರತದಲ್ಲೇ ಮೊದಲ ಬಾರಿಗೆ 4ಜಿ ಸೇವೆಯನ್ನು ಪರಿಚಯಿಸಿತು. ಸದ್ಯ ಏರ್‍ಟೆಲ್‍ನ 4ಜಿ ಸೇವೆಯು ಭಾರತದಲ್ಲಿ ಚೆನ್ನೈ, ಬೆಂಗಳೂರು, ಪುಣೆ, ಚಂಡೀಗಢ ಮತ್ತು ಅಮೃತಸರದಲ್ಲಿ ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಭೇಟಿ ಮಾಡಿwww.airtel.in/4g.

ಭಾರ್ತಿ ಏರ್‍ಟೆಲ್ ಬಗ್ಗೆ
ಏಷ್ಯಾ ಮತ್ತು ಆಫ್ರಿಕಾ  ಸೇರಿದಂತೆ 20 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರ್ತಿ ಏರ್‍ಟೆಲ್ ಲಿಮಿಟೆಡ್ ಜಾಗತಿಕವಾಗಿ ಪ್ರಮುಖವಾದ ಟೆಲಿಕಮ್ಯುನಿಕೇಶನ್ಸ್ ಕಂಪನಿಯಾಗಿದೆ. ಭಾರತದ ನವದೆಹಲಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಕಂಪನಿಯು ಚಂದಾದಾರರ ಆಧಾರದಲ್ಲಿ ಜಾಗತಿಕವಾಗಿ ನಾಲ್ಕನೇ ಅತಿ ದೊಡ್ಡ ಮೊಬೈಲ್ ಸೇವಾ ಕಂಪನಿಯಾಗಿದೆ. ಭಾರತದಲ್ಲಿ, ಕಂಪನಿಯು 2ಜಿ, 3ಜಿ ಮತ್ತು 4ಜಿ ವೈರ್‍ಲೆಸ್ ಸೇವೆಗಳು, ಮೊಬೈಲ್ ಕಾಮರ್ಸ್, ಪಿsಕ್ಸೆಡ್ ಲೈನ್ ಸೇವೆಗಳು, ಹೈ ಸ್ಪೀಡ್ ಡಿಎಸ್‍ಎಲ್ ಬ್ರಾಡ್‍ಬ್ಯಾಂಡ್, ಐಪಿಟಿವಿ, ಡಿಟಿಎಚ್‍ಗಳು ಹಾಗೂ ಕ್ಯಾರಿಯರ್‍ಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದೂರ ಸಂಪರ್ಕ ಸೇವೆಗಳನ್ನು ನೀಡುತ್ತಿದೆ. ಇನ್ನಿತರ ದೇಶಗಳಲ್ಲಿ 2ಜಿ, 3ಜಿ ಮತ್ತು 4ಜಿ ವೈರ್‍ಲೆಸ್ ಸೇವೆ ಹಾಗೂ ಮೊಬೈಲ್ ಕಾಮರ್ಸ್ ಸೇವೆಯನ್ನು ಒದಗಿಸುತ್ತಿದೆ. 2015ರ ಏಪ್ರಿಲ್ ಅಂತ್ಯದೊಳಗೆ ಒಟ್ಟು 326 ಮಿಲಿಯನ್ ಗ್ರಾಹಕರುಗಳನ್ನು ಹೊಂದಲಿದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಭೇಟಿ ನೀಡಿ,www.airtel.com
  • Read: 112 times

ಸಿಇಟಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶಿಬಿರ

ಮಂಗಳೂರು: ಕೆರಿಯರ್ ಗೈಡೆನ್ಸ್ ಎಂಡ್ ಇನ್ಫೊರ್ಮೇಶನ್ ಸೆಂಟರ್ ಸಂಸ್ಥೆಯು ಸಿಇಟಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕೌನ್ಸಿಲಿಂಗ್ ಪೂರ್ವ ಉಚಿತ ಮಾರ್ಗದರ್ಶನ ಶಿಬಿರವು ನಿನ್ನೆ ನಗರದ ಬದ್ರಿಯಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್‍ನ ಸ್ಥಾಪಕಾಧ್ಯಕ್ಷ ಅಬ್ದುಲ್ ರಹೀಮ್ ಟೀಕೆ ಶಿಬಿರ ಉದ್ಘಾಟಿಸಿದರು. ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್, ಬದ್ರಿಯಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಇಸ್ಮಾಯಿಲ್ ಎನ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  
  
 
 
 
 
     
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕೆರಿಯರ್ ಗೈಡೆನ್ಸ್ ಎಂಡ್ ಇನ್ಫೊರ್ಮೇಶನ್ ಸೆಂಟರ್‍ನ ಸ್ಥಾಪಕಾಧ್ಯಕ್ಷ ಉಮರ್ ಯು.ಹೆಚ್. ವಿದ್ಯಾರ್ಥಿಗಳಿಗೆ ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಉನಾನಿ, ಹೋಮಿಯೋಪಥಿ, ಯೋಗ - ನ್ಯಾಚುರಾಪಥಿ, ಬಿ ಫಾರ್ಮ, ಫಾರ್ಮ ಡಿ., ಹಾಗೂ ಬಿಇ, ಬಿಟೆಕ್, ಬಿಎಸ್ಸಿಗಳ ವಿವಿಧ ಕೋರ್ಸುಗಳಿಗೆ ನಡೆಯಲಿರುವ ಆನ್‍ಲೈನ್ ಸಿಇಟಿ ಕೌನ್ಸಿಲಿಂಗ್‍ನ ವಿಧಾನ, ದಾಖಲಾತಿ ಪರಿಶೀಲನೆಗೆ ಬೇಕಾಗಿರುವ ಅಗತ್ಯ ಕಾಗದಪತ್ರಗಳು, ಸೀಟುಗಳ ಆಯ್ಕೆ ಪ್ರಕಿೃಯೆ ಮತ್ತು ಇತರ ಪೂರಕ ಮಾಹಿತಿ ನೀಡಿದರು.
  • Read: 93 times

ಮಂಗಳೂರು ಮುಖ್ಯ ನ್ಯಾಯಾಲಯ ಸಂಕೀರ್ಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗೆ ಅನುದಾನ

ಮಂಗಳೂರು: ಮಂಗಳೂರು ನಗರಕ್ಕೆ ಅವಶ್ಯಕವಾಗಿರುವ ಮೂಲಭೂತ ಸೌಕರ್ಯವನ್ನು ಒದಗಿಸಿ, ನಗರದ ಸೌಂದರ್ಯದ ಜೊತೆಗೆ ನಗರವನ್ನು ಒಂದು ವ್ಯವಸ್ಥಿತ ರೀತಿಯಲ್ಲಿ ಅಭಿವೃದ್ದಿ ಪಡಿಸುವುದು ನನ್ನ ಮುಖ್ಯ ಉದ್ದೇಶ ಇದಕ್ಕಾಗಿ ರಾಜಕೀಯವಾಗಿ ಯೋಚಿಸದೆ ಅಭಿವೃದ್ದಿಯ ಕಡೆಗೆ ಗಮನ ನೀಡುತ್ತಿದ್ದೇನೆ ಎಂದು ಮಂಗಳೂರು ದಕ್ಷಿಣ ವಲಯದ ಶಾಸಕ ಜೆ. ಆರ್. ಲೋಬೊ ಹೇಳಿದರು.  
  
ಅವರು ಮಂಗಳೂರು ಮುಖ್ಯ ನ್ಯಾಯಾಲಯ ಸಂಕೀರ್ಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗೆ ಅನುದಾನ ಬಿಡುಗಡೆಗೊಳಿಸಿ ಮಾತನಾಡಿದರು.

ಲೋಕೋಪಯೋಗಿ ಇಲಾಖೆಯಿಂದ ಪ್ರತೀ ಶಾಸಕರ ಕ್ಷೇತ್ರಕ್ಕೆ ನೀಡುವ 11 ಕೋಟಿ ರೂ ಅನುವಾನವನ್ನು ಪೂರ್ಣವಾಗಿ ಈ ರಸ್ತೆ ಸಂಪರ್ಕವನ್ನು ಮಾಡಲು ಮೀಸಲಿಟ್ಟಿದ್ದೇನೆ. ರಾಜಕೀಯವಾಗಿ ನೋಡುವುದಾದರೆ ಇದೇ 11 ಕೋಟಿ ಅನುದಾನವನ್ನು ಬಳಸಿ ನಗರದ ವಿವಿದೆಡೆಯಲ್ಲಿ ಹಲವು ರಸ್ತೆಗಳನ್ನು ನಿರ್ಮಿಸಬಹುದಿತ್ತು ಮತ್ತು ಮತದಾರರಿಂದ ಮೆಚ್ಚುಗೆಯನ್ನೂ ಪಡೆಯಬಹುದಿತ್ತು, ಆದರೆ ನ್ಯಾಯಾಲಯ ಸಂಕೀರ್ಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಅಗತ್ಯತೆಯನ್ನು ಮನಗಂಡು ಸಂಪೂರ್ಣ ಅನುದಾನವನ್ನು ಈ ಉದ್ದೇಶಕ್ಕೆ ಮೀಸಲಿಟ್ಟಿದ್ದೇನೆ. ಎಂದರು
ಮಂಗಳೂರು ನಗರದಲ್ಲಿರುವ ಪ್ರಮುಖ ನ್ಯಾಯಾಲಯದ ಸಂಕೀರ್ಣದ ಉದ್ಘಾಟನೆಯು ಬಹಳ ಹಿಂದೆಯೇ ಆಗಬೇಕಿತ್ತು. ಆದರೆ ನ್ಯಾಯಾಲಯ ಸಂಕೀರ್ಣಕ್ಕೆ ಹೋಗಲು ಇರುವ ರಸ್ತೆಯು ಬಹಳ ಕಿರಿದಾಗಿರುವುದರಿಂದ ಈ ಉದ್ಘಾಟನೆಯನ್ನು ಮುಂದೂಡಲಾಗಿತ್ತು.

ರಸ್ತೆಯ ಉದ್ದ 400 ಮೀಟರ್ ಅಷ್ಟೇ ಇದ್ದರೂ ಇಲ್ಲಿ ಕಾಮಗಾರಿ ಮಾಡಲು ಅನೇಕ ತಾಂತ್ರಿಕ ಅಡಚಣೆಗಳು ಇವೆ, ಇದೊಂದು ಗುಡ್ಡ ಪ್ರದೇಶವಾದರಿಂದ ವಿಶೇಷ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಬೇಕು, ಇದಕ್ಕಾಗಿ ಈಗಾಗಲೇ ವಿನ್ಯಾಸವನ್ನು ನಿರ್ಮಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಹಾಗೂ ಇಂಡಿಯನ್ ಇನ್ಟಿಟ್ಯೂಟ್ ಆಫ್ ಸಾಯನ್ಸ್‍ನ ಪರಿಣಿತರ ಸಲಹೆಗಳನ್ನು ಪಡೆಯಲಾಗುವುದು ಆದ್ದರಿಂದ ಈ ಯೋಜನೆಗಾಗಿ ಅಧಿಕ ಪ್ರಮಾಣದ ಅನುದಾನವನ್ನು ಮೀಸಲಿಡಲಾಗಿದೆ ಎಂದರು.

ಈಗಿರುವ ರಸ್ತೆಯು ಬಹಳ ಕಿರಿದಾಗಿದ್ದು, ಇದನ್ನು ಕಾಂಕ್ರಿಟ್ ಚತುಷ್ಪತ ರಸ್ತೆಯಾಗಿ ನಿರ್ಮಿಸಲಾಗುವುದು. ಗುಡ್ಡ ಪ್ರದೇಶವಾಗಿರುವುದರಿಂದ ಇಲ್ಲಿ ಮಣ್ಣ ಕುಸಿಯುವ ಭೀತಿ ಇದೆ, ಅದಕ್ಕಾಗಿ ನೈಲಿಂಗ್ ಮಾಡಲಾಗುವುದು. ಅನುದಾನವನ್ನು ಕೇವಲ ರಸ್ತೆಗಾಗಿ ಬಳಸದೆ ದಾರಿದೀಪದಂತಹ ಇತರ ಮೂಲ ಸೌಕರ್ಯಗಳನ್ನೂ ಇಲ್ಲಿ ನಿರ್ಮಿಸಲಾಗುವುದು. ಕಾಮಗಾರಿಯನ್ನು ಇನ್ನು ಒಂದುವರೆ ವರ್ಷದಲ್ಲಿ ಮುಗಿಸಲು ಉದ್ದೇಶಿಸಲಾಗಿದೆ.
ಈ ಬಗ್ಗೆ ಲೋಕೋಪಯೋಗಿ ಇಲಾಖೆ ಹಾಗೂ ಸಚಿವರಲ್ಲಿ ಪ್ರಸ್ತಾಪಿಸಿದಾಗ ತಕ್ಷಣ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ, ಎಂದು ಹೇಳಿದರು.

ನೇತ್ರಾವತಿ ನದಿಯ ಬಳಿ ಕಣ್ಣೂರಿ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಯ ನಿರ್ಮಾಣ
ನಗರದ ವ್ಯವಸ್ಥಿತ ಅಭಿವೃದ್ದಿಗಾಗಿ ಭವಿಷ್ಯದಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ನೇತ್ರಾವತಿ ನದಿಯ ಬಳಿ ಕಣ್ಣೂರಿನ ಮೂಲಕ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಸುಮಾರ್ 5ಕಿ.ಮಿ ಬೈಪಾಸ್ ರಸ್ತೆಯ ನಿರ್ಮಿಸಲು, ಸಚಿವರಲ್ಲಿ ಮನವಿ ಮಾಡಿದರು. ಇದರಿಂದಾಗಿ, ಬೆಂಗಳೂರಿಗೆ ಸುಲಭ ಸಂಪರ್ಕ, ಕಂಕನಾಡಿ ರೈಲು ನಿರ್ಮಾಣದ ಅಭಿವೃದ್ದಿ ಹಾಗೂ ನಗರದಲ್ಲಿ ವಾಹನದಟ್ಟಣೆಯನ್ನು ಕಡಿಮೆ ಮಾಡಲು ಅನುಕುಲವಾಗುತ್ತದೆ, ಎಂದು ತೀಳಿಸಿದರು.

ಈ ಮನವಿಗೆ ಸಕಾರತ್ಮಕವಾಗಿ ಸ್ಪಂದಿಸುತ್ತೇನೆ ಎಂದು ಲೋಕೊಪಯೋಗಿ ಸಚಿವ ಹೆಚ್.ಸಿ ಮಹಾದೇವಪ್ಪ ತೀಳಿಸಿದರು.
  • Read: 108 times

ಮಾಂಸ ವ್ಯಾಪಾರಸ್ಥರ ಸಂಘದಿಂದ ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

ಮಂಗಳೂರು: ಶಿಕ್ಷಣದಲ್ಲಿ ಡೋನೇಶನ್ ಹಾವಳಿಯ ಈ ದಿನಗಳಲ್ಲಿ ಬಡಞ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಮತ್ತು ಶಿಕ್ಷಣ ಪರಿಕರಗಳನ್ನು ನೀಡಿ ದ.ಕ. ಜಿಲ್ಲಾ ಮಾಂಸ ವ್ಯಾಪಾರಸ್ಥರ ಸಂಘದ ಕೆಲಸ ಶ್ಲಾಘನೀಯ ಎಂದು ಬಂದರ್ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟಕ್ ಶಾಂತಾರಾಮ್ ತಿಳಿಸಿದ್ದಾರೆ.   
  
  
   
  
  
  
  
  
ಜಮೀಯತುಲ್ ಸಅದ ಮಾಂಸ ವ್ಯಾಪಾರಸ್ಥರ ಸಂಘದ ವತಿಯಿಂದ ಕುದ್ರೋಳಿಯ ಏವನ್ ಬಾಗ್‍ನಲ್ಲಿ ಆಯೋಜಿಸಲಾಗಿದ್ದ ಉಚಿತ ಪುಸ್ತಕ ವಿತರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾಂಸ ವ್ಯಾಪಾರಸ್ಥರ ಸಂಘದ ರಾಜ್ಯಾಧ್ಯಕ್ಷ ಅಲಿಹಸನ್ ಮಾತನಾಡಿ ಸಂಘಟನೆಯ ವತಿಯಿಂದ ಈ ಬಾರಿ 2.6ಲಕ್ಷ ರೂ. ವೆಚ್ಚದಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಸಂಘಟನೆಯ ಅಧ್ಯಕ್ಷ ಜೆ. ಅಬ್ದುಲ್ ಖಾದರ್, ಪ್ರಮುಖರಾದ ಶಫುದ್ದೀನ್, ಅಬ್ದುಲ್ ರಹ್‍ಮಾನ್ ಉಪಸ್ಥಿತರಿದ್ದರು.
  • Read: 60 times

ಮಾಂಸ ವ್ಯಾಪಾರಸ್ಥರ ಸಂಘದಿಂದ ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

ಮಂಗಳೂರು: ಶಿಕ್ಷಣದಲ್ಲಿ ಡೋನೇಶನ್ ಹಾವಳಿಯ ಈ ದಿನಗಳಲ್ಲಿ ಬಡಞ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಮತ್ತು ಶಿಕ್ಷಣ ಪರಿಕರಗಳನ್ನು ನೀಡಿ ದ.ಕ. ಜಿಲ್ಲಾ ಮಾಂಸ ವ್ಯಾಪಾರಸ್ಥರ ಸಂಘದ ಕೆಲಸ ಶ್ಲಾಘನೀಯ ಎಂದು ಬಂದರ್ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟಕ್ ಶಾಂತಾರಾಮ್ ತಿಳಿಸಿದ್ದಾರೆ.   
  
  
   
  
  
  
  
  
ಜಮೀಯತುಲ್ ಸಅದ ಮಾಂಸ ವ್ಯಾಪಾರಸ್ಥರ ಸಂಘದ ವತಿಯಿಂದ ಕುದ್ರೋಳಿಯ ಏವನ್ ಬಾಗ್‍ನಲ್ಲಿ ಆಯೋಜಿಸಲಾಗಿದ್ದ ಉಚಿತ ಪುಸ್ತಕ ವಿತರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾಂಸ ವ್ಯಾಪಾರಸ್ಥರ ಸಂಘದ ರಾಜ್ಯಾಧ್ಯಕ್ಷ ಅಲಿಹಸನ್ ಮಾತನಾಡಿ ಸಂಘಟನೆಯ ವತಿಯಿಂದ ಈ ಬಾರಿ 2.6ಲಕ್ಷ ರೂ. ವೆಚ್ಚದಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಸಂಘಟನೆಯ ಅಧ್ಯಕ್ಷ ಜೆ. ಅಬ್ದುಲ್ ಖಾದರ್, ಪ್ರಮುಖರಾದ ಶಫುದ್ದೀನ್, ಅಬ್ದುಲ್ ರಹ್‍ಮಾನ್ ಉಪಸ್ಥಿತರಿದ್ದರು.
  • Read: 50 times

ಗ್ರಾ.ಪಂ ಫಲಿತಾಂಶ ಪ್ರಕಟ: ವಿಜಯಿಗಳಿಂದ ಸಂಭ್ರಮಾಚರಣೆ

ಮಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯ ಮತಎಣಿಕೆ ಭರದಿಂದ ಸಾಗಿದ್ದು, 181 ಕ್ಷೇತ್ರಗಳ ಮತಎಣಿಕೆ ಪೂರ್ಣಗೊಂಡಿದೆ. ಫಲಿತಾಂಶ ಪ್ರಕಟವಾದ ನಂತರ ಅಭ್ಯರ್ಥಿಗಳ ಬೇಂಬಲಿಗರು ಮತೆಣಿಕೆ ಕೇಂದ್ರದ ಮುಂದೆ ವಿಯೋತ್ಸವ ಆಚರಿಸಿದರು.
 
 
 
 
 
 
 
ಮನ್ನಬೆಟ್ಟು ವಾರ್ಡ್1 ರ ಮೀನಾಕ್ಷಿ, ಕಾಂಗ್ರೆಸಿನ ದೇವಿ ಪ್ರಸಾದ್ ಶೆಟ್ಟಿ, ಬೆಳಪು ವಾರ್ಡ್‍ನಿಂದ ಸುರೇಂದ್ರ ಜೋಕಟ್ಟೆ ಪಂಚಾಯತ್‍ನಿಂದ, ಬಿಜೆಪಿಯ ವಿದ್ಯಾ ಶೆಟ್ಟಿ ಬೊಳಿಯಾರ್ ವಾರ್ಡ್ 1 ರಿಂದ,ಸ್ವತಂತ್ರ ಅಭ್ಯರ್ಥಿ ಇಖ್ಬಾಲ್‍ರವರು ಕೊಣಾಜೆ ಯಿಂದ, ಜೆರಿ ಡಿಸೋಜ ರವರು ಬೆಳ್ಮಾಣ್ ಪಂಚಾಯತ್‍ನಿಂದ ವಿಜಯಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಶಿಬಜೆ ಮತ್ತು ಕಳಮಂಜದಲ್ಲಿ ಬಿಜೆಲಿಯ ಅಭ್ಯರ್ಥಿಗಳು ಗೆದ್ದಿದ್ದರೆ, ಹೊಸಂಗಡಿಯಲ್ಲಿ ಕಾಂಗ್ರೆಸಿನ ಎಲ್ಲಾ ಆಭ್ಯರ್ಥಿಗಳು ಗೆದ್ದಿದ್ದಾರೆ. ಪದವೆಟ್ಟುವಿನಲ್ಲಿ ಕಾಂಗ್ರೆಸಿನ 5 ಸೀಟುಗಳು ಗೆದ್ದಿದ್ದರೆ ಬಿಜೆಪಿಯ 4 ಸೀಟುಗಳು ಗೆದ್ದಿವೆ.
  • Read: 62 times

ನದಿಗೆ ಉರುಳಿದ ಬೈಕ್: ಸವಾರ ಸಾವು

ಮಂಗಳೂರು: ವ್ಯಕ್ತಿಯೊಬ್ಬರ ಶವವು ಮರವೂರು ಸೇತುವೆ ಬಳಿ ನದಿಯಲ್ಲಿ ಪತ್ತೆಯಾಗಿದ್ದು, ಇವರು ಬೈಕ್ ಸಮೇತ ಸೇತುವೆಯಿಂದ ಕೆಳಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.ಮೃತ ವ್ಯಕ್ತಿಯನ್ನು ಬಜ್ಪೆಯ ನೆಲ್ಲಿತೀರ್ಥ ನಿವಾಸಿಯಾಗಿರುವ ಲೋಕೇಶ್(28) ಎಂದು ಗುರುತಿಸಲಾಗಿದೆ.  
 
 
 
 
 
  
 
 
ವೃತ್ತಿಯಲ್ಲಿ ಟೈಲರಾಗಿರುವ ಲೋಕೇಶ್ ಜೂನ್ 4ರ ರಾತ್ರಿ ಬಜ್ಪೆಯಿಂದ ಮಂಗಳೂರಿನ ಕಡೆಗೆ ತಮ್ಮ ಬೈಕಲ್ಲಿ ಬರುತ್ತಿದ್ದಾಗ ಮರವೂರು ಸೇತುವೆ ಬಳಿ ನಿಯಂತ್ರಣ ಕಳೆದುಕೊಂಡು ನದಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

ಜೂನ್ 5 ರ ಬೆಳಿಗ್ಗೆ ಶವವು ನದಿ ದಡದಲ್ಲಿ ಪತ್ತೆಯಾಗಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗುರುವಾರ ಮಂಗಳೂರಿನಲ್ಲಿ ತೀವ್ರ ಮಳೆಯಾದ ಕಾರಣ ರಸ್ತೆಗಳು ಜಾರುತ್ತಿದ್ದು ಇದೇ ಕಾರಣದಿಂದಾಗಿ ಲೋಕೇಶ್ ಬೈಕ್ ಸಮೇತ ನದಿಗೆ ಬಿದ್ದಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.
  • Read: 59 times
Subscribe to this RSS feed