ಮಂಗಳೂರು

ಸಾಮಾಜಿಕ ಭದ್ರತ ಯೋಜನೆಗಳಿಗೆ ಚಾಲನೆ

  • Published in ಮಂಗಳೂರು
  • Read 43 times
  • Comments::DISQUS_COMMENTS
ಮಂಗಳೂರು: ಭಾರತದ ಪ್ರತೀ ಪ್ರಜೆಗೂ ಭದ್ರತೆ ಹಾಗೂ ಸುರಕ್ಷೆ ನೀಡುವ ಕಾಳಜಿಯನ್ನು ಕೇಂದ್ರ ಸರಕಾರ ಹೊಂದಿದ್ದು, ಈ ನಿಟ್ಟಿನಲ್ಲಿ ಮೂರು ಅತ್ಯಂತ ಪರಿಣಾಮಕಾರಿ ಸಾಮಾಜಿಕ ಭದ್ರತ ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
 
ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಕೋಲ್ಕತ್ತದಲ್ಲಿ ಶನಿವಾರ ಸಂಜೆ ಚಾಲನೆ ನೀಡುತ್ತಿದ್ದಂತೆ, ದ.ಕ. ಜಿಲ್ಲೆಯಲ್ಲಿ ಈ ಯೋಜನೆಗೆ ಮಂಗಳೂರಿನ ಕದ್ರಿ ರಸ್ತೆಯ ಸಿ.ವಿ. ನಾಯಕ್ ಹಾಲ್ನಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

, ನಮ್ಮದು ಜನಸಾಮಾನ್ಯರ ಪರವಾದ ಸರಕಾರ ಎಂಬುದನ್ನು ಈ ಮೂರು ಯೋಜನೆಗಳು ಸಾಬೀತುಪಡಿಸಲಿವೆ. ಭ್ರಷ್ಟಾಚಾರ ರಹಿತ ಸರಕಾರ, ಆಡಳಿತದಲ್ಲಿ ವೃತ್ತಿಪರತೆ ಹಾಗೂ ಕ್ರಿಯಾಶೀಲತೆಯನ್ನು ನರೇಂದ್ರ ಮೋದಿ ಆಡಳಿತ ಸಾಕಾರಗೊಳಿಸಿದೆ ಎಂದರು.

ಪ್ರಧಾನಮಂತ್ರಿ ಜನಧನ್ ಯೋಜನೆ ಮೂಲಕ ಕೆಲವೇ ತಿಂಗಳಿನಲ್ಲಿ ಕೋಟ್ಯಂತರ ಜನರು ಬ್ಯಾಂಕ್ ಖಾತೆ ತೆರೆಯುವಂತಾಗಿದೆ.. ಇದೇ ಆಶಯದಲ್ಲಿ ಮೂರು ಯಶಸ್ವೀ ಯೋಜನೆಗಳು ಇಂದಿನಿಂದ ಕಾರ್ಯರೂಪಕ್ಕೆ ಬರಲಿವೆ ಎಂದು ಅವರು ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಗಾಂಧೀಜಿಯ ಕನಸನ್ನು ಸಾಕ್ಷಾತ್ಕಾರಗೊಳಿಸಿದ್ದಾರೆ ಎಂದರು.
ವಿ. ಪರಿಷತ್ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್, ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಕಾರ್ಪೊರೇಷನ್ ಬ್ಯಾಂಕ್ನ ಇ.ಡಿ. ಬಿ.ಕೆ. ಶ್ರೀವಾತ್ಸವ, ಲೀಡ್ಬ್ಯಾಂಕ್ ಕ್ಷೇತ್ರ ಪ್ರಧಾನ ವ್ಯವಸ್ಥಾಪಕ ಕೆ.ಟಿ. ರೈ, ಜಿ.ಪಂ. ಸಿಇಒ ಶ್ರೀವಿದ್ಯಾ, ಮನಪಾ ಆಯುಕ್ತೆ ಹೆಪ್ಸಿಭಾ ರಾಣಿ ಕೊರ್ಲಪಾಟಿ ಮೊದಲಾದವರು ಉಪಸ್ಥಿತರಿದ್ದರು.

ಯುಕೋ ಬ್ಯಾಂಕ್ ಅಧ್ಯಕ್ಷ ಹಾಗೂ ಕೇಂದ್ರ ವಿತ್ತ ಸಚಿವಾಲಯದ ಪ್ರತಿನಿಧಿ ಅರುಣ್ ಕೌಲ್ ಸ್ವಾಗತಿಸಿದರು. ಕಾರ್ಪ್ ಬ್ಯಾಂಕ್ನ ಎಜಿಎಂ ಡುಂಡಿರಾಜ್ ಹಾಗೂ ಉಷಾ ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
More in this category: « ಚೌಡೇಶ್ವರಿದೇವಿ ದೇವಸ್ಥಾನದ ಸಮುದಾಯ ಭವನ 10 ಲಕ್ಷ ರೂಪಾಯಿ ಭರವಸೆ: ಜೆ. ಆರ್. ಲೋಬೊ ಪಡೀಲ್ ಬಜಾಲ್ ಕೆಳ ಸೇತುವೆ ಯೋಜನೆ ಜೂನ್ ಗೆ ಪೂರ್ಣ: ಡಿವಿಎಸ್ »
Tweet