ಮಂಗಳೂರು

ಪಡೀಲ್ ಬಜಾಲ್ ಕೆಳ ಸೇತುವೆ ಯೋಜನೆ ಜೂನ್ ಗೆ ಪೂರ್ಣ: ಡಿವಿಎಸ್

  • Published in ಮಂಗಳೂರು
  • Read 37 times
  • Comments::DISQUS_COMMENTS
ಮಂಗಳೂರು: ಪಡೀಲ್ ಬಜಾಲ್ ರಸ್ತೆ ನಡುವಿನ ರೈಲ್ವೆ ಕ್ರಾಸಿಂಗ್ನಲ್ಲಿ ಕೆಳ ಸೇತುವೆ ಯೋಜನೆಯೂ ಜೂನ್ ಅಂತ್ಯದೊಳಗೆ ಸಿದ್ದವಾಗಲಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ ಸದಾನಂದ ಗೌಡ ಹೇಳಿದರು.
 
ಬಜಾಲ್ ಕೆಳ ಸೇತುವೆ ನಿರ್ಮಾಣ ಯೋಜನೆಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು ಹಲವು ವರ್ಷಗಳಿಂದ ನೆನೆಗುಂದಿಗೆ ಬಿದ್ದಿದ್ದ ಈ ಯೋಜನೆಯನ್ನು ಈ ಬಾರಿ ಪೂರ್ಣಗೊಳಿಸಲು ನಾವೆಲ್ಲಾ ಉತ್ಸುಕರಾಗಿದ್ದೇವೆ. ರೈಲ್ವೇ ಅಧಿಕಾರಿಗಳು ಹಾಗೂ ಪಾಲಿಕೆಯವರು ಜಂಟಿಯಾಗಿ ಈ ಕೆಲಸದಲ್ಲಿ ಕೈ ಜೋಡಿಸಿದ್ದಾರೆ. ಮಧ್ಯದಲ್ಲೇ ಹಣದ ಅಡಚಣೆಯೂ ಯೋಜನೆಯು ಮಂದಗತಿಯಲ್ಲಿ ಸಾಗಲು ಕಾರಣವಾಯಿತು. ಸೇತುವೆಯ ಬಳಿ ನೀರು ಶೇಖರಣೆಯಾಗುತ್ತಿರುವುದು ನಮ್ಮ ಗಮನಕ್ಕೂ ಬಂದಿದೆ. ತಾತ್ಕಾಲಿಕವಾಗಿ ರೈಲ್ವೇ ಅಧಿಕಾರಿಗಳು ಅದಕ್ಕೆ ಪರಿಹಾರ ಕಂಡುಕೊಳ್ಳುತ್ತಾರೆ ಮಳೆಗಾಲದ ಬಳಿಕ ಶಾಶ್ವತ ಪರಿಹಾರ ಮಾಡಲಾಗುವುದು ಎಂದರು.
 
ಬಿ.ಸಿ. ರೋಡ್ನಿಂದ ಚಾರ್ಮಾಡಿ ತನಕದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರಕಾರ 22.5 ಕೋಟಿ ರೂ. ಮತ್ತು ಬಿ.ಸಿ.ರೋಡ್ನಿಂದ ಮಾ ಣಿವರೆಗಿನ ರಸ್ತೆ ವಿಸ್ತರಣೆಗೆ ಏಳು ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷ ಅಡ್ಡಹೊಳೆಯಿಂದ ಮಾಣಿ ತನಕ ರಸ್ತೆ ವಿಸ್ತರಣೆ ಮಾಡಲಾಗಿದೆ ಎಂದರು.
 
ಮೇಕೆದಾಟು ಯೋಜನೆಯ ವಿಷಯದಲ್ಲಿ ತಮಿಳುನಾಡು ಅನಾವಶ್ಯಕವಾಗಿ ಹಸ್ತಕ್ಷೇಪ ಮಾಡುತ್ತಿದೆ. ನಮ್ಮ ನೀರು ನಮ್ಮ ಯೋಜನೆ ಅದರ ಬಗ್ಗೆ ಮಾತನಾಡುವ ಅಧಿಕಾರ ತಮಿಳುನಾಡಿಗಿಲ್ಲ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೂ ಲಾಭವಿದೆ. ಕಾವೇರಿ ನೀರಿನೊಂದಿಗೆ ಈ ಯೋಜನೆಯಿಂದ ಲಭ್ಯವಾಗುವ ನೀರನ್ನು ಅವರಿಗೆ ಬಿಡುತ್ತಿದ್ದೆವು. ಕಾವೇರಿ ನೀರಿನಲ್ಲಿ ಮಾಡಿದ ರಾಜಕೀಯವನ್ನೇ ಇಲ್ಲೂ ಮಾಡುತ್ತಿದ್ದಾರೆ ಎಂದರು.
 
ಸಂಸದ ನಳಿನ್ ಕುಮಾರ್ ಕಟೀಲ್, ಪಾಲಿಕೆ ಆಯುಕ್ತೆ ಹೆಪ್ಸಿಬಾ ಕೋರ್ಲಪತಿ, ಕಾರ್ಪೊರೇಟರ್ಗಳಾದ ಸುಧೀರ್ ಶೆಟ್ಟಿ ಕಣ್ಣೂರು, ವಿಜಯ ಕುಮಾರ್ ಶೆಟ್ಟಿ,ಪಾಲ್ಘಾಟ್ ವಿಭಾಗ ರೈಲ್ವೆ ಮೆನೇಜರ್ ಪಿಯೂಶ್ ಅಗರ್ವಾಲ್, ಮನಪಾ ತಾಂತ್ರಿಕ ಸಲಹೆಗಾರ ಧರ್ಮರಾಜ್ ಮತ್ತಿತರರು ಇದ್ದರು.
More in this category: « ಸಾಮಾಜಿಕ ಭದ್ರತ ಯೋಜನೆಗಳಿಗೆ ಚಾಲನೆ ಮಂಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ನಾಲ್ವರ ಸೆರೆ »
Tweet