ಮಂಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ನಾಲ್ವರ ಸೆರೆ
- Published in ಮಂಗಳೂರು
- Read 40 times
- Comments::DISQUS_COMMENTS
ಮಂಗಳೂರು: ಅಲ್ಲಿ ಕ್ರಿಕೆಟ್ ಆಟ ಸಾಗುತ್ತಿದ್ದರೆ ಇಲ್ಲಿ ಇವರ ಸೋಲು ಗೆಲುವಿನ ಆಧಾರದಲ್ಲಿ ಬೆಟ್ಟಿಂಗ್ ದಂಧೆ. ಇಂಥ ಕ್ರಿಕೆಟ್ ಬೆಟ್ಟಿಂಗ್ನ್ನು ನಡೆಸುತ್ತಿದ್ದ 4 ಮಂದಿಯನ್ನು ಮಂಗಳೂರು ಸಿ.ಸಿ.ಬಿ ಪೊಲೀಸರು ಬಂಧಿಸಿ 4,90,000 ರೂ. ನಗದು ಸಹಿತ ಒಟ್ಟು 21,20,000 ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಜಪ್ಪು ಪಿ.ಎಲ್. ಕಂಪೌಂಡಿನ ಶ್ರೀಜೀತ್ ಶೆಟ್ಟಿ, (27), ಪಾಂಡೇಶ್ವರ ಶಿವನಗರದ ಪ್ರಜೀಶ್ (27), ಎಡಪದವು ಗರೋಡಿ ಬಳಿಯ ಪ್ರಶಾಂತ್ (33) ಮತ್ತು ಆಕಾಶ ಭವನ ಬಳಿಯ ಆನಂದನಗರದ ರಾಜೇಶ್ (32) ಬೆಟ್ಟಿಂಘ್ ನಡೆಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಂಧಿಯಾದವರು.
ಜೈಲ್ ರಸ್ತೆಯಲ್ಲಿ ಶನಿವಾರ (ಮೇ 9 ರಂದು) ಸಂಜೆ ಕಾರಿನಲ್ಲಿ ಕುಳಿತು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಸೋಲು ಗೆಲುವಿನ ಬಗ್ಗೆ ಅಕ್ರಮ ಕ್ರಿಕೆಟ್ ಬೆಟ್ಟಿಂಗ್ನ್ನು ನಡೆಸುದ್ದಾರೆ ಎಂಬುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿ ಈ 4 ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 4,90,000 ರೂ. ನಗದು, 6 ಮೊಬೈಲ್ , ಲ್ಯಾಪ್ಟಾಪ್, ಎಂಟಿಎಸ್ ಡೊಂಗಲ್, ಕಾರು, ಬಜಾಜ್ ಪಲ್ಸರ್ ಬೈಕ್, ಬೆಟ್ಟಿಂಗ್ ವ್ಯವಹಾರಗಳ ಬಗ್ಗೆ ಬರೆದಿರುವ ಡೈರಿ, ಮುಂತಾದವುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 21,20,000 ರೂ. ಗಳಾಗ ಬಹುದೆಂದು ಅಂದಾಜಿಸಲಾಗಿದೆ.
Tweet