ಮಂಗಳೂರು

ಕೂಳೂರು ನದಿಗೆ ಕಾರು ಉರುಳಿ ಯುವಜೋಡಿ ಸಾವು

  • Published in ಮಂಗಳೂರು
  • Read 32 times
  • Comments::DISQUS_COMMENTS
ಮಂಗಳೂರು: : ಕೂಳೂರು ತಣ್ಣೀರುಬಾವಿ ಐಒಸಿ ಪ್ಲಾಂಟ್ ಬಳಿ ಮಂಗಳವಾರ ಸಂಜೆ ಕಾರೊಂದು ನದಿಗೆ ಉರುಳಿ ಬಿದ್ದು ಯುವಜೋಡಿ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.
 
 
 
 
 
 
 
 
 
ಮಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ತೌಶೀಲ್ (21) ಎಂದು ಸ್ಥಳದಲ್ಲಿ ದೊರಕಿದ ದಾಖಲೆಯ ಆಧಾರದಲ್ಲಿ ಗುರುತಿಸಲಾಗಿದೆ. ಜತೆಯಲ್ಲಿದ್ದ ಯುವತಿ ಕಾರವಾರದ ಪ್ರಣೀತಾ ಎಂದು ತಿಳಿದುಬಂದಿದೆ.
 
ಸಂಜೆಯ ವೇಳೆಗೆ ಇಬ್ಬರೂ ಕಾರಿನಲ್ಲಿ ತಣ್ಣೀರುಬಾವಿ ಬೀಚ್ನತ್ತ ತೆರಳುತ್ತಿದ್ದಾಗ ಇನ್ನೊಂದು ವಾಹನವನ್ನು ಹಿಂದಿಕ್ಕುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ನದಿಗೆ ಉರುಳಿಬಿತ್ತು.

ಈ ಘಟನೆಯನ್ನು ಪ್ರತ್ಯಕ್ಷವಾಗಿ ಕಂಡ ಐಒಸಿ ಘಟಕದ ಕೆಲವು ಮಂದಿ ಕಂಡು ಪೊಲೀಸರಿಗೆ ಕರೆ ಮಾಡಿ ತಿಳಿಸಿದರು. ತತ್ಕ್ಷಣ ಸ್ಥಳಕ್ಕೆ ಆಗಮಿಸಿದ ಪಣಂಬೂರು ಪೊಲೀ ಸರು, ಅಗ್ನಿಶಾಮಕ ದಳ, ಹೊಯಿಗೆ ತೆಗೆಯುವ ಕಾರ್ಮಿಕರು ಹಾಗೂ ಸ್ಥಳೀಯರ ಸಹಾಯದೊಂದಿಗೆ ಕಾರಿನಲ್ಲಿದ್ದವರನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.
 
ಈ ಬಗ್ಗೆ ಪಣಂಬೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದು ತನಿಖೆ ನಡೆಯುತ್ತಿದೆ.
More in this category: « ಮಂಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ನಾಲ್ವರ ಸೆರೆ ಶಾಸಕ ಜೆ. ಆರ್. ಲೋಬೊ ನೇತೃತ್ವದಲ್ಲಿ ‘ಜನ ಸಂಪರ್ಕ ಸಭೆ’ »
Tweet