ಮಂಗಳೂರು

ಮಂಗಳೂರಲ್ಲಿ ಹೀಗಿವೆ ನಮ್ಮ ಫುಟ್ ಪಾತ್

  • Published in ಮಂಗಳೂರು
  • Read 40 times
  • Comments::DISQUS_COMMENTS
ಮಂಗಳೂರು: ಮಂಗಳೂರನ್ನು ಸುಂದರ ನಗರವನ್ನಾಗಿ ತೋರಿಸಲು ರಸ್ತೆ, ಫುಟ್ ಪಾತ್ ಗಳನ್ನು ನಿರ್ಮಿಸಲಾಗುತ್ತಿದೆ. ಜನರು ನಿರಾತಂಕವಾಗಿ ನಡೆದುಕೊಂಡು ಹೋಗಲು ಫುಟ್ ಪಾತ್ ನಿರ್ಮಿಸಿ ಇಂಟರ್ ಲಾಕ್ ಅಳವಡಿಸುವಂಥ ವ್ಯವಸ್ಥೆಯನ್ನು ಅಲ್ಲಲ್ಲಿ ಕಾಣುತ್ತೇವೆ.
 
 
 
 
  
 
ವಿಚಿತ್ರವೆಂದರೆ ಬಾವುಟಗುಡ್ಡೆಯ ಮೂಲಕ ಹಾದು ಹೋಗುವ ನಲಪಾಡ್ ರೆಸಿಡೆನ್ಸಿ ಸಮೀಪ ಅಳವಡಿಸಿರುವ ಇಂಟರ್ ಲಾಕ್ ಸ್ಥಿತಿಯನ್ನು ನೋಡಿದರೆ ಅಲ್ಲಿ ನಡೆದುಕೊಂಡು ಹೋಗುವವರು ಎಚ್ಚರ ವಹಿಸದಿದ್ದರೆ ಕೈಕಾಲು ಮುರಿದುಕೊಳಬೇಕಾಗುತ್ತದೆ ಎನ್ನುವುದಕ್ಕೆ ಇಲ್ಲಿರುವ ಚಿತ್ರಗಳೇ ಸಾಕ್ಷಿ.

ಕಾರ್ ಪಾರ್ಕಿಂಗ್ ಮಾಡುವುದಕ್ಕೂ ಆಗುವುದಿಲ್ಲ. ಕಿತ್ತುಹೋಗಿರುವ ಇಂಟರ್ ಲಾಕ್ ಸರಿಪಡಿಸುವಂಥ ಗೋಜಿಗೆ ನಗರಪಾಲಿಕೆ ಹೋಗುವುದಿಲ್ಲ, ಕಾರ್ಪೊರೇಟರ್ ಗಳೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅಳವಡಿಸಿದ ಕೆಲವೇ ಸಮಯದಲ್ಲಿ ಇಂಟರ್ ಲಾಕ್ ಕಿತ್ತು ಹೋಗಿರುವುದು ಕಳಪೆ ಕಾಮಗಾರಿಗೆ ಹಿಡಿದ ಕನ್ನಡಿ. ಇದು ನಮ್ಮ ಮಂಗಳೂರು ಮಹಾನಗರಪಾಲಿಕೆಯ ವಾಸ್ತವ ಸ್ಥಿತಿ.
More in this category: « ನ್ಯಾಯಕ್ಕಾಗಿ ಕುಟುಂಬ ಸಮೇತ ಧರಣಿಗೆ ಕುಳಿತ ಪೆಟ್ರೋಲ್ ಬಂಕ್ ಮಾಲೀಕ ಸೂಟರ್‍ಪೇಟೆ 1ನೇ ಮತ್ತು 2ನೇ ಅಡ್ಡರಸ್ತೆ ಹಾಗೂ 1ನೇ ಎಡರಸ್ತೆ ಕಾಂಕ್ರೀಟಿಕರಣದ ಕಾಮಗಾರಿಯ ಗುದ್ದಲಿ ಪೂಜೆ »
Tweet