ಮಂಗಳೂರು

ಪಿಲಿಕುಳದಲ್ಲಿ ಗಮನ ಸೆಳೆದ ಮತ್ಸ್ಯೋತ್ಸವ

  • Published in ಮಂಗಳೂರು
  • Read 31 times
  • Comments::DISQUS_COMMENTS
ಮಂಗಳೂರು : ಪಿಲಿಕುಳ ರಾಜ್ಯದಲ್ಲೇ ಪ್ರಸಿದ್ಧವಾದ ನಿಸರ್ಗಧಾಮವಾಗಿದ್ದು, ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲು ಬೇರೆ ಬೇರೆ ಪಾರಂಪರಿಕ, ಪರಿಸರ ಕಾರ್ಯಕ್ರಮಗಳನ್ನು ಕೂಡಾ ಹಮ್ಮಿಕೊಳ್ಳಲಾಗುತ್ತಿದ್ದು ಈ ನಿಟ್ಟಿನಲ್ಲಿ ಮೀನು ಪ್ರಿಯರಿಗೆ ಒಂದು ಉತ್ತಮ ಸದವಕಾಶವನ್ನು ಕಲ್ಪಿಸುವ ದೃಷ್ಠಿಯಿಂದ ಹಾಗೂ ಮೀನುಗಾರಿಕೆ ಬಗ್ಗೆ ಅರಿವು ಮೂಡಿಸುವ ಕುರಿತು ಇಂದು ಪಿಲಿಕುಳ ದೋಣಿ ವಿಹಾರ ಕೆರೆಯ ಬಳಿ ಪಿಲಿಕುಳ ಮತ್ಸ್ಯೋತ್ಸವ (ಪಿಲಿಕುಳ ಫಿಶ್ ಕಾರ್ನಿವಾಲ್) ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಪಿಲಿಕುಳ ಮತ್ಸ್ಯೋತ್ಸವ ಉದ್ಘಾಟಿಸಿದರು. ಉದ್ಯಮಿ ಎ.ಸದಾನಂದ್ ಶೆಟ್ಟಿ ಸಹಿತ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಪಿಲಿಕುಳ ಕೆರೆಯ ಮೀನನ್ನು ಹಿಡಿದು ಮಾರಾಟ ಮಾಡಲಾಯಿತು., ಗಾಳ ಹಾಕುವ ಹವ್ಯಾಸಕ್ಕೆ ಪ್ರೋತ್ಸಾಹ ನೀಡುವುದು, ಸ್ಥಳದಲ್ಲೇ ತಾಜಾ ಮೀನುಗಳ ಖಾದ್ಯ ತಯಾರಿಸುವುದು, ವೈಜ್ಞಾನಿಕ ಮತ್ತು ಪರಿಸರ ಸ್ನೇಹಿ ಮೀನುಗಾರಿಕೆ ಬಗ್ಗೆ ಅರಿವು ಮೂಡಿಸುವುದು ಇತ್ಯಾದಿ ಕಾರ್ಯಕ್ರಮಗಳು ಜರಗಿದವು.

ಮೀನುಗಾರಿಕೆ ಮಾಹಾವಿದ್ಯಾಲಯ ಮಂಗಳೂರು, ಮೀನುಗಾರಿಕೆ ಅಭಿವೃದ್ಧಿ ನಿಗಮ, ಮೀನುಗಾರಿಕಾ ಇಲಾಖೆ ಇವರ ಸಹಯೋಗದಲ್ಲಿ ಪಿಲಿಕುಳ ಮತ್ಸ್ಯೋತ್ಸವ (ಪಿಲಿಕುಳ ಫಿಶ್ ಕಾರ್ನಿವಾಲ್) ಹಮ್ಮಿಕೊಳ್ಳಲಾಗಿತ್ತು.
More in this category: « ಬಾಲ ಕಾರ್ಮಿಕ ಕಾಯ್ದೆಗೆ ತಿದ್ದುಪಡಿಯಿಂದ ಮಕ್ಕಳ ಭವಿಷ್ಯಕ್ಕೆ ಮಾರಕ: ಕಾಂಗ್ರೆಸ್ ವತಿಯಿಂದ ನಿರಂತರ ಉಚಿತ ವ್ಯೆದ್ಯಕೀಯ ಶಿಬಿರ: ಜೆ.ಆರ್. ಲೋಬೊ »
Tweet