ಮಂಗಳೂರು

ಕಡ್ತಡ್ಕದಲ್ಲಿ ಮನೆಗೆ ನುಗ್ಗಿ 15 ಲ.ರೂ ಚಿನ್ನಾಭರಣ ಕಳವು

  • Published in ಮಂಗಳೂರು
  • Read 37 times
  • Comments::DISQUS_COMMENTS
ಮಂಗಳೂರು: ನಗರದ ಬಜಾಲ್ ಕುಡ್ತಡ್ಕದಲ್ಲಿ ಮನೆಯೊಂದಕ್ಕೆ ಕಳ್ಳರು ನುಗ್ಗಿ ಸುಮಾರು 15 ಲಕ್ಷ ರೂಪಾಯಿ ಬೆಲೆ ಬಾಳುವ 70 ಪವನ್ ಚಿನ್ನಾಭರಣ ದೋಚಿರುವ ಘಟನೆ ವರದಿಯಾಗಿದೆ. 
ಹರಿಶ್ಚಂದ್ರ ಬೇಕಲ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು ಹರಿಶ್ಚಂದ್ರ ಅವರು ವಿದೇಶದಲ್ಲಿ ಪತ್ನಿ ಜ್ಯೋತಿ ಹಾಗೂ ಪುತ್ರ ಮನೆಯಲ್ಲಿ ವಾಸವಿದ್ದಾರೆ.

ಜ್ಯೋತಿ ಮತ್ತು ಪುತ್ರ ತಮ್ಮ ಸ್ವಂತ ಊರಾದ ಬೇಕಲಕ್ಕೆ ಶನಿವಾರ ಹೋಗಿದ್ದು ಗುರುವಾರ ಸಂಜೆ ಮನೆಗೆ ವಾಪಸಾದಾಗ ಕಳವಾಗಿರುವುದು ಗೊತ್ತಾಯಿತು.

ಆಭರಣಗಳನ್ನು ಕಬಾಟಿನಲ್ಲಿಡುವ ಬದಲು ಜ್ಯೋತಿ ಪ್ಲಾಸ್ಟಿಕ್ ಬಕೆಟ್ ನಲ್ಲಿ ಹಾಕಿ ಮಲಗುವ ಮಂಚದ ಕೆಳಗೆ ಇಟ್ಟಿದ್ದರೆನ್ನಲಾಗಿದೆ. ಕಳ್ಳರು ಕಬಾಟನ್ನು ಜಾಲಾಡಿದ್ದು ಅಲ್ಲಿ ಏನೂ ಸಿಕ್ಕಿಲ್ಲ, ನಂತರ ಅವರ ಕಣ್ಣಿಗೆ ಪ್ಲಾಸ್ಟಿಕ್ ಬಕೆಟ್ ಕಾಣಿಸಿದ್ದು ಅದನ್ನು ಪರಿಶೀಲಿಸಿದಾಗ ಚಿನ್ನಾಭರಣಗಳು ಪತ್ತೆಯಾಗಿವೆ.

ಪೊಲೀಸ್ ಅಧಿಕಾರಿಗಳಾದ ಕಲ್ಯಾಣ್ ಶೆಟ್ಟಿ, ಇನ್ಸ್ ಪೆಕ್ಟರ್ ಪ್ರಮೋದ್ ಸ್ಥಳಕ್ಕೆ ಭೇಟಿ ನೀಡಿ ಕೇಸು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.
More in this category: « ಅಮಲು ಪದಾರ್ಥ ಅಳಿಸೋಣ ಉತ್ತಮ ಸಮಾಜ ನಿರ್ಮಿಸೋಣ :ಕಾರ್ನರ್ ಮೀಟಿಂಗ್ ವಿಮಾನ ದುರಂತದಲ್ಲಿ ಮಡಿದವರಿಗೆ ಪುಷ್ಪಾಂಜಲಿ »
Tweet