ಮಂಗಳೂರು

ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನ

  • Published in ಮಂಗಳೂರು
  • Read 32 times
  • Comments::DISQUS_COMMENTS
ಮಂಗಳೂರು : ಶಾಲೆ ಬಾಲಕಿಯ ಮೇಲೆ ಅದೇ ಶಾಲೆ ವಾಹನ ಚಾಲಕನಿಂದ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಾಲೆ ಮುಚ್ಚುವ ತನಕ ಹೋರಾಟ ಮುಂದುವರಿಸಲಾಗುವುದು ಎಂದು ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಕೆ. ಅಶ್ರಫ್ ಹೇಳಿದರು. 
 
  
 
 
 
 
 
 
 
ತೊಕ್ಕೋಟು ಶಾಲಾ ಪ್ರಕರಣಕ್ಕೆ ಸಂಬಂಧಿಸಿ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆದ ಪ್ರತಿಭಟನ ಸಭೆಯಲ್ಲಿ ಅವರು ಮಾತನಾಡಿದರು.

ಸಂತ್ರಸ್ತ ಬಾಲಕಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಶಾಲೆಯ ಆಡಳಿತ ಮಂಡಳಿಯವರು ಕನಿಷ್ಠ ಕ್ಷಮೆ ಯಾಚಿಸಲು ಸಿದ್ಧರಾಗಿಲ್ಲ. ರಾಜಕಾರಣಿಗಳು ಯಾರೂ ಬಾಲಕಿಯ ಮನೆಗೆ ತೆರಳಿ ಸಾಂತ್ವನ ಹೇಳಲು ಮುಂದಾಗಿಲ್ಲ ಎಂದು ಅಶ್ರಫ್ ಹೇಳಿದರು.

ಶಾಲೆ ಮುಚ್ಚಿಸಿ ಎನ್ನುವುದು ನಮ್ಮ ಏಕೈಕ ಅಜೆಂಡಾ ಆಗಿದೆ ಎಂದು ರಫಿಯುದ್ದೀನ್ ಕುದ್ರೋಳಿ ಹೇಳಿದರು.

ವಿವಿಧ ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳಾದ ಜಾಫರ್ ಸಾದಿಕ್ ಫೈಝಿ, ಮಹಮದ್ ಕುಂಞಿ, ಅಜೀಜ್ ಕುದ್ರೋಳಿ ಮೊದಲಾದವರು ಮಾತನಾಡಿದರು.

ಸಂಘಟನೆಗಳ ಪ್ರಮುಖರಾದ ರಿಯಾಜ್ ಫರಂಗಿಪೇಟೆ, ಶಾಫಿ ಬೆಳ್ಳಾರೆ, ಹಮೀದ್ ಕುದ್ರೋಳಿ, ಅಲಿ ಹಸನ್, ಮಹಮದ್ ಹನೀಫ್, ನವಾಜ್ ಉಳ್ಳಾಲ, ಹನೀಫ್ ಹಾಜಿ, ಸಯ್ಯದ್ ಇಸ್ಮಾಯಿಲ್, ಮುಸ್ತಾಫಾ ಮೊದಲಾದವರು ಉಪಸ್ಥಿತರಿದ್ದರು.

ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಸ್ವಾಗತಿಸಿ ರಿಯಾಜ್ ಕಡಂಬಾರ್ ಕಾರ್ಯಕ್ರಮ ನಿರ್ವಹಿಸಿದರು.
More in this category: « ಮೀನುಗಾರಿಕ ಇಲಾಖೆಯಲ್ಲಿ ಜೆ. ಆರ್ ಲೋಬೊ ಸಭೆ ಉರೆತ್ತ ಕಣ್ ದ ಸಿರಿ ಕವನ ಸಂಕಲನ ಬಿಡುಗಡೆ »
Tweet