ಮಂಗಳೂರು

ಉರೆತ್ತ ಕಣ್ ದ ಸಿರಿ ಕವನ ಸಂಕಲನ ಬಿಡುಗಡೆ

  • Published in ಮಂಗಳೂರು
  • Read 32 times
  • Comments::DISQUS_COMMENTS
ಮಂಗಳೂರು: ಪ್ರಕಾಶ್ ರಾವ್  ಪಯ್ಯಾರ್ ಅವರ ಉರೆತ್ತ ಕಣ್ ದ ಸಿರಿ ಕವನ ಸಂಕಲನವನ್ನು ನಗರ ಕರ್ನಾಟಕ ತುಳು ಸಾಹಿತ್ಯ ಅಕಾದೆಮಿ ಚಾವಡಿಯಲ್ಲಿ ಶನಿವಾರ ಬಿಡುಗಡೆ ಮಾಡಲಾಯಿತು.
   
  
 
  
   
ಕೃತಿ ಬಿಡುಗಡೆ ಮಾಡಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಸಮಾಜದ ಓರೆಕೋರೆಗಳನ್ನು ತಿದ್ದುವ ಕಾರ್ಯ ಸಾಹಿತಿಗಳಿಂದಾಗಬೇಕು ಎಂದರು.

ಸಮಾಜದ ವೈರುಧ್ಯವೇ ಕೇವಲ ಸಾಹಿತ್ಯವಲ್ಲ. ಅಂಕುಡೊಂಕುಗಳನ್ನು ತಿದ್ದಿ ಸಮಾಜವನ್ನು ಓಗ್ಗೂಡಿಸುವ ಕಾರ್ಯ ನಡೆಯಬೇಕು. ಈ ನಿಟ್ಟಿನಲ್ಲಿ ಸಾಹಿತ್ಯ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ತೊಡಗಿಕೊಂಡವರಿಗೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ನುಡಿದರು

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಎಂ. ಜಾನಕಿ ಬ್ರಹ್ಮಾವರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎನ್ನೆಸ್ಸೆಸ್ನ ರಾಜ್ಯ ಘಟಕ ಯೋಜನಾಧಿಕಾರಿ ಡಾ. ಗಣನಾಥ ಎಕ್ಕಾರ್ , ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಕ.ಸಾ.ಪ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಪುತ್ತೂರು ಕ.ಸಾ.ಪ.ದ ಅಧ್ಯಕ್ಷ ಡಾ. ವರದರಾಜ ಚಂದ್ರಗಿರಿ, ಅಬುದಾಬಿಯ ತುಳು ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಎಡ್ಮೆಮಾರ್ ಕೃತಿ ಪರಿಚಯ ಮಾಡಿದರು.
More in this category: « ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನ ತೊಕ್ಕೊಟ್ಟು ಬಬ್ಬುಕಟ್ಟೆಯಲ್ಲಿ ಲ್ಯಾಂಡ್ ಮಾರ್ಕ್ ಇನ್ಫಾ ಟೆಕ್ ಆಕ್ಸಿಜನ್ ಅಪಾರ್ಟ್ ಮೆಂಟ್ »
Tweet