ಮಂಗಳೂರು

ನದಿಗೆ ಉರುಳಿದ ಬೈಕ್: ಸವಾರ ಸಾವು

  • Published in ಮಂಗಳೂರು
  • Read 42 times
  • Comments::DISQUS_COMMENTS
ಮಂಗಳೂರು: ವ್ಯಕ್ತಿಯೊಬ್ಬರ ಶವವು ಮರವೂರು ಸೇತುವೆ ಬಳಿ ನದಿಯಲ್ಲಿ ಪತ್ತೆಯಾಗಿದ್ದು, ಇವರು ಬೈಕ್ ಸಮೇತ ಸೇತುವೆಯಿಂದ ಕೆಳಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.ಮೃತ ವ್ಯಕ್ತಿಯನ್ನು ಬಜ್ಪೆಯ ನೆಲ್ಲಿತೀರ್ಥ ನಿವಾಸಿಯಾಗಿರುವ ಲೋಕೇಶ್(28) ಎಂದು ಗುರುತಿಸಲಾಗಿದೆ.  
 
 
 
 
 
  
 
 
ವೃತ್ತಿಯಲ್ಲಿ ಟೈಲರಾಗಿರುವ ಲೋಕೇಶ್ ಜೂನ್ 4ರ ರಾತ್ರಿ ಬಜ್ಪೆಯಿಂದ ಮಂಗಳೂರಿನ ಕಡೆಗೆ ತಮ್ಮ ಬೈಕಲ್ಲಿ ಬರುತ್ತಿದ್ದಾಗ ಮರವೂರು ಸೇತುವೆ ಬಳಿ ನಿಯಂತ್ರಣ ಕಳೆದುಕೊಂಡು ನದಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

ಜೂನ್ 5 ರ ಬೆಳಿಗ್ಗೆ ಶವವು ನದಿ ದಡದಲ್ಲಿ ಪತ್ತೆಯಾಗಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗುರುವಾರ ಮಂಗಳೂರಿನಲ್ಲಿ ತೀವ್ರ ಮಳೆಯಾದ ಕಾರಣ ರಸ್ತೆಗಳು ಜಾರುತ್ತಿದ್ದು ಇದೇ ಕಾರಣದಿಂದಾಗಿ ಲೋಕೇಶ್ ಬೈಕ್ ಸಮೇತ ನದಿಗೆ ಬಿದ್ದಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.
More in this category: « ಗ್ರಾಮ ಪಂಚಾಯತ್ ದರ್ಬಾರ್ ಯಾರಿಗೆ ಇಂದು ನಿರ್ಧಾರ ಗ್ರಾ.ಪಂ ಫಲಿತಾಂಶ ಪ್ರಕಟ: ವಿಜಯಿಗಳಿಂದ ಸಂಭ್ರಮಾಚರಣೆ »
Tweet