Menu

ಶ್ರೀ ಶೇಷ ಶಯನ ಸಭಾಭವನ ಉದ್ಘಾಟನೆ

  • Published in ಸುರತ್ಕಲ್
  • Read 24 times
  • Comments::DISQUS_COMMENTS
ಶಾಂತಿ ಸಮೃದ್ಧಿ, ಭಕ್ತಿ ಸಂಕೇತದ ತುಳು ನಾಡ ದೈವ ದೇವರುಗಳ ನಂಬಿಕೆ ಹಾಗೂ ಹಿರಿಯರ ಆಶೀರ್ವಾದಗಳನ್ನು ಉಳಿಸಿ ಬೆಳೆಸಿ ಕುಟುಂಬ ಮತ್ತು ಸಮಾಜದ ಶ್ರೇಯೋಭಿವೃದ್ಧಿಗಾಗಿ ಜೀವನ ಮುಡಿಪಾಗಿಡಬೇಕು ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದರವರು ಹೇಳಿದರ
ಗುಡ್ಡೆ ಅಂಗಡಿ ಕವತ್ತಾರಿನ ದೇವಾಡಿಗ ಸಮಾಜದ ಅಡ್ಯರಣ್ಣ ಮೂಲಸ್ಥಾನದಲ್ಲಿ ಶುಕ್ರವಾರ ನಡೆದ ಶ್ರೀ ನಾಗ ಪ್ರತಿಷ್ಠಾ ವರ್ಧಂತ್ಯುತ್ಸವ, ಧರ್ಮದೇವತೆಗಳ ವೈಭವದ ನೇಮೋತ್ಸವದ ಸಂದರ್ಭ ಶ್ರೀ ಶೇಷ ಶಯನ ಸಭಾಭವನ ಉದ್ಘಾಟಿಸಿ ಮಾತನಾಡಿದರು.
 
ಮುಂಬೈ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಹಾಗೂ ಅಖಿಲ ಭಾರತ ತುಳು ಕೂಟದ ಅಧ್ಯಕ್ಷರಾದ ಧರ್ಮಪಾಲ ಯು. ದೇವಾಡಿಗ ಅಧ್ಯಕ್ಷತೆ ವಹಿಸಿದರು.
 
ಶ್ರೀ ವಾಸುಕಿ ಅನಂತಪದ್ಮನಾಭ ದೇವಳದ ಆಡಳಿತ ಮೊಕ್ತೇಸರ ಶ್ರೀಕಾಂತ ಸಾಮಗ, ಮಂಗಳೂರು ಕ್ಯಾಂಪ್ಕೊ ಸಂಸ್ಥೆ ಅಧ್ಯಕ್ಷ ಕಂಕೋಡಿ ಶ್ರೀಪದ್ಮನಾಭ, ಬಪ್ಪನಾಡು ದೇವಳದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ವಿವಿಧ ದೇವಾಡಿಗ ಸಂಘಗಳ ಅಧ್ಯಕ್ಷರುಗಳಾದ ಗಣೇಶ್ ದೇವಾಡಿಗ, ಎಚ್.ಮೋಹನದಾಸ್, ವಾಮನ್ ಮರೋಳಿ, ಕೃಷ್ಣಪ್ಪ ಎಸ್. ದೇವಾಡಿಗ, ಗೋಪಾಲ, ರವಿ ಶಂಕರ, ದೊಡ್ಡಣ್ಣ ಮೊೈಲಿ, ಜನಾರ್ಧನ ಪಡುಪಣಂಬೂರು, ಪ್ರಕಾಶ್ ದೇವಾಡಿಗ, ಮಹಿಳಾ ಸಮಿತಿಯ ಅಧ್ಯಕ್ಷೆ ವಸಂತಿ ದೇವಾಡಿಗ, ಯುವ ಸಂಘಟನಾ ಸಮಿತಿ ಅಧ್ಯಕ್ಷ ಜೀವನ್ ಪ್ರಕಾಶ್ ಪಾವಂಜೆ ಮತ್ತಿತರರು ಉಪಸ್ಥಿತರಿದ್ದರು.
 
ಊರ ಸಮಿತಿಯ ಅಧ್ಯಕ್ಷ ಸಂಜೀವ ಮೊೈಲಿ ವಾಮಂಜೂರು ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಪ್ರಸ್ತಾವನೆ ಗೈದರು, ಖಜಾಂಜಿ ಮೀರಾಬಾಯಿ ವಂದಿಸಿದರು, ರಾಜೇಶ್ ಶೇರಿಗಾರ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.
More in this category: « ಶ್ರೀ ನಾಗ ಪ್ರತಿಷ್ಠಾ ವರ್ಧಂತ್ಯುತ್ಸವ, ಧರ್ಮದೇವತೆಗಳ ವೈಭವದ ನೇಮೋತ್ಸವ ಮತ್ತುಶ್ರೀ ಶೇಷ ಶಯನ ಸಭಾಭವನ ಉದ್ಘಾಟನೆ ಕಟೀಲು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಬಾಲಕೃಷ್ಣ ಪಜೀರ್‍ಕೋಡಿ ಆಯ್ಕೆ »
back to top