Menu

ಪಡು ಪಣಂಬೂರು : ಕೊಳವೆ ಬಾವಿ ನಿರ್ಮಾಣಕ್ಕೆ ಸ್ಥಳೀಯರ ವಿರೋಧ

  • Published in ಸುರತ್ಕಲ್
  • Read 49 times
  • Comments::DISQUS_COMMENTS
ಕಿನ್ನಿಗೋಳಿ; ಪಡು ಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ್ತ ಬೊಳ್ಳೂರು ಸಾರ್ವಜನಿಕ ಕೊಳವೆ ಬಾವಿ ನಿರ್ಮಾಣಕ್ಕೆ ಸ್ಥಳೀಯರು ವಿರೋಧ ವ್ಯಕ್ತ ಪಡಿಸಿದ ಘಟನೆ ಇಂದು ನಡೆದಿದೆ.
 
 
 
 
 
ಪಡುಪಡಣಂಬೂರು ಗ್ರಾಮ ಪಂಚಾಯತ್ ನ ಬೊಳ್ಳುರಿನಲ್ಲಿ ಕಳೆದ ಹಲವು ವರ್ಷಗಳಿಂದ ಬೆಸಿಗೆ ಕಾಲದಲ್ಲಿ ನೀರಿನ ಸಮಸ್ಸ್ಯೆ ಇದ್ದು, ಅದಕ್ಕಾಗಿ ತಾಲೂಕು ಪಂಚಾಯತ್ ಸದಸ್ಸ್ಯ ರಾಜು ಕುಂದರ್ ಅವರ ಮನವಿ ಮೇರೆಗೆ ಸಚಿವ ಜೈನ್ ಕೊಳವೆ ಬಾವಿಗೆ ಅನುದಾನವನ್ನು ನೀಡಿದ್ದರು. ಅದರಂತೆ ಇಂದು ಕೊಳವೆ ಬಾವಿ ನಿರ್ಮಾಣ ಪ್ರಾರಂಭಿಸಲಾಯಿತು, ಆದರೆ ಸ್ಥಳಿಯ ಬಾವಿಗಳ ಅಂತರ್ ಜಲ ಕುಸಿಯುವ ಭೀತಿಯಿಂದ ಸ್ಥಳೀಯರು ಇದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದು ಕೊಳವೆ ಬಾವಿ ನಿರ್ಮಾಣ ಮಾಡದಂತೆ ತಡೆಹಿಡಿದರು, ಮಾತ್ರವಲ್ಲದೆ ಇದು ಕೆಮ್ರಾಲ್ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣವಾಗಿತ್ತಿದ್ದು ಪಡುಪಣಂಬೂರು ಪಂಚಾಯತ್ ವ್ಯಾಪ್ತಿಗೆ ನೀರು ಸರಬರಾಜು ಮಾಡಲು ನಿರ್ಮಾಣವಾಗಿ ಸ್ಥಳಕ್ಕಾಗಮಿಸಿದ ಪಡುಪಣಂಬೂರು ಪಂಚಾಯತ್ ಮಾಜೀ ಅಧ್ಯಕ್ಷ ವಿನೋದ್ ಬೆಳಾಯರು ಕಳೆದ ಹತ್ತು ವರ್ಷಗಳಿಂದ ಸಚಿವ ಜೈನ್ ಬಳಿ ಹೊಸ ಕೊಳವೆ ಬಾವಿ ಬೇಕೆಂದು ಮನವಿ ಸಲ್ಲಿಸಿದ್ದೇನೆ ,ಆದರೆ ಇದುವರೆಗೂ ಸ್ಪಂದಿಸಿಲ್ಲ ಆದರೆ ಇಂದು ತಾಲೂಕು ಪಂಚಾಯತ್ ಸದಸ್ಸ್ಯ ರಾಜೂ ಕುಂದರ್ ಅವರ ಮನವಿಗೆ ಸ್ಪಂದಿಸಿದ್ದಾರೆ, ಆದರೆ ಪಂಚಾಯತ್ಗೆ ಯಾವುದೇ ಮಾಹಿತಿ ನೀಡಿಲ್ಲ, ಆದರೆ ಜನರ ವಿರೋಧವಿದ್ದರೆ ಈ ಪರಿಸರದಲ್ಲಿ ನಿರ್ಮಾಣ ಮಾಡುವುದಿಲ್ಲ ಎಂದರು.
 
ಈಗ ನಿರ್ಮಾಣವಾಗುತಿರುವ ಕೋಳವೆ ಬಾವಿ ರಸ್ತೆ ಅಂಚಿಗಿಂತ ಕೇವಲ 3-4 ಅಡಿ ಅಂತರದಲ್ಲಿ ರಸ್ತೆ ಅಗಲಿಕರಣವಾಗುವಾಗ ಇದನ್ನು ಮುಚ್ಚಬೇಕಾದ ಅನಿವಾರ್ಯತೆ ಇದೆ. ಮಾತ್ರವಲ್ಲದೆ ಈಗ ಇಲ್ಲೇ ಇನ್ನೊಂದು ಕೊಳವೆ ಬಾವಿ ಇದ್ದು ಇದರಲ್ಲಿ ಸಾಕಷ್ಟು ನೀರು, ಇಲ್ಲ ಈ ಪರಿಸರದಲ್ಲಿ 3-4 ಸರಕಾರಿ ಬಾವಿಗಳಿದ್ದು ಅದನ್ನು ಸರಿ ಪಡಿಸಿದರೆ ಸಾಕಷ್ಟು ನೀರು ಸಿಗುವ ಸಾದ್ಯತೆ ಇದೆ, ಮಾತ್ರವಲ್ಲದೆ ನಮ್ಮ ಬಾವಿಗಳ ಅಂತರ್ಜಲ ಕುಸಿಯುವ ಸಾದ್ಯತೆ ಇದೆ ಎಂದು ಸ್ಥಳೀಯರು ಆರೋಪಿಸಿದರು.
 
ನಂತರ ಸ್ಥಳೀಯ ಮುಖಂಡರಾದ ತಾಲೂಕು ಪಂಚಾಯತ್ ಸದಸ್ಯ ರಾಜು ಕುಂದರ್, ಪಡುಪಣಂಬೂರು ಪಂಚಾಯತ್ ಮಾಜೀ ಅಧ್ಯಕ್ಷ ವಿನೋದ್ ಬೆಳ್ಯಾಯರು, ತಾಲೂಕು ಪಂಚಾಯತ್ ಮಾಜಿ ಸದಸ್ಯ ವಿನೋದ್ ಬೊಳ್ಳುರು,ಕಾಂಗ್ರೇಸ್ ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿ ಗುರುರಾಜ್ ಪೂಜಾರಿ, ಪಡುಪಣಂಬೂರು ಪಂಚಾಯತ್ ಪಿ.ಡಿ.ಒ ಅನಿತಾ ಕ್ಯಾತ್ರಿನ್ ಮುಂತಾದವರು ಚರ್ಚಿಸಿ ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಿದರು.
More in this category: « ಕಟೀಲು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಬಾಲಕೃಷ್ಣ ಪಜೀರ್‍ಕೋಡಿ ಆಯ್ಕೆ
back to top