Menu

ಹೆಚ್ಚು ಜನರನ್ನು ಪ್ರೀತಿಸುವ ವ್ಯಕ್ತಿಯೇ ದೇವರಿಗೆ ಹತ್ತಿರವಾಗುವ ವ್ಯಕ್ತಿ: ಬಿ.ರಮಾನಾಥ ರೈ

  • Published in ಬಂಟ್ವಾಳ
  • Read 15 times
  • Comments::DISQUS_COMMENTS
ಬಂಟ್ವಾಳ: ಧಾರ್ಮಿಕ ಕೇಂದ್ರಗಳು ಸರ್ವ ಜನತೆಯನ್ನು ಒಂದೇ ವೇದಿಕೆಯಲ್ಲಿ ತರುವ ಕ್ಷೇತ್ರವಾಗಿದೆ. ಧರ್ಮದ ವಿಚಾರದಲ್ಲಿ ನಮಗೆ ದ್ವೇಷ ಬೇಡ. ಅತ್ಯಂತ ಹೆಚ್ಚು ಜನರನ್ನು ಪ್ರೀತಿಸುವ ವ್ಯಕ್ತಿಯೇ ದೇವರಿಗೆ ಹತ್ತಿರವಾಗುವ ವ್ಯಕ್ತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
 
ಅವರು ಶನಿವಾರ ಕಡೇಶಿವಾಲಯ ಗ್ರಾಮ ಅಮೈ-ಮಾಡದಾರು ಶ್ರೀ ಪಿಲಿಚಾಮುಂಡಿ ಶ್ರೀ ಉಳ್ಳಾಕುಲು ಹಾಗೂ ಪರಿವಾರ ದೈವಗಳ ದೈವಸ್ಥಾನದ ಪುನರ್ ಪ್ರತಿಷ್ಠಾ ಕಲಶೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಾಕೃತಿಯ ಸೌಂಧರ್ಯದಿಂದ ಕೂಡಿರುವ ಸ್ಥಳದಲ್ಲಿ ದೈವಸ್ಥಾನವು ಎದ್ದು ನಿಂತಿದೆ. ಅಭೂತಪೂರ್ವ ಕಾರಣಿಕ ಶಕ್ತಿಗಳಿಂದ ಈ ದೈವಸ್ಥಾನವು ಇನ್ನಷ್ಟು ಬೆಳೆದು ಸಮಾಜಕ್ಕೆ ಮಾರ್ಗದರ್ಶನ ನೀಡುವ ಕೇಂದ್ರವಾಗಲಿ ಎಂದು ಹಾರೈಸಿದರು.

ನಮ್ಮಲ್ಲಿ ಶ್ರದ್ಧೆ ಭಕ್ತಿ ನಂಬಿಕೆ ಇದ್ದರೆ ಅಲ್ಲಿ ದೈವೀ ಕಲೆ ಉಂಟಾಗುವುದು ಎಂಬುದಕ್ಕೆ ಇಲ್ಲಿನ ಕ್ಷೇತ್ರವೇ ಸಾಕ್ಷಿಯಾಗುವುದು. ಇಲ್ಲಿನ ದೈವಸ್ಥಾನವು ಜಾತಿ ಮತ ಇಲ್ಲದೆ ನಮ್ಮನ್ನು ಒಂದಾಗಿಸಿದೆ. ಮೇಲುಕೀಲು ಇಲ್ಲ ಎಂಬುದೇ ನಮ್ಮ ಸಂಸ್ಕøತಿಯ ಮೂಲಾಧಾರವಾಗಿದೆ. ಎಂದು ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.

ನಮ್ಮ ಸಂಸ್ಕøತಿ ಉನ್ನತ ಮೌಲ್ಯವನ್ನು ಹೊಂದಿದೆ. ವಿದೇಶಿಯರು ನಮ್ಮ ಸಂಸ್ಕøತಿಯ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಅವರು ತ್ಯಜಿಸಿರುವ ಸಂಸ್ಕøತಿಯನ್ನು ನಾವು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದ ಅವರು ನಮ್ಮ ಶಿಕ್ಷಣದಲ್ಲಿ ದೊಡ್ಡ ಕೊರತೆ ಇದೆ. ಧಾರ್ಮಿಕ ಸಭೆಯಲ್ಲಿ ನಾವು ನೀಡುವ ವಿಚಾರವೇ ಇಂದಿನ ಮಕ್ಕಳಿಗೆ ನೈತಿಕ ಶಿಕ್ಷಣವಾಗಿದೆ. ಅದನ್ನು ಇನ್ನಷ್ಟು ನೀಡುವ ಕೆಲಸ ಆಗಬೇಕು. ನಮ್ಮಲ್ಲಿ ಕುಟುಂಬ ಪದ್ದತಿ ಇನ್ನಷ್ಟು ಬಲವಾಗಬೇಕು ಎಂದು ಕರೆ ನೀಡಿದರು.

ಪಯ್ಯನೂರು ಜ್ಯೊತಿಷಿ ಎ.ವಿ. ಮಾಧವ ಪೆÇದುವಾಳ್ ಮಾತನಾಡಿ ಇಲ್ಲಿನ ದೈವಿಕ ಸ್ಥಳವು ಹುಲಿ ಮತ್ತು ಹಸು ಒಂದಾಗಿ ಪ್ರೀತಿಯಿಂದ ನಡೆದುಕೊಂಡಿರುವ ಸ್ಥಳ, ಇಲ್ಲಿ ಸ್ನೇಹದ ಪ್ರೀತಿಯ ಉತ್ತಮ ನಡವಳಿಕೆಯ ಕ್ಷೇತ್ರ. ಅಭೂತಪೂರ್ವ ಶಕ್ತಿ ಸಂಪನ್ನ ಸ್ಥಳ ಎಂದು ನುಡಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲೀಲೇಶ್ ಆರ್. ಶೆಟ್ಟಿ ಪಾಂಡಿಬೆಟ್ಟು, ಆಡಳಿತ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಸಾಂತಪ್ಪ ಪೂಜಾರಿ, ಪುತ್ತೂರು ವಲಯ ಅರಣ್ಯಾಧಿಕಾರಿ ಬಿ.ಯನ್.ಹರೀಶ ಗೌಡ, ವಿಜಯಾ ಬ್ಯಾಂಕ್ ನಿವೃತ್ತ ಮೆನೇಜರ್ ಶಿವರಾಮ ಶೆಟ್ಟಿ ಅಮೈ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಿತಿ ಪದಾಧಿಕಾರಿಗಳಾದ ಅಮರನಾಥ ಅಜಿಲ, ಎ.ವಾಸಪ್ಪ ಶೆಟ್ಟಿ, ಬಿ. ಕೃಷ್ಣ ಭಂಡಾರಿ, ಈಶ್ವರ ಪೂಜಾರಿ, ಪುಷ್ಪರಾಜ್ ಹೆಗ್ಡೆ, ಸಚೀಂದ್ರ ಶೆಟ್ಟಿ, ಪ್ರಕಾಶ್ ಶೆಟ್ಟಿ, ಎ. ಜಯರಾಮ ಶೆಟ್ಟಿ,ಆಡಳಿತ ಸಮಿತಿಯ ಗಣೇಶ್ ಆರ್.ಶೆಟ್ಟಿ, ವಿದ್ಯಾಧರ ರೈ, ನವೀನಚಂದ್ರ ಶೆಟ್ಟಿ, ಶಾಂಭವ ಶೆಟ್ಟಿ, ಕೃಷ್ಣಪ್ಪ ಪೂಜಾರಿ, ಗಣೇಶ್ ಭಾರದ್ವಾಜ್, ಸತೀಶ್ಚಂದ್ರ ರೈ, ಕೆ. ಕಿಟ್ಟಣ್ಣ ಶೆಟ್ಟಿ ಸಹಿತ ಇತರ ಗಣ್ಯರು ಪಾಲ್ಗೊಂಡಿದ್ದರು.

ಜೀರ್ಣೋದ್ಧಾರ ಸಮಿತಿ ಗೌರವ ಅಧ್ಯಕ್ಷ ಬಿ. ರಾಮದಾಸ ರೈ ಬಾವಗುತ್ತು ಸ್ವಾಗತಿಸಿದರು. ಅಜಿತ್ ರೈ ಸಿದ್ದಕಟ್ಟೆ ವಂದಿಸಿದರು. ತೀರ್ಥಪ್ರಸಾದ್ ಅನಂತಾಡಿ ಮತ್ತು ಮಲ್ಲಿಕಾ ಅಜಿತ್ ಸಿದ್ದಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.
More in this category: « ತುಂಬೆ ಗ್ರಾಮ ಪಂಚಾಯತ್ನ ಲೆಕ್ಕಾಧಿಕಾರಿ ಆತ್ಮಹತ್ಯೆ ಬಂಟ್ವಾಳ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ »
back to top