Menu

ಬಂಟ್ವಾಳ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ

  • Published in ಬಂಟ್ವಾಳ
  • Read 43 times
  • Comments::DISQUS_COMMENTS
ಬಂಟ್ವಾಳ: ತಾಲೂಕಿನ ಮಾಣಿ ಮತ್ತು ಮಣಿನಾಲ್ಕೂರು ಗ್ರಾಮಗಳಲ್ಲಿ ನಡೆಸಲಾಗುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಗೆ ಮಂಗಳೂರು ಸಹಾಯಕ ಕಮಿಷನರ್, ಬಂಟ್ವಾಳ ತಹಸೀಲ್ದಾರ್, ಗಣಿ-ಭೂವಿಜ್ಞಾನ ಹಾಗೂ ಪೊಲೀಸ್ ಅಧಿಕಾರಿಗಳು ಶನಿವಾರ ರಾತ್ರಿ 10.15ರ ವೇಳೆಗೆ ಏಕಕಾಲದಲ್ಲಿ ದಾಳಿ ನಡೆಸಿದರು.
 
ಪೆರ್ನೆ, ಬರಿಮಾರು ನೇತ್ರಾವತಿ ನದಿಯಿಂದ ಸಾಗಾಟ ಮಾಡುತ್ತಿರುವ ಮರಳು ಲಾರಿಗಳನ್ನು ಮಾಣಿ ರಾಷ್ಟ್ರೀಯ ಹೆದ್ದಾರಿ ಬಳಿ ಸಹಾಯಕ ಕಮಿಷನರ್ ಡಾ.ಡಿ.ಆರ್. ಅಶೋಕ್ ನೇತೃತ್ವದ ತಂಡ ತಡೆ ಹಿಡಿದಿದೆ. ಹೆದ್ದಾರಿ ಸಮೀಪವೇ ಮುಟ್ಟುಗೋಲು ಹಾಕಲಾದ ಲಾರಿಗಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು.

ಇದೇ ಸಮಯದಲ್ಲಿ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಜುಮಾ ಮಸೀದಿಯ ನದಿ ಕಿನಾರೆಯಲ್ಲಿ ನಡೆಸಲಾಗುತ್ತಿರುವ ಅಕ್ರಮ ಮರಳುಅಡ್ಡೆಗೆ ತಹಸೀಲ್ದಾರ್ ಪುರಂದರ ಹೆಗ್ಡೆ ದಾಳಿ ನಡೆಸಿದರು. ನಿಷೇಧಿಸಲಾದ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ನಡೆಸಲಾಗುವ ಉದ್ಯಮಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗುವುದೆಂದು ಅಧಿಕಾರಿಗಳು ಹೇಳಿದ್ದಾರೆ.

ಈ ಮಧ್ಯೆ ಪಾಣೆಮಂಗಳೂರು ಹಾಗೂ ಸಜೀಪಮುನ್ನೂರು ಗ್ರಾಮದ ಅಕ್ಕರಂಗಡಿ, ನೆಹರೂನಗರ ಹಾಗೂ ನಂದಾವರದ ಸೇತುವೆಯ ಸಮೀಪ ನಡೆಸಲಾಗುತ್ತಿದ್ದ ಅಕ್ರಮ ಮರಳುಗಾರಿಕೆಗೆ ಶನಿವಾರ ಅಧಿಕಾರಿಗಳು ಕಡಿವಾಣ ಹಾಕಿದ್ದಾರೆ.
More in this category: « ಹೆಚ್ಚು ಜನರನ್ನು ಪ್ರೀತಿಸುವ ವ್ಯಕ್ತಿಯೇ ದೇವರಿಗೆ ಹತ್ತಿರವಾಗುವ ವ್ಯಕ್ತಿ: ಬಿ.ರಮಾನಾಥ ರೈ ಬಂಟ್ವಾಳ;ಸಿಡಿಲಿನ ಬಡಿತಕ್ಕೆ ಪಾಣೆಮಂಗಳೂರು ಬಳಿ ಒರ್ವ ಯುವಕ ಮೃತ »
back to top