Menu

ಗ್ರಾಮಪಂಚಾಯತ್ ಚುನಾವಣೆಗಾಗಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

  • Published in ಬಂಟ್ವಾಳ
  • Read 47 times
  • Comments::DISQUS_COMMENTS
ಬಂಟ್ವಾಳ: ಮುಂದಿನ ಗ್ರಾ.ಪಂ. ಚುನಾವಣೆಯಲ್ಲಿ ಯಾವುದೇ ಮತೀಯವಾದಿ ಶಕ್ತಿಗಳೊಂದಿಗೆ ಕಾಂಗ್ರೆಸ್ ಕೈ ಜೋಡಿಸುವುದಿಲ್ಲ. ಈ ಜಿಲ್ಲೆಯಲ್ಲಿ ಕೋಮು ಸಾಮರಸ್ಯತೆ ಉಳಿಯ ಬೇಕಾದರೆ ಗ್ರಾಮ ಪಂಚಾಯತ್ ಚುನಾವಣೆಗಳಲ್ಲೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
 
ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಿ.ಸಿ.ರೋಡಿನ ಗಾಣದ ಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಮಂಗಳವಾರ ನಡೆದ ಗ್ರಾಮಪಂಚಾಯತ್ ಚುನಾವಣೆಗಾಗಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ವ್ಯಕ್ತಿಗಿಂತ ಪಕ್ಷ ಮೇಲು, ಕಾಂಗ್ರೆಸ್ ನಮ್ಮ ಧರ್ಮವಾಗಬೇಕು ಎಂದು ಪಕ್ಷ ಕರ್ಯಕರ್ತರಿಗೆ ಕರೆ ನೀಡಿದ ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 39 ಗ್ರಾ.ಪಂಗಳಲ್ಲಿ ಕಾಂಗ್ರೆಸ್ ಬೆಂಲಿತರೇ ಗೆಲುವು ಸಾಧಿಸಲು ಕಾರ್ಯಕರ್ತರು ಶ್ರಮವಹಿಸ ಬೇಕು ಎಂದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಹಮ್ಮಿಕೊಳ್ಳವುದರ ಮೂಲಕ ಬಡಜನರ ಸೇವೆ ಮಾಡುತ್ತಿದೆ. ದುರ್ಬಲ ವರ್ಗದವರಿಗೆ ಸಹಾಯ ಮಾಡುವಂತಹ ಬಜೆಟ್ ನೀಡಿರುವುದು ತಪ್ಪಾ?, ಸಾಮಾಜಿಕವಾಗಿ ನ್ಯಾಯವಂಚಿರಾದವರಿಗೆ ಜನಪರ ಕಾರ್ಯಕ್ರಮಗಳನ್ನು ರೂಪಿಸಿರುವುದು ತಪ್ಪಾ? ಎರಡು ವರ್ಷದ ಅಧಿಕಾರವಧಿಯಲ್ಲಿ ಎಲ್ಲಾ ವರ್ಗದ ಜನರ ಹಿತ ಕಾಪಾಡಿರುವುದು ತಪ್ಪಾ? ಎಂದು ಪ್ರಶ್ನೆ ಮಾಡುತ್ತಲೆ ವಿರೋಧಿಗಳ ಟೀಕೆಗೆ ಪ್ರತ್ಯುತ್ತರ ನೀಡುವ ಕೆಲಸ ಮುಂದಿನ ಗ್ರಾ.ಪಂ. ಚುನಾವಣೆಯಲ್ಲಿ ಆಗಬೇಕು ಎಂದರು. ಜಿ.ಪಂ. ಹಾಗೂ ತಾ.ಪಂ. ಬಿಜೆಪಿಯ ವಶದಲ್ಲಿದೆ. ಅಭವೃದ್ದಿ ಕಾರ್ಯಗಳು ನಡೆಯದೇ ಇದ್ದಾಗ ಅನುದಾನ ಇಲ್ಲ ಎಂದು ಸರ್ಕಾರದ ಮೇಲೆ ಗೂಬೆ ಕೂರಿಸುವ ಇಂತಹ ಜಿ.ಪಂ. ಹಾಗೂ ತಾಲೂಕು ಪಂಚಾಯತ್ ಆಡಳಿತವನ್ನು ಯಾರಿಗೆ ನೀಡಬೇಕು ಎನ್ನುವ ಬಗ್ಗೆ ಜನ ನಿರ್ಧರಿಸಬೇಕು ಎಂದರು.

ಬಿಜೆಪಿ ವಿರುದ್ದ ವಾಗ್ದಾಳಿ:
ತನ್ನ ಭಾಷಣದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ ಸಚಿವ ರೈ ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಯುಟರ್ನ್ ಸರ್ಕಾರ. ಸುಳ್ಳು ಹಾಗೂ ಅಪಪ್ರಚಾರದ ಮೂಲಕ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಟೀಕಿಸಿದರು. ಮತೀಯ ಸಾಮರಸ್ಯ ಇದ್ದ ಈ ಜಿಲ್ಲೆಯನ್ನು ಬಿಜೆಪಿ ಕೋಮುವಾದಿ ಜಿಲ್ಲೆಯನ್ನಾಗಿ ಮಾಡಿದೆ. ಬಿಜೆಪಿ ಹಿರಿಯ ಮುಖಂಡ ಪ್ರತಾಪ್ ಸಿಂಹ ನಾಯಕ್ ಪಂಚಾಯತ್‍ನ ಅಧಿಕಾರವನ್ನು ಕಾಂಗ್ರೆಸ್ ಮೊಟಕುಗೊಳಿಸಿದೆ ಎಂದು ಸುಳ್ಳು ಹೇಳುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಎರಡು ಗ್ರಾಮಪಂಚಾಯತ್‍ಗಳನ್ನು ಬರ್ಖಾಸ್ತು ಮಾಡಿರುವ ಇತಿಹಾಸ ಇದ್ದರೆ ಅದು ಬಿಜೆಪಿ ಆಡಳಿತದಲ್ಲಿ. ಗ್ರಾ,ಪಂಳ ಮೇಲೆ ಯಾವರೀತಿ ಹಸ್ತಕ್ಷೇಪ ಮಾಡುತ್ತಿದೆ ಎನ್ನುವುದು ಇದರಿಂದ ಗೊತ್ತಾಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಸಂಸದ ನಳಿನ್ ಕುಮಾರ್ ಕಟೀಲು ಅವರು ಸಕ್ರ್ಯುಟ್ ಹೌಸ್ ಬಳಿ ಗುಡಿಸಿದ್ದು ಬಿಟ್ಟರೆ ಈ ಜಿಲ್ಲೆಯಲ್ಲಿ ಬೇರೆನು ಅಭಿವೃದ್ದಿ ಕೆಲಸ ಮಾಡಿಲ್ಲ ಎಂದು ಲೇವಡಿ ಮಾಡಿದರು.

ಡಿಸಿಸಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮನಪಾ ಮೇಯರ್ ಜೆಸಿಂತಾ ಅಲ್ಫ್ರೆಡ್ ಪಕ್ಷ ಪ್ರಮುಖರಾದ ಎ.ಸಿ.ಭಂಡಾರಿ, ಪಿಯೂಸ್ ಎಲ್.ರೊಡ್ರಿಗಸ್, ಚಂದ್ರ ಪ್ರಕಾಶ್ ಶೆಟ್ಟಿ, ಮಮತಾ ಗಟ್ಟಿ, ದಿವ್ಯ ಪ್ರಭಾ ಚಿಲ್ತಡ್ಕ, ಎಂ.ಎಸ್. ಮಹಮ್ಮದ್, ಸಂಜೀವ ಪೂಜಾರಿ, ಮಾಧವ ಮಾವೆ, ಮಿಥುನ್ ರೈ, ಬಿ. ಎಚ್.ಖಾದರ್, ಶಶಿಧರ ಹೆಗ್ಡೆ, ವೆಂಕಪ್ಪ ಗೌಡ, ವಸಂತಿ ಸಿ. ಬಿ.ಕೆ.ಇದ್ದಿನಬ್ಬ, ರಾಜಶೇಖರ ನಾಯಕ್, ಜಿನರಾಜ ಆರಿಗ, ಪದ್ಮಶೇಖರ ಜೈನ್, ಮಾಯಿಲಪ್ಪ ಸಾಲ್ಯಾನ್ ಮತ್ತಿತರರು ಹಾಜರಿದ್ದರು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಸ್ವಾಗತಿಸಿ, ತಾಜೀವ ಕಕ್ಕೆಪದವು ನಿರೂಪಿಸಿ ವಂದಿಸಿದರು.
More in this category: « ಲಾರಿ ಢಿಕ್ಕಿ ಹೊಡೆದು ಸ್ಕಾರ್ಪಿಯೋ ಪಲ್ಟಿ ಬಂಟ್ವಾಳ: ಇಲ್ಲಿನ ಎರಡು ಸರ್ಕಾರಿ ಶಾಲೆಗಳಿಗೆ ಶೇ. ನೂರು ಫಲಿತಾಂಶ »
back to top