Menu

ಬಂಟ್ವಾಳ: ಇಲ್ಲಿನ ಎರಡು ಸರ್ಕಾರಿ ಶಾಲೆಗಳಿಗೆ ಶೇ. ನೂರು ಫಲಿತಾಂಶ

  • Published in ಬಂಟ್ವಾಳ
  • Read 43 times
  • Comments::DISQUS_COMMENTS
ಬಂಟ್ವಾಳ: ಇಲ್ಲಿನ ಎರಡು ಸರ್ಕಾರಿ ಶಾಲೆಗಳಿಗೆ ಶೇ. ನೂರು ಫಲಿತಾಂಶ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೊಡ್ಮಾಣ್ ಸರ್ಕಾರಿ ಪ್ರೌಢಶಾಲೆ ಹಾಗೂ ಪಂಜಿಕಲ್ಲು ಸರ್ಕಾರಿ ಪ್ರೌಢಶಾಲೆಗಳು ಶೇ. ನೂರು ಸಾಧನೆ ಮಾಡಿದ ಶಾಲೆಗಳಾಗಿದ್ದು ಇದೇ ಮೊದಲ ಬಾರಿಗೆ ಎರಡು ಶಾಲೆಗಳು ಈ ಸಾಧನೆ ಮಾಡಿರುವುದಾಗಿ ತಿಳಿದು ಬಂದಿದೆ. 
 
 
ಪಂಜಿಕಲ್ಲು ಸರ್ಕಾರಿ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ 37 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ. 24 ಹಾಗೂ ಶೇ. 30 ಫಲಿತಾಂಶ ದಾಖಲಿಸಿದ್ದ ನಂದಾವರ ಹಾಗೂ ಕೊಡಂಗೆ ಸರ್ಕಾರಿ ಪ್ರೌಢಶಾಲೆ ಈ ಬಾರಿಯ ಫಲಿತಾಂಶದಲ್ಲಿ ಅಚ್ಚರಿಯ ಸಾಧನೆ ಮಾಡಿದ್ದು ಅನುಕ್ರಮವಾಗಿ ಶೇ. 88 ಹಾಗೂ ಶೇ.90 ಫಲಿತಾಂಶ ದಾಖಲಿಸಿರುವುದಾಗಿ ತಿಳಿದು ಬಂದಿದೆ.

ಮೊಡಂಕಾಪುವಿನ ಇನೆಂಟ್ ಜೀಸಸ್ ಅನುದಾನ ರಹಿತ ಆಂಗ್ಲ ಮಾಧ್ಯಮ ಶಾಲೆ ಹಾಗೂ ಕಾರ್ಮೆಲ್ ಕಾನ್ವೆಂಟ್ ಬಾಲಕಿಯರ ಪೌಢಶಾಲೆ ನೂರು ಶೇಕಡ ನೂರು ಫಲಿತಾಂಶ ದಾಖಲಿಸಿದೆ. ತುಂಬೆ ಆಂಗ್ಲ ಮಾಧ್ಯಮ ಪ್ರೌಢಶಾಲೆಯಿಂದ ಹಾಜರಾದ 46 ವಿದ್ಯಾರ್ಥಿಗಳಲ್ಲಿ ಎಲ್ಲರೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವುದರೊಂದಿಗೆ ಶೇ. ನೂರು ಫಲಿತಾಂಶವನ್ನು ದಾಖಲಿಸಿದೆ. ಫಾತಿಮಾ ನುಸೈಬ 612, ರಶ್ಮಿ ಆರ್ ಉಪಾಧ್ಯಾಯ 609, ತೃಪ್ತಿ ಪಿ. ರೈ 607, ಪ್ರೇಮ್ ಸಾಗರ್ ತುಂಬೆ 600, ಅಂಕ ಗಳಿಸಿರುತ್ತಾರೆ.

ಕನ್ನಡ ಮಾಧ್ಯಮದಲ್ಲಿ ಹಾಜರಾದ 74 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗುವುದರೊಂದಿಗೆ 100% ಫಲಿತಾಂಶ ದಾಖಲಿಸಿದೆ. ಶ್ವೇತ ಎಸ್. 565 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ.
More in this category: « ಗ್ರಾಮಪಂಚಾಯತ್ ಚುನಾವಣೆಗಾಗಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಬಂಟ್ವಾಳ : ಸೋಮವಾರ ರಾತ್ರಿ ಬೀಸಿದ ಬಿರುಗಾಳಿಗೆ ಬಂಟ್ವಾಳ ತಾಲೂಕಿನ ಕರ್ಪೆ , ಸಂಗಬೆಟ್ಟು ಗ್ರಾಮಗಳಲ್ಲಿ ಹಾನಿ »
back to top