Menu

ಬಂಟ್ವಾಳ : ಸೋಮವಾರ ರಾತ್ರಿ ಬೀಸಿದ ಬಿರುಗಾಳಿಗೆ ಬಂಟ್ವಾಳ ತಾಲೂಕಿನ ಕರ್ಪೆ , ಸಂಗಬೆಟ್ಟು ಗ್ರಾಮಗಳಲ್ಲಿ ಹಾನಿ

  • Published in ಬಂಟ್ವಾಳ
  • Read 46 times
  • Comments::DISQUS_COMMENTS
ಬಂಟ್ವಾಳ : ಸೋಮವಾರ ರಾತ್ರಿ ಬೀಸಿದ ಬಿರುಗಾಳಿಗೆ ಬಂಟ್ವಾಳ ತಾಲೂಕಿನ ಕರ್ಪೆ , ಸಂಗಬೆಟ್ಟು ಗ್ರಾಮಗಳಲ್ಲಿ ಹಾನಿ ಸಂಭವಿಸಿದೆ.
 
ಬಿರುಗಾಳಿಯಿಂದಾಗಿ ಮರಗಳು ಮುರಿದು ಬಿದ್ದಿದ್ದು ಅಡಿಕೆ ಮರಗಳು ಹಾನಿಗೊಂಡಿವೆ. ಸುಮಾರು 20 ಮನೆಗಳ ಛಾವಣಿಯ ಹಂಚು , ಸಿಮೆಂಟ್ ಶೀಟ್‍ಗಳು ಹಾರಿ ಹೋಗಿವೆ. ಸಂಗಬೆಟ್ಟು ಗ್ರಾಮದ ಗಾಡಿಪಲ್ಕೆ , ಮುಗೇರುಗುಡ್ಡೆ , ಮದಂಗೋಡಿ, ಬೋರುಗುಡ್ಡೆ , ನೆಲ್ಲಿಗುಡ್ಡೆ ಮತ್ತು ಕರ್ಪೆ ಗ್ರಾಮದ ಕುಪ್ಪೆಟ್ಟು , ಬಾಳಿಕೆ, ಮರ್ದೊಟ್ಟು , ಹಲಾಯಿ, ಪಳ್ಳಿ , ಜಾಲುಗುರಿ ಮೊದಲಾದ ಕಡೆ ಹಾನಿ ಸಂಭವಿಸಿದೆ.

ಸಂಗಬೆಟ್ಟು ಗ್ರಾಮ ಕರಣಿಕ ಶಿವಾನಂದ ನಾಟೇಕರ್, ಪಂ.ಅ.ಅಧಿಕಾರಿ ಪದ್ಮನಾಭ ಸಾಲಿಯಾನ್, ಗ್ರಾಮ ಸಹಾಯಕ ಸತೀಶ್ ಶೆಟ್ಟಿಗಾರ್ ಅವರು ಹಾನಿಗೊಂಡ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಹಶೀಲ್ದಾರ್ ಅವರಿಗೆ ವರದಿ ಸಲ್ಲಿಸಿದ್ದಾರೆ.

ಸಿಡಿಲು ಬಡಿದು ಹಾನಿ: ಕುಕ್ಕಿಪಾಡಿ ಗ್ರಾಮ ವ್ಯಾಪ್ತಿಯ ಸಿದ್ಧಕಟ್ಟೆ ಹರ್ಷಲಿ ಸಭಾಭವನದ ಹಿಂಭಾಗದಲ್ಲಿರುವ ಸುಜಾತ ಎಂಬವರ ಮನೆಗೆ ಸೋಮವಾರ ಸಂಜೆ ಸಿಡಿಲು ಬಡಿದು ಹಾನಿ ಉಂಟಾಗಿದೆ. ಮನೆಯ ಮುಂಭಾಗಕ್ಕೆ ಸಿಡಿಲು ಹೊಡೆತ ಉಂಟಾಗಿದ್ದು ವಿದ್ಯುತ್ ಸಂಪರ್ಕ ಸುಟ್ಟು ಹೋಗಿದೆ. ಫ್ಯಾನ್, ವಿದ್ಯುತ್‍ದೀಪಗಳಿಗೆ ಹಾನಿ ಉಂಟಾಗಿದೆ. ಸುಜಾತ ಅವರು ಒಬ್ಬರೇ ಮನೆಯೊಳಗಿದ್ದು ಸಿಡಿಲಿನ ಹೊಡೆತದಿಂದ ಪಾರಾಗಿದ್ದಾರೆ. ಆದರೆ ಇದರಿಂದ ಆಘಾತಕ್ಕೊಳಗಾಗಿದ್ದಾರೆ. ಗ್ರಾಮ ಕರಣಿಕ ಕೂಸಣ್ಣ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ನಷ್ಟ ಅಂದಾಜಿಸಿದ್ದಾರೆ.
More in this category: « ಬಂಟ್ವಾಳ: ಇಲ್ಲಿನ ಎರಡು ಸರ್ಕಾರಿ ಶಾಲೆಗಳಿಗೆ ಶೇ. ನೂರು ಫಲಿತಾಂಶ ಅಕ್ರಮ ಮರಳುಗಾರಿಕೆಗೆ ದಾಳಿ: ಡ್ರೆಜಿಂಗ್ ಯಂತ್ರ ವಶ »
back to top