Menu

ಅಕ್ರಮ ಮರಳುಗಾರಿಕೆಗೆ ದಾಳಿ: ಡ್ರೆಜಿಂಗ್ ಯಂತ್ರ ವಶ

  • Published in ಬಂಟ್ವಾಳ
  • Read 43 times
  • Comments::DISQUS_COMMENTS
ಬಂಟ್ವಾಳ : ತಾಲೂಕಿನ ಸರಪಾಡಿ ಗ್ರಾ.ಪಂ.ವ್ಯಾಪ್ತಿಯ ಅಜಿಲಮೊಗರುನಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಸಹಾಯಕ ಆಯುಕ್ತ ಡಾ. ಅಶೋಕ್ ನೇತೃತ್ವದ ತಂಡ ಸೋಮವಾರ ರಾತ್ರಿ ದಾಳಿ ನಡೆಸಿದ್ದು ಮರಳುಗಾರಿಕೆ ನಡೆಸುತ್ತಿದ್ದ ಡ್ರೆಜಿಂಗ್ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.
 
ಅಜಿಲಮೊಗರು ಪ್ರದೇಶದ ನೇತ್ರಾವತಿ ನದಿಯಲ್ಲಿ ಕಳೆದ ಹಲವಾರು ಸಮಯಗಳಿಂದ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿತ್ತು. ಆದರೆ ದಾಳಿ ಸಂದರ್ಭದಲ್ಲಿ ಲಾರಿಗಳು ಸಿಕ್ಕಿರಲಿಲ್ಲ .
 
ದಾಳಿಯ ಪೂರ್ವ ಸೂಚನೆ ದೊರೆಯುತ್ತಿದ್ದಂತೆ ಮರಳುಲಾರಿಗಳ ಸಹಿತ ಚಾಲಕರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
 
ಕಳೆದವಾರ ಸರಪಾಡಿ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಯನ್ನು ಅಧಿಕಾರಿಗಳು ಪತ್ತೆಹಚ್ಚಿದ್ದರು. ಈ ಸಂದರ್ಭದಲ್ಲಿ ಅಜಿಲಮೊಗರು ಪರಿಸರದಲ್ಲೂ ಅಕ್ರಮ ಮರಳುಗಾರಿಕೆಯ ಮಾಹಿತಿಯನ್ನು ಕಲೆಹಾಕಿದ್ದ ಅಧಿಕಾರಿಗಳು ಖಚಿತ ವರ್ತಮಾನದ ಮೇರೆಗೆ ಸೋಮವಾರ ರಾತ್ರಿ ದಾಳಿ ಕಾರ್ಯಾಚರಣೆ ನಡೆಸಿದ್ದರಾದರೂ ಇಲಾಖೆಯ ಮಾಹಿತಿ ಸೋರಿಕೆಯಿಂದ ಅಕ್ರಮ ಮರಳುಗಾರಿಕೆ ದಂಧೆಕೋರರು ದಾಳಿಯವೇಳೆ ಸ್ಥಳದಿಂದ ಕಾಲ್ಕಿತ್ತಿದ್ದರು.
More in this category: « ಬಂಟ್ವಾಳ : ಸೋಮವಾರ ರಾತ್ರಿ ಬೀಸಿದ ಬಿರುಗಾಳಿಗೆ ಬಂಟ್ವಾಳ ತಾಲೂಕಿನ ಕರ್ಪೆ , ಸಂಗಬೆಟ್ಟು ಗ್ರಾಮಗಳಲ್ಲಿ ಹಾನಿ ಎಂಆರ್‍ಪಿಎಲ್ ಸಂಸ್ಥೆಗೆ ಸೇರಿದ ಹೈ ಪ್ರೆಶರ್ ಪೆಟ್ರೋಲಿಯಂ ತೈಲ ಸಾಗಾಟದ ಪೈಪ್‍ಲೈನ್‍ನಿಂದ ಡಿಸೇಲ್ ಸೋರಿಕೆ »
back to top