Menu

ಅಕ್ರಮ ಮರಳುಗಾರಿಕೆಗೆ ದಾಳಿ:6 ಮರಳು ಲಾರಿ ಸಹಿತ 3 ಲಾರಿಗಳ ವಶ

  • Published in ಬಂಟ್ವಾಳ
  • Read 39 times
  • Comments::DISQUS_COMMENTS
ಬಂಟ್ವಾಳ: ತಾಲೂಕಿನ ಅರಳ ಗ್ರಾಮದ ಮುಲಾರಪಟ್ಣಯ ಫಲ್ಗುಣಿ ನದಿ ಕಿನಾರೆಯಲ್ಲಿ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿದ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು, 6 ಮರಳು ಲಾರಿ ಸಹಿತ 3 ಲಾರಿಗಳನ್ನು ಶುಕ್ರವಾರ ಮುಂಜಾನೆ ವಶ ಪಡಿಸಿಕೊಂಡಿದ್ದಾರೆ.
 
ಸಹಾಯಕ ಕಮಿಷನರ್ ಡಾ. ಅಶೋಕ್ ಡಿ.ಆರ್. ಮಾರ್ಗದರ್ಶನದಲ್ಲಿ ನಡೆದ ಬಂಟ್ವಾಳ ರೆವಿನ್ಯೂ ಇನ್ಸ್‍ಪೆಕ್ಟರ್ ಸಾಧು, ಗ್ರಾಮಲೆಕ್ಕಾಧಿಕಾರಿ ಜನಾರ್ದನ್, ನವೀನ್.ಟಿ, ಶಿವಾನಂದ ನಾಟೇಕಾರ್, ಯೋಗಾನಂದ, ಪ್ರವೀಣ್, ಸಿಬ್ಬಂದಿಗಳಾದ ಸಂದೀಪ್, ಗೋಪಾಲ, ತಿಲಕ್‍ರಾಜ್ ಮತ್ತಿತರಿದ್ದರು. ಕಾರ್ಯಾಚರಣೆ ಸಂದರ್ಭ ಅಧಿಕಾರಿಗಳೊಂದಿಗೆ ಅನುಚಿತವಾಗಿ ನಡೆದುಕೊಂಡು ಲಾರಿ ಚಾಲಕನೋರ್ವ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆ ನಡೆಯಿತು. ಸ್ಥಳದಿಂದ ಪರಾರಿಯಾದ ಈತನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
More in this category: « ಅಕ್ರಮ ಮರಳ ಅಡ್ಡೆಗೆ ದಾಳಿ ನಡೆಸಿ 4 ಮರಳು ತುಂಬಿದ ಲಾರಿ ವಶ ನೇತ್ರಾವತಿ ನದಿಯಲ್ಲಿ ಏಕಾಏಕಿ ರಭಸದಲ್ಲಿ ನೀರು ಹರಿದು ಡ್ಯಾಂ ನಿರ್ಮಾಣಕ್ಕೆ ಅಳವಡಿಸಿದ್ದ ಕಬ್ಬಿಣದ ಸಲಕರಣೆಗಳು ಕೊಚ್ಚಿ ಹೋಗಿ 1 ಕೊಟಿ ರುಪಾಯಿ ನಷ್ಟ »
back to top