Menu

ಶ್ರೀ ಮುಖ್ಯಪ್ರಾಣ ದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ

  • Published in ಬಂಟ್ವಾಳ
  • Read 51 times
  • Comments::DISQUS_COMMENTS
ಬಂಟ್ವಾಳ: ಭವ ಸಾಗರವನ್ನು ದಾಟಲು ನಮ್ಮೊಳಗಿನ ವ್ಯಾಮೋಹವನ್ನು ಬಿಡಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
 
ಪುದು ಗ್ರಾಮದ ಸುಜೀರು ದತ್ತನಗರದಲ್ಲಿ ನಿರ್ಮಾಣಗೊಂಡ ನೂತನ ಶ್ರೀ ವೀರಹನುಮಾನ್ ಮಂದಿರದಲ್ಲಿ ಶ್ರೀ ಮುಖ್ಯಪ್ರಾಣ ದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಮನುಷ್ಯನ ಸಂಕಲ್ಪ ಶಕ್ತಿಗಿಂತ ಮಿಗಿಲಾದುದು ಬೇರೆ ಯಾವುದೂ ಇಲ್ಲ. ಅಂತಹ ಸಂಕಲ್ಪ ಶಕ್ತಿ ಇಲ್ಲಿ ಅನುಷ್ಠಾನಗೊಂಡಿದೆ. ಭಜನೆಯಿಂದ ಮಾತ್ರ ಬದುಕಿನಲ್ಲಿ ಸಂಸ್ಕಾರ ಕಟ್ಟಿಕೊಳ್ಳಲು ಸಾಧ್ಯ ಎಂದ ಶ್ರೀಗಳು ರಾಮನ ಕೆಲಸ ರಾಷ್ಟ್ರದ ಕೆಲಸ ಎಂದರು.

ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಜಿ.ಪಂ.ಸದಸ್ಯೆ ಜಯಶ್ರೀ ಕೆ.ಎ. ಮಾತಾ ಡೆವಲಪರ್ಸ್ ಪ್ರೈ.ಲಿ. ಮ್ಯಾನೇಜಿಂಗ್ ಡೈರೆಕ್ಟರ್ ಸಂತೋಷ್ ಕುಮಾರ್ ಶೆಟ್ಟಿ, ವಿ.ಹಿಂ.ಪ. ನ ಕಾರ್ಯಧ್ಯಕ್ಷ ಜಿತೇಂದ್ರ ಕೊಟ್ಟಾರಿ, ಸೇವಾಂಜಲಿ ಪ್ರತಿಷ್ಠಾನದ ಕಾರ್ಯದರ್ಶಿ ಕೃಷ್ಣಕುಮಾರ್ ಪೂಂಜಾ, ಪತ್ರಕರ್ತ ರಾಜಾ ಬಂಟ್ವಾಳ, ಪ್ರಮುಖರಾದ ಕೊಡ್ಮಾನ್ ಕಾಂತಪ್ಪ ಶೆಟ್ಟಿ, ಚಂದ್ರಶೇಖರ ಗಾಂಭಿರ, ಆಡಳಿತ ಸಮಿತಿ ಗೌರವಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ನುಳಿಯಾಲ್‍ಗುತ್ತು, ಅಧ್ಯಕ್ಷ ನಾಗೇಶ್ ಅಮೀನ್, ಪುರೊಷೋತ್ತಮ ಶೆಟ್ಟಿ ನುಳಿಯಾಲ್‍ಗುತ್ತು, ಕೋಟಿ ಪೂಜಾರಿ, ಮಹಿಳಾ ಸೇವಾ ಬಳಗದ ಅಧ್ಯಕ್ಷೆ ವೀಣಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
 
ಸುನೀಲ್ ನಿರೂಪಿಸಿದರು, ಪ್ರವೀಣ್ ಕುಮಾರ್ ವಂದಿಸಿದರು.
More in this category: « ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆಗೆ ಸರ್ವೇ ಕಾರ್ಯ ಮುದೆಲ್ ಮುಟ್ಟಿ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಜೀರ್ಣೋದ್ಧಾರ »
back to top