Menu

ಚಲಾವಣೆ ನಿಂತ ವಿದೇಶಿ ಕರೆನ್ಸಿ ಮಾರಾಟ

  • Published in ಮೂಡಬಿದ್ರೆ
  • Read 39 times
  • Comments::DISQUS_COMMENTS
ಮೂಡುಬಿದರೆ: ಚಲಾವಣೆ ಇಲ್ಲದ ಬ್ರೆಜಿಲ್ ದೇಶದ ಕರೆನ್ಸಿಯನ್ನು ಜನರಿಗೆ ಸುಳ್ಳು ಹೇಳಿ ಅಕ್ರಮವಾಗಿ ಮಾರಾಟ ಮಾಡಿ ಬಂದಿತನಾದ ಆರೋಪಿಗೆ ಜಾಮೀನು ದೊರೆತಿದೆ.
 
ಮೂಡಬಿದರೆಯ ಪುತ್ತಿಗೆ ಸಮೀಪದ ಮಂಜಿಲ್ ನಿವಾಸಿ ಇಮ್ರಾನ್ (24) ಎಂಬವ ಬ್ರೆಜಿಲ್ ದೇಶದಲ್ಲಿ ಚಲಾವಣೆ ರಹಿತ ಕ್ರುಸಾಡೋ ಹೆಸರಿನ ಕರೆರ್ಣಶೀಯನ್ನು ಉಡುಪಿಯ ಸುತ್ತಮುತ್ತ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯ ಆಧಾರದಲ್ಲಿ ಅಲ್ಲಿನ ಪೋಲಿಸರು ಬಂದಿಸಿದ್ದರು.

ಆರೋಪಿ ಇಮ್ರಾನ್ ಬಳಿಯಿಂದ ಪೋಲಿಸರು ಭಾರತೀಯ ಮೌಲ್ಯದಲ್ಲಿ ಸುಮಾರು 59,24,000 ಬೆಲೆ ಬಾಳುವ ನಕಲಿ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದರು. ಆರೋಪಿ ವಿರುದ್ದ ವಂಚನೆ ಮತ್ತು ಅಪರಾಧಿಕಣಯೋತ್ಪಾದನೆಯ ಪ್ರಕರಣಗಳು ದಾಖಲಾಗಿದ್ದವು. ಇಮ್ರಾನ್ ಪರ ಮೂಡಬಿದರೆ ವಕೀಲ ನಾಗೇಶ್ ಶೆಟ್ಟಿ ಡಿ ಜಾಮೀನು ಅರ್ಜಿ ಸಲ್ಲಿಸಿ ವಾದಿಸಿದ್ದು, ಉಡುಪಿಯ ಒಂದನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಮ್‍ಎಫ್‍ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಬಿಡುಗಡೆಗೊಳಿಸಿದೆ.
More in this category: « ರೋಟರಿ ಟೆಂಪಲ್ ಟೌನ್‍ಗೆ ಪ್ರಶಸ್ತಿ ಗ್ರಾ.ಪಂ ಚುನಾವಣೆ ಸಜ್ಜಾಗುತ್ತಿದೆ ಮೂಡುಬಿದರೆ ಹೋಬಳಿ »
back to top