Menu

ಕಥೊಲಿಕ್ ಸಭಾ ಕಾರ್ಕಳ ವಲಯ ಸಮಿತಿ ವತಿಯಿಂದ ಭಾರತೀಯ ಪುರಾತತ್ವ ಇಲಾಖೆಗೆ ಮನವಿ ಸಲ್ಲಿಕೆ

  • Published in ಕಾರ್ಕಳ
  • Read 27 times
  • Comments::DISQUS_COMMENTS
ಕಾರ್ಕಳ: ಗೋಮಟೇಶ್ವರ ಬೆಟ್ಟದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಬಂಡೆಗಳನ್ನು ತೆರವುಗೊಳಿಸುವಂತೆ ಕಥೊಲಿಕ್ ಸಭಾ ಕಾರ್ಕಳ ವಲಯ ಸಮಿತಿಯು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ ಬಿ.ಕೆ. ಭಜಂತ್ರಿ ಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಮಹಾಮಸ್ತಕಾಭಿಷೇಕದ ಪ್ರಯುಕ್ತ ರಸ್ತೆ ವಿಸ್ತರಣೆಯ ಸಂದರ್ಭದಲ್ಲಿ ವೈಬ್ರೇಟರ್ ಯಂತ್ರದ ಮುಖಾಂತರ ಕೆಳಬದಿಯ ಬಂಡೆಯನ್ನು ಕತ್ತರಿಸುವಾಗ ಮೇಲ್ಗಡೆಯಿರುವ ಬಂಡೆಗಳು ಸ್ವಲ್ಪ ಸ್ಥಾನಪಲ್ಲಟಗೊಂಡಿರುವುದು ಅಲ್ಲದೆ ಒಂದೆರಡು ಚಿಕ್ಕ ಬಂಡೆಗಳು ರಸ್ತೆಗೆ ಉರುಳಿ ಬಿದ್ದಿವೆ. ಈ ಮಳೆಗಾಲದಲ್ಲಿ ಇನ್ನಷ್ಟು ಬಂಡೆಗಳು ರಸ್ತೆಗೆ ಬೀಳುವ ಸಂಭವವಿರುವುದರಿಂದ ಅವುಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ತಿಳಿಸಿದರು.

ವಲಯ ಅಧ್ಯಕ್ಷ ಲೀಯೊ ಸಿಕ್ವೇರಾ, ಮಾಜಿ ಅಧ್ಯಕ್ಷ ಶ್ರೀ ಮೆಕ್ಸಿಂ ಡಿ’ಮೆಲ್ಲೊ, ಸೊಲೊಮನ್ ಆಲ್ವಾರಿಸ್, ಮಾಜಿ ಅಧ್ಯಕ್ಷೆ ಲೀನಾ ಮಿನೇಜಸ್, ಮಿಶೆಲ್ ಮಿನೇಜಸ್, ಕಾರ್ಕಳ ಟೌನ್ ಘಟಕಾಧ್ಯಕ್ಷೆ ಐರಿನ್ ಮಿನೇಜಸ್, ಕಾರ್ಯದರ್ಶಿ ಲಿಲ್ಲಿ ಡಿ’ಸೋಜಾ, ಅತ್ತೂರು ಘಟಕಾಧ್ಯಕ್ಷ, ಡೆನಿಸ್ ಡಿ’ಪಾವ್ಲಾ, ಸಮಾಜ ಸೇವಕ ಹೆನ್ರಿ ಸಾಂತ್‍ಮೇಯರ್ ಮೊದಲಾದವರು ಭೇಟಿ ನೀಡಿದವರಲ್ಲಿ ಪ್ರಮುಖರು.
More in this category: « ಭಕ್ತಿ ಸಡಗರದೊಂದಿಗೆ ಸಂಪನ್ನಗೊಂಡ ಕಾರ್ಕಳ ಮಾರಿಪೂಜೆ ಟೆಕ್ನಾಲಜಿ ಬ್ಯಾರಿಯರ್ ರಿಡಕ್ಷನ್ ಪ್ರೋಗ್ರಾಂ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ »
back to top