Menu

ನೆನೆಗುದ್ದಿಗೆ ಬಿದ್ದ ತಾಲೂಕು ಸರಕಾರಿ ಆಸ್ಪತ್ರೆಯ ಕಟ್ಟಡ

  • Published in ಕಾರ್ಕಳ
  • Read 25 times
  • Comments::DISQUS_COMMENTS
ಕಾರ್ಕಳ: ಸತತ ಆರು ಬಾರಿ ಸೋಲಿಲ್ಲದೇ ಸರದಾನ ಎಂಬ ಹೆಗ್ಗಳಿಕೆಯೊಂದಿಗೆ ಕಾರ್ಕಳದ ಶಾಸಕರಾಗಿ ಯುಪಿಎ ಸರಕಾರದ ಕಾಲಾವಧಿಯಲ್ಲಿ ಕೇಂದ್ರ ಸಚಿವ ಹುದ್ದೆ ಅಲಂಕರಿಸಿದ ಮಾರ್ಪಾಡಿ ಡಾ. ವೀರಪ್ಪ ಮೊೈಲಿಯವರ ಕೊಡುಗೆಯಾಗಿರುವ ತಾಲೂಕು ಸರಕಾರಿ ಆಸ್ಪತ್ರೆಯ ನೂತನ ಕಟ್ಟಡದ ನಿರ್ಮಾಣ ಕಾಮಗಾರಿಯು ನೆನೆಗುದ್ದಿಗೆ ಬಿದ್ದಿದೆ.
ಸಾರ್ವಜನಿಕ ಉದ್ಯಮಿಗಳ ಸಾಮಾಜಿಕ ಬದ್ಧತೆಯ ನೆಲೆಯಲ್ಲಿ ಒಎನ್‍ಜಿಸಿ ಕಂಪೆನಿ ನೀಡಿದ ಆಶ್ವಾಸನೆ ಅರ್ಧಕ್ಕೆ ಮೊಟಕು ಗೊಂಡಿರುವುದು ಇದಕ್ಕೆ ಕಾರಣವೆಂದು ತಿಳಿದುಬಂದಿದೆ. ತಾಲೂಕು ಸರಕಾರಿ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ 98.10 ಲಕ್ಷ ರೂ. ನೀಡುವ ವಾಗ್ದಾನವನ್ನು ನೀಡಿದ ಒಎನ್‍ಜಿಸಿ ಕೇವಲ 25 ಲಕ್ಷ ಅನುದಾನ ನೀಡಿ ಕೈತೊಳೆದುಕೊಳ್ಳುವ ಹಂತದಲ್ಲಿದೆ.
 
2013 ಡಿಸೆಂಬರ್ 22ರಂದು ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಅವರು ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಒಂದು ವರ್ಷ ಅವಧಿಯೊಳಗಾಗಿ ಕಾಮಗಾರಿ ಪೂರ್ಣಗೊಂಡು ಕಟ್ಟಡವು ಅಗತ್ಯದಾರರಿಗೆ ಉಪಯೋಗಿಸುವಂತೆ ಅಗಲೆಂದು ಹಾರೈಸಿದ್ದರು. ಆದರೆ ಅವರು ಕನಸ್ಸು ಭಗ್ನವಾಗಿದೆ.

ಕಟ್ಟಡದ ಕಾರ್ಯಕಲ್ಪ
3874 ಚದರಡಿ ವಿಸ್ತಾರದ ಕೆಳ ಅಂತಸ್ತು, 5068 ಚದರಡಿ ಮೊದಲ ಅಂತಸ್ತು ವಿಸ್ತಾರ ಇರುವಂತಹ ಈ ಕಟ್ಟಡದ ಕೆಳ ಅಂತಸ್ತಿನಲ್ಲಿ 15 ಹಾಸಿಗೆಯುಳ್ಳ ಬೆಡ್ ಹಾಲ್, ಶೌಚಾಲಯ ಹಾಗೂ ಸ್ನಾನಗೃಹ ಮೊದಲ ಅಂತಸ್ತಿನಲ್ಲಿ ಜಾಷಧಉಗ್ರಾಣ, ಸಿಬ್ಬಂದಿಗಳ ವಿಶ್ರಾಂತಿಗೃಹ, ರೋಗಿಗಳನ್ನು ಭೇಟಿ ನೀಡುವ ಸಂದರ್ಶಕರ ವಿಶ್ರಾಂತಿಗೃಹ, ಶೌಚಾಲಯ ಹಾಗೂ ಸ್ನಾನಗೃಹ ಒಳಗೊಂಡು ಕಟ್ಟಡ ನಿರ್ಮಾಣದ ಗುರಿ ಹೊಂದಲಾಗಿತ್ತು.
 
ಕಾಮಗಾರಿ ಆರಂಭಗೊಂಡಿದ್ದು, ಕೆಲ ಅಂತಸ್ತಿನ ಮೇಲ್ಚಾವಣೆ ಪೂರ್ಣಗೊಂಡಿದ್ದು, ಇದಕ್ಕಾಗಿ 33 ಲಕ್ಷ ವ್ಯಯಿಸಲಾಗಿದೆ. ನಿರ್ಮಿತಿ ಕೇಂದ್ರವು ಕಾಮಗಾರಿಯ ಹೊಣೆ ಹೊತ್ತುಕೊಂಡಿದೆ.

ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಡಾ.ವಿಶಾಲ್
ಉಡುಪಿ ಜಿಲ್ಲಾಧಿಕಾರಿ ಡಾ.ವಿಶಾಲ್ ಅವರು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಅಲ್ಲಿನ ವೈದ್ಯಾಧಿಕಾರಿ ಡಾ.ಜ್ಷಾನೇಶ್ ಅವರಿಂದ ಪಡೆದುಕೊಂಡಿದ್ದಾರೆ. ಈ ಸಂಬಂಧ ಒಎನ್‍ಜಿಸಿಯೊಂದಿಗೆ ಮಾತುಕತೆ ನಡೆಸಿರುವ ಮಾಹಿತಿ ಲಭಿಸಿದೆ.

ನೂತನ ಕಟ್ಟಡ ಅಗತ್ಯ
-ಡಾ.ಜ್ಞಾನೇಶ್ ಕಾಂತ್
ರೋಗಿಗಳ ಸಂಖ್ಯೆ ಹೆಚ್ಚಳವಾಗಿರುವುದ ನೂತನ ಕಟ್ಟಡದ ಅಗತ್ಯ ಇದೆ. ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ವಿಶಾಲ್ ಅವರು ಮುತುವರ್ಜಿವಹಿಸಿ ಒಎನ್‍ಜಿಸಿಯೊಂದಿಗೆ ಮರುಒಪ್ಪಂದ ಏರ್ಪಡಿಸಿದ್ದಾರೆ. ಅದಕೆಕ ಸಕಾರತ್ಮಕ ಸ್ವಂದನೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಉದ್ಯಮಿಗಳ ಸಾಮಾಜಿಕ ಬದ್ಧತೆ ನಿಯಾಮಾನುಸಾರ ಒಎನ್‍ಜಿಸಿಯಿಂದ ಅನುದಾನ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ.

*ಆರ್.ಬಿ.ಜಗದೀಶ್
More in this category: « ಸೌಂದರ್ಯಕರಣ ನೆಪದಲ್ಲಿ ನಡೆಯಿತು ಕಳಪೆಗುಣಮಟ್ಟದ ಕಾಮಗಾರಿ ಸ್ವಚ್ಚತೆಯಲ್ಲಿ ಬಲು ದೂರ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆ »
back to top