Menu

ಪ್ರಕೃತಿ ವಿದ್ಯಾ ಸಂಸ್ಥೆಯಲ್ಲಿ ಶಾಲಾ ಪ್ರಾರಂಭೋತ್ಸವ.

  • Published in ಕಾರ್ಕಳ
  • Read 30 times
  • Comments::DISQUS_COMMENTS
ಕಾರ್ಕಳ: ವಿದ್ಯಾರ್ಥಿಗಳು ವಿದ್ಯಾಸಂಸ್ಥೆಯ ಆಸ್ತಿ. ಯುವಜನಾಂಗ ದೇಶದ ಬೆನ್ನೆಲುಬು ಆಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಿಸ್ತು-ಸಂಯಮ-ಪ್ರಮಾಣಿಕತೆ-ಛಲವನ್ನು ಜೀವನದಲ್ಲಿ ಅಳವಡಿಕೊಂಡಲ್ಲಿ ದೇಶದ ಪ್ರಮುಖ ಸ್ಥಾನವನ್ನು ಅಲಂಕರಿಸುವಲ್ಲಿ ಯಶಸ್ಸು ಸಾಧ್ಯವೆಂದು ಪ್ರೋ.ಪದ್ಮನಾಭ ಗೌಡ ಹೇಳಿದರು.
 
ಅವರು ಕಾಂತಾವರದ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ ಶಾಲಾ ಪ್ರಾರಂಭೋತ್ಸವದೊಂದಿಗೆ ಪಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ತಮ್ಮ ಮಕ್ಕಳನ್ನು ದಾಖಲಾತಿ ಮಾಡಿದ ಪಾಲಕರನ್ನು ಅಭಿನಂದಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ಅಶೋಕ್ ಕುಮಾರ್ ಕೆ ಮಾತನಾಡಿ, ಸಂಸೃತಿ-ಸಂಸ್ಕಾರಗಳು ಮನೆಯಿಂದಲೇ ಆರಂಭಗೊಳ್ಳಬೇಕು. ಅದರ ಮೊದಲ ಶಿಕ್ಷಕರು ಹೆತ್ತವರು ಆಗಿದ್ದಾರೆ. ನಂತರದ ಸ್ಥಾನವು ಶಿಕ್ಷಣ ಸಂಸ್ಥೆಯ ಶಿಕ್ಷಕರಿಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿದ್ಯಾ ಸಂಸ್ಥೆಯಲ್ಲಿ ಮತ್ತು ವಸತಿ ನಿಲಯದ ಪಾಲಿಸ ಬೇಕಾದ ನಿಯಮ ಮತ್ತು ಶಿಸ್ತಿನ ಕುರಿತು ಸವಿವರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾರ್ಚ್ 2015ರಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಅಮನ್, ವಿಕ್ರಮ್, ಬಾಲಕೃಷ್ಣ ಭಟ್, ಶೈಮಾ ರಿಫಾತ್, ಆದರ್ಶ ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ಕ್ರಿಸ್ಪೀನ್ ಜೆರಾಲ್ಡ್ ಕ್ರಾಸ್ತಾ , ಸಿ.ಬಿ.ಎಸ್.ಸಿ ಪ್ರಾಂಶುಪಾಲ ಗಜಾನನ ಭಟ್‍ಉಪಸ್ಥಿತ ರಿದ್ದರು. ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ವಿನಾಯಕ್ ಜೋಗ್ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕ ರಾಮಕೃಷ್ಣ ಹೆಗಡೆ ವಂದಿಸಿದರು.
More in this category: « ಸ್ವಚ್ಚತೆಯ ಹೆಸರಿನಲ್ಲಿ ದೊರಕಿತು ಪಾಳುಬಿದ್ದ ಶಾಚಾಲಯಕ್ಕೆ ಮುಕ್ತಿ ಶಾಸಕರ ಹಸ್ತಕ್ಷೇಪಕ್ಕೆ ಸಾಮಾನ್ಯಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರಿಂದ ಅಕ್ಷೇಪ »
back to top