Menu

ಕಾರ್ಕಳ: ಇಟ್ ಎಂಡ್ ರನ್ ಆರೋಪಿ ವಿರುದ್ಧ ಕೇಸುದಾಖಲು

  • Published in ಕಾರ್ಕಳ
  • Read 52 times
  • Comments::DISQUS_COMMENTS
ಕಾರ್ಕಳ: ಬೈಕ್‍ಗೆ ಡಿಕ್ಕಿ ಹೊಡೆದ ಕಾರೊಂದು ಘಟನಾ ಸ್ಥಳದಲ್ಲಿ ನಿಲ್ಲಿಸದೇ ತೆರಳಿದ ಘಟನೆ ನಗರದ ಪೆರ್ವಾಜೆ ಎಂಬಲ್ಲಿ ನಡೆದಿದೆ.

ಪೆರ್ವಾಜೆ ಮಹಾಲಿಂಗೇಶ್ವರ ದೇವಳ ಬಳಿಯ ಸದಾನಂದ ರಾವ್ ಎಂಬವರು ತನ್ನ ಪತ್ನಿ ತುಳಸಿ ಎಂಬವರನ್ನು ಬೈಕ್‍ನಲ್ಲಿ ಸಹಸವಾರರನ್ನಾಗಿ ಕುಳಿರಿಸಿ ಕಾರ್ಕಳ ಪೇಟೆಗೆ ತೆರಳುತ್ತಿದ್ದಾಗ ಪೆರ್ವಾಜೆ ರಸ್ತೆಯಲ್ಲಿ ಅದೇ ದಾರಿಯಾಗಿ ಹಿಂಬದಿಯಿಂದ ಬಂದ ಮಾರುತಿ ಸಿಲೆರಿಯಾ ಕಾರು ರಸ್ತೆಯ ತೀರಾ ಬಲ ಬದಿಯಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿತು.

ಕಾರಿನ ಮಾಲಕ ಸದಾನಂದ ಶೆಟ್ಟಿ ಅಪಘಾತಕ್ಕೆ ಕಾರಣಕರ್ತರಾಗಿದ್ದು, ಘಟನೆಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವುದಾಗಲಿ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ರವಾಹಿಸದೇ ತೆರಳಿದ್ದರು.
 
ಸದಾನಂದ ರಾವ್ ನೀಡಿರುವ ದೂ&ರಿನನ್ವಯ ಆರೋಪಿ ರಾಧಾಕೃಷ್ಣ ಶೆಟ್ಟಿ ವಿರುದ್ಧ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.
More in this category: « ಶಾಸಕರ ಹಸ್ತಕ್ಷೇಪಕ್ಕೆ ಸಾಮಾನ್ಯಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರಿಂದ ಅಕ್ಷೇಪ ಜಾಗದ ತಕರಾರು ಜೀವ ಬೆದರಿಕೆ »
back to top