Menu

ಬದಿಯಡ್ಕ ವಿದ್ಯಾಪೀಠದಲ್ಲಿ ಶಾಲಾ ಪ್ರವೇಶೋತ್ಸವ

  • Published in ಕಾರ್ಕಳ
  • Read 39 times
  • Comments::DISQUS_COMMENTS
ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ 2015-16ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶೋತ್ಸವವು ಸೋಮವಾರ ನಡೆಯಿತು. ಬೆಳಗ್ಗೆ ವೇ.ಮೂ.ಕುಮಾರ ಭಟ್ ಅವರ ನೇತೃತ್ವದಲ್ಲಿ ಗಣಪತಿ ಹೋಮ ಜರಗಿತು. 10 ಘಂಟೆಗೆ ನಡೆದ ಸಭಾಕಾರ್ಯಕ್ರವನ್ನು ನಿವೃತ್ತ ಮುಖ್ಯೋಪಾಧ್ಯಾಯ ರಾಮಭಟ್ ಎಡೆಕ್ಕಾನ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡುತ್ತಾ ಕತ್ತಲೆಯು ದೂರವಾಗಿ ಬೆಳಕು ಚೆಲ್ಲಲಿ ಎಂದರು. ಇಂದಿನ ಮಕ್ಕಳಿಗೆ ಪೂರ್ಣ ಸವಲತ್ತುಗಳು ಶಾಲೆಗಳಲ್ಲಿ ಸಿಗುತ್ತದೆ. ಮಕ್ಕಳು ಅದನ್ನು ಸಮಯೋಚಿತವಾಗಿ ಸದುಪಯೋಗಪಡಿಸಿಕೊಳ್ಳಬೇಕು. ಕಠಿಣವಾಗಿ ದುಡಿಯುವ ಶಿಕ್ಷಕರು ಈ ಶಾಲೆಯಲ್ಲಿದ್ದಾರೆ ಎಂದರು. ಶಾಲೆಯ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
 
ಗೋಕರ್ಣ ಮಂಡಲಾಧ್ಯಕ್ಷ ಡಾ. ವೈ.ವಿ.ಕೃಷ್ಣಮೂರ್ತಿ ಸಭಾಧ್ಯಕ್ಷರಾಗಿದ್ದರು. ಪ್ರತೀ ವರ್ಷ ಹೊಸ ಹೊಸ ಯೋಜನೆಗಳೊಂದಿಗೆ ವಿದ್ಯಾಪೀಠದ ಶೈಕ್ಷಣಿಕ ವರ್ಷ ಆರಂಭಗೊಳ್ಳುತ್ತದೆ. ಈ ಬಾರಿ ಕೇರಳ ಸರಕಾರದ ಅಂಗೀಕಾರ ಲಭಿಸಿರುವುದು ಸಂತೋಷದಾಯಕವಾಗಿರುತ್ತದೆ. ಇದಕ್ಕಾಗಿ ಶ್ರಮಿಸಿದ ಎಲ್ಲಾ ಮಹನೀಯರುಗಳನ್ನೂ, ಮಾಧ್ಯಮ ಪ್ರತಿನಿ
ಧಿಗಳನ್ನೂ, ಸಮಾಜಸೇವಕರನ್ನೂ, ಅಧಿಕಾರಿಗಳು, ಆಡಳಿತ ವರ್ಗದವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇವೆ ಎಂದರು.

ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಅವರು ಈ ಶೈಕ್ಷಣಿಕ ವರ್ಷವನ್ನು ಯಾವ ರೀತಿ ನಡೆಸಿಕೊಂಡು ಹೋಗಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು.
 
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಲೀಲಾವತಿ ಕನಕಪ್ಪಾಡಿ, ಎಂಜಿನಿಯರ್ ಕೆ.ಎನ್.ಭಟ್, ಶಾಲಾ ಕಾರ್ಯದರ್ಶಿ ರಾಜಗೋಪಾಲ ಚುಳ್ಳಿಕ್ಕಾನ, ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಜಯಪ್ರಕಾಶ ಪಜಿಲ ಮುಂತಾದವರು ಉಪಸ್ಥಿತರಿದ್ದರು.

10ನೇ ತರಗತಿಯ ಅನುಶ್ರಿ ಕಾರ್ಯಕ್ರಮ ನಿರೂಪಣೆ ಮಾಡಿದರು. 10ನೇ ತರಗತಿಯ ದೀಕ್ಷಿತಾ ಸ್ವಾಗತಿಸಿದರು. 10ನೇ ತರಗತಿಯ ರವಿಕೃಷ್ಣ ಧನ್ಯವಾದ ಅರ್ಪಿಸಿದನು.
More in this category: « ಸಿಇಟಿ ಪರೀಕ್ಷೆ :ಅರ್ಕೆಟೆಕ್ ವಿಭಾಗ ಅಂಜಲಿಗೆ ನಾಲ್ಕನೇ ಸ್ಥಾನ
back to top