Menu

ತಂಡದಿಂದ ವೈದ್ಯನ ದರೋಡೆ

  • Published in ಉಳ್ಳಾಲ
  • Read 52 times
  • Comments::DISQUS_COMMENTS
ಉಳ್ಳಾಲ: ನಾಲ್ಕು ಜನರ ತಂಡವೊಂದು ವೈದ್ಯರೋರ್ವರಿಗೆ ಕಲ್ಲಿನಿಂದ ತಲೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ದರೋಡೆಗೈದಿರುವ ಘಟನೆ ದೇರಳಕಟ್ಟೆ ಎಂಬಲ್ಲಿ ಸೋಮವಾರ ತಡರಾತ್ರಿ ವೇಳೆ ನಡೆದಿದೆ.
 
ಡಾ.ಟಿಟ್ಟು ಝಚಾರಿಯ ದರೋಡೆಗೊಳಗಾದವರು. ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಟಿಟ್ಟು ಕುತ್ತಾರಿನ ಸಾಗರ್ ಬಾರಿನಲ್ಲಿ ಊಟಕ್ಕೆ ಹೋಗಿದ್ದರು. ಅಲ್ಲಿ ನಾಲ್ವರ ತಂಡ ವೈದ್ಯರ ಜತೆಗೆ ಮಾತನಾಡಿ ತಮ್ಮನ್ನು ಪರಿಚಯಿಸಿ ತಾವು ಕೂಡಾ ದೇರಳಕಟ್ಟೆಗೆ ಹೋಗುವವರೆಂದು ಎರಡು ಬೈಕುಗಳಲ್ಲಿದ್ದ ಅವರು ವೈದ್ಯ ಟಿಟ್ಟು ಅವರನ್ನು ಕರೆದೊಯ್ದಿದ್ದರು. ಅಲ್ಲಿಂದ ನೇರ ದೇರಳಕಟ್ಟೆ ಕಣಚೂರು ಆಸ್ಪತ್ರೆ ಹಿಂಭಾಗಕ್ಕೆ ಕರೆದೊಯ್ದ ತಂಡದಲ್ಲಿದ್ದ ಓರ್ವ ಮೊಬೈಲ್ ಫೋನನ್ನು ಕಿತ್ತುಕೊಂಡಿದ್ದಾನೆ. ಬಳಿಕ ಉಳಿದವರು ವೈದ್ಯರ ತಲೆಗೆ ಕಲ್ಲಿನಿಂದ ಹೊಡೆದು ಅವಾಚ್ಯವಾಗಿ ನಿಂದಿಸಿ ರೂ.1,200 ನಗದು, ಎಟಿಎಂ ಕಾರ್ಡು, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇದ್ದ ಪರ್ಸನ್ನು ಮತ್ತು ಸುಮಾರು 18 ಗ್ರಾಂ ತೂಕದ ಚಿನ್ನದ ಚೈನನ್ನು ಲೂಟಿಗೈದಿದ್ದಾರೆ.

ಬಳಿಕ ತಂಡದಿಂದ ತಪ್ಪಿಸಿಕೊಂಡ ವೈದ್ಯ ಸ್ಥಳದಿಂದ ಓಡಿ ಪರಾರಿಯಾಗಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಬೆಳಿಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳೆಲ್ಲರೂ ಮಲಯಾಳಿ ಭಾಷೆಯಲ್ಲಿ ಮಾತನಾಡುತ್ತಿದ್ದರೆಂದು ದೂರಿನಲ್ಲಿ ತಿಳಿಸಿದ್ದಾರೆ.
More in this category: « ಬೋಳಿಯಾರು: ಸಚಿವ ಯು.ಟಿ.ಖಾದರ್ ಮತ ಚಲಾವಣೆ ರಸ್ತೆಗೆ ತ್ಯಾಜ್ಯ ನೀರು: ಬಾರ್ -ಕಾರು ಮಾರಾಟ ಮಳಿಗೆಗೆ ನೋಟೀಸು »
back to top