Menu

ವಿವಿಧೆಡೆ ಗಾಳಿ, ಮಳೆ: ಅಪಾರ ನಷ್ಟ

  • Published in ಕೇರಳ
  • Read 23 times
  • Comments::DISQUS_COMMENTS
ಬದಿಯಡ್ಕ: ಪೆರ್ಲ, ಬದಿಯಡ್ಕ, ಮುಳ್ಳೇರಿಯ ಪರಿಸರದ ವಿವಿಧೆಡೆ ಮಂಗಳವಾರ ರಾತ್ರಿ ಮತ್ತು ಬುಧವಾರ ಮುಂಜಾನೆಯ ವೇಳೆಗೆ ಗಾಳಿ, ಮಳೆ ಸುರಿದಿದ್ದು, ಕೆಲವಡೆಗೆ ವ್ಯಾಪಕ ನಾಶ - ನಷ್ಟ ಸಂಭವಿಸಿದೆ. 
 
ಬುಧವಾರ ದಿನವೀಡಿ ಮೊಡ ವಾತಾವರಣವಿದ್ದು, ಕೆಲವೆಡೆ ಹನಿಹನಿ ಮಳೆಯಾಗಿದೆ.

ಮುಳ್ಳೇರಿಯ ಸಮೀಪದ ಅಡೂರಿನಲ್ಲಿ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದು ದಿನವಿಡೀ ಪದೇ ಪದೇ ವಿದ್ಯುತ್ ಕೈಕೊಟ್ಟಿದೆ. ಮುಳ್ಳೇರಿಯ ಪಾರ್ಥಕೊಚ್ಚಿ ಸಮೀಪದಲ್ಲಿ 8 ವಿದ್ಯುತ್ ಕಂಬಗಳು ಧರೆಗುಳಿದೆ. ಎಡನೀರಿಗೆ ಸಮೀಪದ ಎರ್ದುತ್ತೋಡಿನ ಕೊಗ್ಗು ಎಂಬವರ ಮನೆಗೆ ಸಿಡಿಲು ಬಡಿದು ಮನೆಯೊಳಗಿದ್ದ ಮಗುವಿಗೆ ಗಾಯವುಂಟಾಗಿದ್ದು, ವಯಲಿಂಗ್ ಹಾಗೂ ವಿದ್ಯುತ್ ಉಪಕರಣ ನಾಶಗೊಂಡಿದೆ. ಕುಂಬಳೆ -ಮಾಟ್ಟಂಗೇರಿಯ ಸುಂದರಿ ಎಂಬವರ ಮನೆಗೆ ಮರ ಬಿದ್ದು ಅಡುಗೆ ಕೋಣೆ ¸ಕುಸಿದು ಬಿದ್ದಿದೆ. ಕುಂಬಳೆ ಸಿ.ಯಚ್.ಸಿ ರಸ್ತೆಗೆ ಬುಧವಾರ ಬೆಳಿಗ್ಗೆ ಮರಬಿದ್ದು ಸಾರಿಗೆ ಸಂಚಾರ ಅಡಚಣೆ ಉಂಟಾಗಿದೆ.

ಬೋವಿಕ್ಕಾನ ರಸ್ತೆಯಲ್ಲಿ ಬುಧವಾರ ಮರ ಬಿದ್ದು ಸಾರಿಗೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಅಗ್ನಿಶಾಮಕ ದಳದವರು ಆಗಮಿಸಿ ಮರ ಕಡಿದು ಸಾರಿಗೆ ಸಂಚಾರವನ್ನು ಸುಗಮ ಗೊಳಿಸಿದರು.

ನಗರದ ಅಡ್ಕತ್ತಬೈಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ರಸ್ತೆಗೆ ಮರಬಿದ್ದು ಸಾರಿಗೆ ಸಂಚಾರಕ್ಕೆ ಅಡಚಣೆಯುಂಟಾಗಿದ್ದು ಅಗ್ನಿಶಾಮಕ ದಳ ತೆರವುಗೊಳಸಿದ್ದಾರೆ.
More in this category: « ಪೆರ್ಲದಲ್ಲಿ ಬ್ಯಾರಿ ಸಾಹಿತ್ಯ ಆಕಾಡೆಮಿಯಿಂದ ಗಡಿನಾಡ ಕುಟುಂಬ ಸಮ್ಮಿಲನ ಬದಿಯಡ್ಕ: ವ್ಯಾಪಾರಿ ಏಕೋಪನ ಸಮಿತಿ ಸಭೆ »
back to top