Menu

ಗೋ ಯಾತ್ರೆ: ಸೀತಾಂಗೋಳಿಯಲ್ಲಿ ಭವ್ಯ ಸ್ವಾಗತ

  • Published in ಕೇರಳ
  • Read 25 times
  • Comments::DISQUS_COMMENTS
ಬದಿಯಡ್ಕ: ಗೋ ತಳಿಯ ವಿಶೇಷ ಸಂರಕ್ಷಣ ಕೇಂದ್ರವಾದ ಬಜಕೂಡ್ಲು ಅಮೃತಧಾರ ಗೋ ಶಾಲೆಯ ನೂತನ ಸಮುಚ್ಚಯದ ಲೋಕಾರ್ಪಣೆಯ ಸಂದರ್ಭದಲ್ಲಿ ದೇಶಿಯ ತುಪ್ಪದಿಂದಲೇ ಆರತಿ ಬೆಳಗುವ ಅನಂತ ನೀರಾಜನ ಗೋ ಯಾತ್ರೆಗೆ ಸೀತಾಂಗೋಳಿಯಲ್ಲಿ ಭವ್ಯ ಸ್ವಾಗತ ನೀಡಲಾಯಿತು.
  
 
ಮಾನಸ ಮುನ್ಚಿಕಾನ ಗೋ ಗೀತೆಗಳನ್ನು ಹಾಡಿದರು. ಗೋ ಅಭಿಮಾನಿಗಳು ದೇಶೀ ತುಪ್ಪ ಬಳಸಿದ ಆರತಿ ಬೆಳಗಿದರು. ಇಂದು ಯುವ ತಲೆಮಾರಿನಲ್ಲಿ ಭಾವನಾತ್ಮಕ ಮನಸ್ಸು ಇಲ್ಲ. ಮಾನವೀಯ ಸಂಬಂಧಗಳು ಕ್ಷೀಣಿಸುತ್ತಿವೆ ಎನ್ನುತ್ತೇವೆ. ವೈಜ್ಞಾನಿಕ ಅಧ್ಯಯನಗಳೂ ಶೇ. 40 ಮಂದಿಗೆ ಭಾವನಾತ್ಮಕ ಮನಸ್ಸು ಇಲ್ಲ ಎನ್ನುತ್ತಿದೆ. ಅಂತಹ ಮನಸ್ಸು ಮನೆಯಲ್ಲಿ ನಿರ್ಮಾಣಕ್ಕೆ ದೇಶೀಯ ಗೋ ಸಾಕಣೆ ಒಂದೇ ದಾರಿ. ಹಿಂದಿನವರು ಗೋವು ಮತ್ತು ನಾವು ಎಂದು ಬದುಕಿದ್ದರು ಎಂಬುದಾಗಿ ಚಂದ್ರಶೇಖರ ಏತಡ್ಕ ಹೇಳಿದರು.
More in this category: « ಕಾಸರಗೋಡು ಗೋ ತಳಿ ಸಾಕಣೆ ಕೇಂದ್ರ: ಉದ್ಘಾಟನೆಗೊಂಡರೂ ಕಾರ್ಯಾರಂಭಗೊಂಡಿಲ್ಲ ಕನ್ನೆಪ್ಪಾಡಿಯಲ್ಲಿ ಹೆಣ್ಮಕ್ಕಳ ವಸಂತ ಶಿಬಿರ ಸಮಾರೋಪ »
back to top