Menu

ಹರೀಶ್ ಪೆರ್ಲರ ನಿರ್ಭಾವ ಆತ್ಮಕಥಾ ಕೃತಿ ಅವಲೋಕನ

  • Published in ಕೇರಳ
  • Read 16 times
  • Comments::DISQUS_COMMENTS
ಬದಿಯಡ್ಕ: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಮನೆಮನೆ ಕನ್ನಡ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಪೆರ್ಲದ ಗುಲಾಬಿ ನಿವಾಸದಲ್ಲಿ ಹಿರಿಯ ಕವಿ ಹರೀಶ್ ಪೆರ್ಲರ ಆತ್ಮಕಥೆ ನಿರ್ಭಾವ ಕೃತಿಯ ಬಿಡುಗಡೆ ಹಾಗೂ ಅವಲೋಕನ ಕಾರ್ಯಕ್ರಮ ಜರಗಿತು.
 
ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕಾಧ್ಯಕ್ಷ ಎಸ್. ವಿ. ಭಟ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಲೇಖಕ ನರೇಂದ್ರ ರೈ ದೇರ್ಲ ಅವರು ಆತ್ಮಚರಿತ್ರೆ ನಡೆದು ಬಂದ ದಾರಿ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಕನ್ನಡ ಭಾಷೆಗೆ ಸಂಬಂ„ಸಿ ಆತ್ಮಕಥೆಗಳಲ್ಲಿ ಸ್ವಪ್ರತಿಷ್ಠೆ ಹಾಗೂ ಪರನಿಂದೆಗಳು ಕಾಣಿಸುತ್ತವೆ. ವಾಸ್ತವಾಂಶಗಳಿಗೆ ದೂರವಾದ ರೋಚಕತೆಯನ್ನು ತುರುಕುವ ಯತ್ನಗಳು ಬರಹದಲ್ಲಿ ಥಳುಕುಹಾಕುತ್ತವೆಯೆಂದು ತಿಳಿಸಿದ ಅವರು ವಸ್ತುನಿಷ್ಠ ಬರಹಗಳು ಹರೀಶರ ಆತ್ಮಕಥಾ ಕೃತಿಯಲ್ಲಿ ಮೂಡಿಬಂದಿರುವುದು ಶ್ಲಾಘನೀಯ ಎಂದರು.
 
ಆತ್ಮಕಥೆಗಳಲ್ಲಿ ಪ್ರಮಾಣಿಕತೆಯ ಪಾತ್ರ ಎಂಬ ವಿಷಯದಲ್ಲಿ ಮಾತನಾಡಿದ ವಾಮದಪದವು ಸರಕಾರಿ ಕಾಲೇಜಿನ ಉಪನ್ಯಾಸಕ ಡಾ| ಸುಬ್ರಹ್ಮಣ್ಯ ಭಟ್ ಕೆ ಅವರು ಬದಲಾದ ಧೋರಣೆಗಳ ಇಂದಿನ ಕಾಲಘಟ್ಟದಲ್ಲಿ ಅಭಿವ್ಯಕ್ತತೆಯಲ್ಲಿ ಮುಕ್ತ ವಾತಾವರಣ ಇದೆ. ಚಾರಿತ್ರಿಕ ಅಂಶಗಳ ವಸ್ತುನಿಷ್ಠ ಬರಹ ಹಾಗೂ ಸೃಜನಾತ್ಮಕಥೆಗಳ ಭಾವನಿಷ್ಠ ಬರಹಳು ಕನ್ನಡ ಆತ್ಮಕಥೆಗಳಲ್ಲಿ ಸಾಕಷ್ಟು ಕಂಡುಬಂದಿದೆಯೆಂದು ಅಭಿಪ್ರಾಯಪಟ್ಟರು.
 
 
ನಿರ್ಭಾವ ಕೃತಿಯ ಅವಲೋಕ ನಡೆಸಿದ ಖ್ಯಾತ ಸಾಹಿತಿ, ಚಿಂತಕ ಮಾ.ಭ. ಪೆರ್ಲ ಮಾತನಾಡಿ ನೋವು ನಲಿವುಗಳ ಹರೀಶ್ ಪೆರ್ಲರ ಜೀವನ ಕೃತಿಯಲ್ಲಿ ಕವಿಯ ಸ್ವಭಾವದಂತೆ ಹಾಸ್ಯದೊಡನೆ ಮೇಳೈಸಿ ಓದುಗರನ್ನು ಗೆಲ್ಲುವಲ್ಲಿ ಯಶಸ್ವಿಯಾಗುವುದು. ಬದುಕು ಮತ್ತು ಬರಹಗಳು ಒಂದೇ ಆಗಿದ್ದಾಗ ಓದುಗನಿಗೆ ನೈಜತೆಯ ಅರಿವಿನ ಪಾಠ ಸುಲಭಗೊಳ್ಳುವುದೆಂದರು. ಕೃತಿಕಾರ ಹರೀಶ್ ಪೆರ್ಲ, ಹಿರಿಯ ಸಾಹಿತಿ,ಸಂಶೋಧಕ ಡಾ| ಕೆ.ವಿ. ತಿರುಮಲೇಶ್, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ, ನಿವೃತ್ತ ಉಪನ್ಯಾಸಕಿ ಡಾ| ಯು. ಮಹೇಶ್ವರಿ, ಮೂಡುಬಿದ್ರಿ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಟಿ.ಎ.ಎನ್. ಖಂಡಿಗೆ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಗೀತ ವಿದ್ವಾಂಸ ರಾಮಪ್ರಸಾದ್ ಕಾಂಚೋಡು ಅವರಿಂದ ಕಾಸರಗೋಡಿನ ಪ್ರಸಿದ್ದ ಕವಿಗಳ ಆಯ್ದ ಕವನಗಳ ಗಾಯನ ಕಾರ್ಯಕ್ರಮ ನಡೆಯಿತು. ಉಪನ್ಯಾಸಕಿ ಕವಿತಾ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ರಾಮ ಗಣೇಶ್ ಪ್ರಭು ಸ್ವಾಗತಿಸಿ, ಘಟಕದ ಗೌರವ ಕಾರ್ಯದರ್ಶಿ ರಾಮಚಂದ್ರ ಭಟ್ ಪಿ. ಧರ್ಮತ್ತಡ್ಕ ವಂದಿಸಿದರು.
More in this category: « ಕನ್ನೆಪ್ಪಾಡಿಯಲ್ಲಿ ಹೆಣ್ಮಕ್ಕಳ ವಸಂತ ಶಿಬಿರ ಸಮಾರೋಪ ಬಜಕ್ಕೂಡ್ಲು ಅಮೃತಧಾರಾ ಗೋಶಾಲೆಯ ನೂತನ ಕಟ್ಟಡದ ಲೋಕಾರ್ಪಣೆ »
back to top