Menu

ಬಜಕ್ಕೂಡ್ಲು ಅಮೃತಧಾರಾ ಗೋಶಾಲೆಯ ನೂತನ ಕಟ್ಟಡದ ಲೋಕಾರ್ಪಣೆ

  • Published in ಕೇರಳ
  • Read 28 times
  • Comments::DISQUS_COMMENTS
ಬದಿಯಡ್ಕ: ಹೊಸನಗರ ಶ್ರೀರಾಮಚಂದ್ರಾಪುರ ಮಠದ ಕಾಮದುಘಾ ಯೋಜನೆಯ ಅಂಗವಾಗಿ ಕಾಸರಗೋಡು ಗಿಡ್ಡ ತಳಿಯ ಹಸುಗಳ ಸಂರಕ್ಷಣೆ, ಸಂವರ್ಧನೆ ಮತ್ತು ಸಂಬೋಧನೆಯ ಉದ್ದೇಶದಿಂದ ಕಾಸರಗೋಡು ಬ್ರೀಡ್ ಕನ್ಸರ್ವೇಶನ್ ಚಾರಿಟೆಬಲ್ ಟ್ರಸ್ಟ್ ಕೈಗೆತ್ತಿಕೊಂಡಿರುವ ಬಜಕ್ಕೂಡ್ಲು ಅಮೃತಧಾರಾ ಗೋಶಾಲೆಯ ನೂತನ ಕಟ್ಟಡದ ಲೋಕಾರ್ಪಣೆಯ ಸುರಭಿ ಸಮರ್ಪಣಮ್ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.
 
ಇದರ ಅಂಗವಾಗಿ ಶ್ರೀಮಹಾಗಣಪತಿ ಹವನ, ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ರುದ್ರಸೇವೆ ಜರಗಿತು. ಬಳಿಕ ಬ್ರಹ್ಮಶ್ರೀ ರವೀಶತಂತ್ರಿ ಕುಂಟಾರು ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗೋಕರ್ಣ ಮಂಡಲಾಧ್ಯಕ್ಷ ಡಾ| ವೈ.ವಿ.ಕೃಷ್ಣಮೂರ್ತಿ, ಸಂಕಪ್ಪ ರೈ ಬಜಕೂಡ್ಲು, ಮಹಾಲಿಂಗೇಶ್ವರ ಭಜನ ಸಂಘದ ಅಧ್ಯಕ್ಷ ಸುಬ್ಬ ನಾಯ್ಕ ಪಳ್ಳಕ್ಕಾನ, ಜಗದೀಶ್ ಗೋಳಿತ್ತಡ್ಕ, ಬಿ.ವಿ. ನಾರಾಯಣ ಭಟ್, ನಾರಾಯಣ ಭಟ್ ದಂಬೆಮೂಲೆ, ಜಿ.ಟಿ. ದಿವಾಕರ, ಶ್ರೀಧರ ಭಟ್, ವಿಷ್ಣು ಬನಾರಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಳಿಕ ಎಣ್ಮಕಜೆ ವಲಯ ಭಜನ ಮಂಡಳಿಗಳ ನೇತೃತ್ವದಲ್ಲಿ ನಿರಂತರ ಭಜನ ಕಾರ್ಯಕ್ರಮ ಜರಗಿತು. ಸಂಜೆ ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದ ಪರಿಸರದಿಂದ ಗೋಜ್ಯೋತಿ ರಥದೊಂದಿಗೆ ಹೊರೆಕಾಣಿಕೆ ಮೆರವಣಿಗೆ ಶೋಭಾಯಮಾನವಾಗಿ ಜರಗಿತು.
More in this category: « ಹರೀಶ್ ಪೆರ್ಲರ ನಿರ್ಭಾವ ಆತ್ಮಕಥಾ ಕೃತಿ ಅವಲೋಕನ `ಅಧ್ಯಾಪಕ ಜ್ಞಾನ ಭಂಡಾರ ವಿಸ್ತರಿಸಿಕೊಳ್ಳಲಿ' »
back to top