Menu

`ಅಧ್ಯಾಪಕ ಜ್ಞಾನ ಭಂಡಾರ ವಿಸ್ತರಿಸಿಕೊಳ್ಳಲಿ'

  • Published in ಕೇರಳ
  • Read 7 times
  • Comments::DISQUS_COMMENTS
ಬದಿಯಡ್ಕ: ಉತ್ತಮ ಬೋಧನೆಯ ಮೂಲಕ ವಿದ್ಯಾರ್ಥಿಗಳನ್ನು ಮುನ್ನಡೆಸ ಬೇಕಾದರೆ ಅಧ್ಯಾಪಕ ಮೊದಲು ಮಾಹಿತಿಗಳಿಂದ ಸಂಪ್ತಭರಿತನಾಗಬೇಕು. ಶಿಕ್ಷಕರ ಕರ್ತವ್ಯ ಜವಾಬ್ದಾರಿಯುತವಾದುದು. ಈ ಆಧುನಿಕ ಕಾಲದಲ್ಲಿ ಲಭ್ಯವಾಗುವ ತಂತ್ರಜ್ಞಾನ, ಸಂಪನ್ಮೂಲ, ತರಬೇತಿಗಳ ಮೂಲಕ ಅಧ್ಯಾಪಕ ತನ್ನ ಅನುಭವ, ಜ್ಞಾನ ಭಂಡಾರವನ್ನು ವಿಸ್ತರಿಸಿಕೊಳ್ಳಬೇಕು ಎಂದು ಬೇಕೂರು ಹೈಯರ್ ಸೆಕೆಂಡರಿ ಶಾಲೆಯ ಪ್ರಭಾರ ಪ್ರಾಂಶುಪಾಲ ಚಂದ್ರಸಾಸ ಪಿ. ಹೇಳಿದರು.
 
ಕುಂಬಳೆ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರೌಢ ಶಾಲಾ ಕನ್ನಡ ಭಾಷಾ ಅಧ್ಯಾಪಕರಿಗಾಗಿ ನಡೆಯುತ್ತಿರುವ ಐದು ದಿನಗಳ ಸಮಗ್ರ ಶಿಕ್ಷಕ ಪರಿವರ್ತನಾ ತರಬೇತಿ ವಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
ಕುಂಬಳೆ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾ ಯಿನಿ ಶೋಭಾ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ವಿಶಾಲಾಕ್ಷ ಪುತ್ರಕಳ, ಶಶಿಕಲಾ ಕೆ., ರೋಹಿತಾಕ್ಷಿ ಕೆ.ಬಿ. ಉಪಸ್ಥಿತರಿದ್ದರು. ಸುನೀತ ಮಂಗಲ್ಪಾಡಿ ಸ್ವಾಗತಿಸಿದರು. ವೀಣಾ ಕುಂಡಂಗುಯಿ ವಂದಿಸಿದರು. ಚಿದಾನಂದ ಭಟ್ ಕಾರ್ಯಕ್ರಮ ನಿರೂಪಿಸಿದರು. ತರಬೇತಿ ಶಿಬಿರವು ಶನಿವಾರ ಸಂಪನ್ನಗೊಳ್ಳಲಿದೆ.
More in this category: « ಬಜಕ್ಕೂಡ್ಲು ಅಮೃತಧಾರಾ ಗೋಶಾಲೆಯ ನೂತನ ಕಟ್ಟಡದ ಲೋಕಾರ್ಪಣೆ ಬಜಕೂಡ್ಲು ಗೋಶಾಲೆಯಲ್ಲಿ ಸುರಭಿ ಸಮರ್ಪಣಮ್ »
back to top