Menu

ಬಜಕೂಡ್ಲು ಗೋಶಾಲೆಯಲ್ಲಿ ಸುರಭಿ ಸಮರ್ಪಣಮ್

  • Published in ಕೇರಳ
  • Read 4 times
  • Comments::DISQUS_COMMENTS
ಬಜಕ್ಕೂಡ್ಲು :ಅಮೃತಧಾರಾ ಗೋಶಾಲೆಯ ನೂತನ ಕಟ್ಟಡದ ಲೋಕಾರ್ಪಣೆ ಸಮಾರಂಭ ಸುರಭಿ ಸಮರ್ಪಣಮ್ ಶನಿವಾರ ಗೋಶಾಲೆಯ ನಿವೇಶನದಲ್ಲಿ ಜರಗಲಿದೆ. ಇದರ ಅಂಗವಾಗಿ ಶುಕ್ರವಾರ ಬೆಳಗ್ಗೆ ದೀಪಾರಾಧನೆಯೊಂದಿಗೆ ವಿಶಿಷ್ಟವಾದ ಪೂರ್ಣಮಂಡಲ ತ್ರಿಕಾಲಪೂಜೆ ಮತ್ತು ಪಾರಾಯಣ ನಡೆಯಿತು. ಅನಂತರ ಅಷ್ಟೋತ್ತರ ಶತ ನಾಳಿಕೇರ ಫಲಾತ್ಮಕ ಅಷ್ಟದ್ರವ್ಯ ಮಹಾಗಣಪತಿ ಹವನ, ಬಳಿಕ ಗೋಪಾಲಕೃಷ್ಣ ಕಲ್ಪೋಕ್ತ ಪೂಜೆ, ಗೋಪೂಜೆ ಮತ್ತು ಗೋದಾನ ಜರಗಿತು.
 
ಈ ಸಂದರ್ಭದಲ್ಲಿ ಶ್ರೀಗೋಪಾಲಕೃಷ್ಣನಿಗೆ ಸುವಸ್ತು ಸಮರ್ಪಣೆ, ಗೋಮಾತೆಗೆ ತಿಲಸಾರ ಮತ್ತು ಫಲಸಾರ ಸಮರ್ಪಣೆ, ನವಗ್ರಹರಿಗೆ ನವಧಾನ್ಯ ಸಮರ್ಪಣೆ ಕಾರ್ಯಕ್ರಮ ಜರಗಿತು. ಬಳಿಕ ಶೂನ್ಯ ಬಂಡವಾಳ ಕೃಷಿ ಪದ್ಧತಿ, ಕಾಸರಗೋಡು ಗೋತಳಿ ಸಾಕಣೆ, ಔಷ„ ಮತ್ತು ಕೃಷಿ ಎಂಬ ವಿಷಯಗಳ ಕುರಿತು ವಿಚಾರ ಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ವಿವಿಧ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳು ವಿಚಾರ ಮಂಡನೆಗೈದರು.

ಶ್ರೀಗಳ ಅಗಮನ: ಸಂಜೆ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಾಹಾಸ್ವಾಮಿಗಳವರ ಆಗಮನ, ಪೂರ್ಣಕುಂಭ ಸ್ವಾಗತ, ಧೂಳೀಪಾದ ಪೂಜೆ ನಡೆಯಿತು. ಸಂಜೆ ಶ್ರೀಕರಾರ್ಚಿತ ದೇವತಾ ಪೂಜೆಯ ನಂತರ ತ್ರಿಕಾಲ ಪೂಜಾಂಗ ಚಂಡಿಕಾ ಹವನ ಪೂರ್ಣಾಹುತಿ ಶ್ರೀಗಳ ಉಪಸ್ಥಿತಿಯಲ್ಲಿ ಜರಗಿತು.

ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ದಾಸವಾಣಿ ಸಂಕೀರ್ತನೆ ಹಾಗೂ ಶ್ರದ್ಧಾ ನಾಯರ್ಪಳ್ಳ ಇವರಿಂದ ಹರಿಕಥೆ, ಪ್ರಹ್ಲಾದ ಆಚಾರ್ಯ ಬೆಂಗಳೂರು ಇವರಿಂದ ಪುಣ್ಯಕೋಟಿ - ಶ್ಯಾಡೋ ಪ್ಲೇ, ನೂತನ ಪರಿಕಲ್ಪನೆಯ ಗೋವಿಂದ ಗೋಮಾತೆಗೆ ಅನಂತ ನೀರಾಜನ ಕಾರ್ಯಕ್ರಮ ಜನ ಮನದಲ್ಲಿ ಗೋ ಜನ ಜಾಗೃತಿ ಮೂಡಿಸಿತು. ಈ ಸಂದರ್ಭದಲ್ಲಿ ಕಾಸರಗೋಡು ತಳಿಯ ಹಸುವಿನ ತುಪ್ಪದಿಂದ ಗೋಮಾತೆಗೆ ಆರತಿ ಎತ್ತಲಾಯಿತು.
More in this category: « `ಅಧ್ಯಾಪಕ ಜ್ಞಾನ ಭಂಡಾರ ವಿಸ್ತರಿಸಿಕೊಳ್ಳಲಿ' ಗ್ರಂಥಾಂತರಂಗದ ತಲ್ಲಣಗಳನ್ನು ಹಂಚಿಕೊಳ್ಳೋಣ ಬನ್ನಿ ನೀರ್ಚಾಲಿಗೆ »
back to top