Menu

ನೀರ್ಚಾಲು: ಕನ್ನಡ ಲೇಖಕರು, ಪ್ರಕಾಶಕರ ಸಮಾವೇಶ

  • Published in ಕೇರಳ
  • Read 22 times
  • Comments::DISQUS_COMMENTS
ಬದಿಯಡ್ಕ: ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಮತ್ತು ಕಾಸರಗೋಡು ಪ್ರಕಾಶನ ಇದರ ಸಹಕಾರದೊಂದಿಗೆ ಮೇ 23ರಂದು ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಸ್ಕೂಲ್‍ನಲ್ಲಿ ಕಾಸರಗೋಡಿನ ಕನ್ನಡ ಲೇಖಕರು ಮತ್ತು ಪ್ರಕಾಶಕರ ಸಮಾವೇಶ ಜರಗಿತು.
 
ವಿಶ್ರಾಂತ ಪ್ರಾಧ್ಯಾಪಕ ಡಾ| ಹರಿಕೃಷ್ಣ ಭರಣ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುಸ್ತಕ ಪ್ರಕಟನೆ ಕಷ್ಟ. ಪುಸ್ತಕ ಪ್ರಕಟನೆಯಿಂದ ಬಹುತೇಕ ಮಂದಿ ಕೈಸುಟ್ಟುಕೊಂಡವರೆ. ಒಳ್ಳೆಯ ಕೃತಿಕಾರರ ಹಲವಾರು ಕೃತಿಗಳು ಪ್ರಕಟವಾಗದಿರುವುದೇ ಹೆಚ್ಚು. ಓದುಗನಿಗೆ ಪುಸ್ತಕ ತಲುಪುದಿಲ್ಲ, ಓದದವನ ಕೈಗೆ ಪುಸ್ತಕ ತಲುಪುತ್ತದೆ. ಪ್ರಕಾಶಕರು ಹೊಸ ಲೇಖಕರ ಕೃತಿ ಪ್ರಕಟನೆಗೆ ಸ್ವೀಕರಿಸುವುದಿಲ್ಲ ಎಂದರು.

ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ| ರಮಾನಂದ ಬನಾರಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು.

ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ನ್ಯಾಯವಾದಿ ಥೋಮಸ್ ಡಿ ಸೋಜಾ, ಪತ್ರಕರ್ತ, ಲೇಖಕ ಹರ್ಷಾದ್ ವರ್ಕಾಡಿ, ಲೇಖಕ, ವ್ಯಂಗ್ಯಚಿತ್ರಕಲಾವಿದ ಬಾಲಮಧುರಕಾನನ, ಕಥೆಗಾರ್ತಿ ಅನುಪಮಾ ಪ್ರಸಾದ್, ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಮತ್ತಿತರು ಭಾಗವಹಿಸಿದ್ದರು.
 
ಸುಕುಮಾರ ಆಲಂಪಾಡಿ ಕಾರ್ಯಕ್ರಮ ನಿರೂಪಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯದರ್ಶಿ ವಿಜಯಲಕ್ಷ್ಮೀ ಶ್ಯಾನುಭೋಗ್ ಸ್ವಾಗತಿಸಿದರು.
More in this category: « ಒಂದೇ ಕುಟುಂಬದ ಐವರು ನಾಪತ್ತೆ: ಕ್ರಮಕ್ಕೆ ಮಹಿಳಾ ಮೋರ್ಚಾ ಆಗ್ರಹ ದೇಲಂಪಾಡಿ: ಪಾಟು ಮಹೋತ್ಸವ, ವಾರ್ಷಿಕೋತ್ಸವ »
back to top