Menu

ಭ್ರಷ್ಟಾಚಾರವನ್ನು ಖಂಡಿಸಿ ಬದಿಯಡ್ಕದಲ್ಲಿ ಧರಣಿ

  • Published in ಕೇರಳ
  • Read 18 times
  • Comments::DISQUS_COMMENTS
ಬದಿಯಡ್ಕ: ಬದಿಯಡ್ಕ ಗ್ರಾ.ಪಂ.ನ ಭ್ರಷ್ಟಾಚಾರವನ್ನು ಖಂಡಿಸಿ ಅಭಿವೃದ್ಧಿಗೆ ಆಗ್ರಹಿಸಿ ಸಿಪಿಐ ಪಕ್ಷದ ವತಿಯಿಂದ ಗ್ರಾ.ಪಂ.ಕಚೇರಿ ಮುಂಭಾಗದಲ್ಲಿ ಧರಣಿ ನಡೆಯಿತು.
 
ಧರಣಿಗೆ ಮುಂಚಿತವಾಗಿ ಬದಿಯಡ್ಕ ಪೇಟೆಯಲ್ಲಿ ಸಿಪಿಐ ಕಾರ್ಯಕರ್ತರು ಮೆರವಣಿಗೆ ನಡೆಸಿದರು.
ಸಿಪಿಐ ರಾಜ್ಯ ಸಮಿತಿ ಸದಸ್ಯ ಟಿ.ಕೃಷ್ಣನ್ ಧರಣಿ ಉದ್ಘಾಟಿಸಿ ಮಾತನಾಡುತ್ತಾ ಬಡ ಜನತೆಯ ಸವಲತ್ತುಗಳನ್ನು ವಂಚಿಸಿ ಆಡಳಿತೆ ನಡೆಸುವ ಯುಡಿಎಫ್ ತನ್ನ ಜೇಜು ತುಂಬಿಸುವ ಯೋಜನೆಗಳಿಗಷ್ಟೆ ಮಹತ್ವ ನೀಡುತ್ತಿರುವುದರಿಂದ ಜನಪರವಾದ ಯೋಜನೆಗಳು ಇನ್ನೂ ಕಾರ್ಯಗತಗೊಳ್ಳದಿರಲು ಮುಖ್ಯ ಕಾರಣವಾಗಿದೆ ಎಂದರು.

ಬದಿಯಡ್ಕ ಗ್ರಾಮ ಪಂಚಾಯತಿನ ಅಭಿವೃದ್ಧಿ ಇನ್ನೂ ಮರೀಚಿಕೆಯಾಗಿರುವಾಗ ಮುಂದೆ ಬರುವ ಪ್ರಜಾಪ್ರಭುತ್ವ ಹಕ್ಕು ನಿರ್ಣಯದಲ್ಲಿ ಮತದಾರರು ಅಭಿವೃದ್ಧಿ ಪರವಾದ ನಿಲುವು ತಳೆಯುವುದು ಇದರಿಂದ ಸ್ಪಷ್ಟ ಎಂದರು. ಆರ್ಹ ಸವಲತ್ತುಗಳನ್ನು ಜನ ಸಾಮಾನ್ಯನಿಗೆ ದೊರಕಿಸಿ ಕೊಡುವಲ್ಲಿ ಸಿಪಿಐ ಪಕ್ಷವು ಜನಪರವಾಗಿ ಹೋರಾಟ ನಡೆಸಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಸಿಪಿಐ ನೇತಾರರಾದ ಪಿ.ಎನ್.ಆರ್ ಅಮ್ಮಣ್ಣಾಯ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
More in this category: « `ಸಂಘಟಿತ ಪ್ರಯತ್ನದಿಂದ ಪುಸ್ತಕೋದ್ಯಮ ಅಭಿವೃದ್ಧಿ' ಪೆರ್ಲ: 818ನೇ ಮದ್ಯವರ್ಜನ ಶಿಬಿರ ಉದ್ಘಾಟನೆ »
back to top