Menu

ಮಕ್ಕಳ ಆಕರ್ಷಿಸಲು ಪ್ರವೇಶೋತ್ಸವ ಸಹಕಾರಿಯಾಗಲಿ: ಸೌಮ್ಯಾ ಮಹೇಶ್

  • Published in ಕೇರಳ
  • Read 51 times
  • Comments::DISQUS_COMMENTS
ಬದಿಯಡ್ಕ: ಹೊಸ ಶೈಕ್ಷಣಿಕ ವರ್ಷ ಆರಂಭಗೊಂಡಿದೆ. ಈ ರೀತಿಯ ಮೆರವಣಿಗೆ ಮತ್ತು ಪ್ರವೇಶೋತ್ಸವ ಕಾರ್ಯಕ್ರಮಗಳು ಅಳುವ ಮಕ್ಕಳಿಗೆ ಆಕರ್ಷಣೆಯನ್ನು ನೀಡಿ ಅವರು ಹಸನ್ಮುಖರಾಗಿ ಶಾಲೆಗೆ ಬರುವಂತೆ ಮಾಡುವಲ್ಲಿ ಸಹಕಾರಿಯಾಗುತ್ತದೆ. ವಿದ್ಯಾಲಯದಲ್ಲಿ ಚೆನ್ನಾಗಿ ಕಲಿತು ವಿದ್ಯಾರ್ಥಿಗಳ ಬಾಳು ಹಸನಾಗಲಿ ಎಂದು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ಅಭಿಪ್ರಾಯಪಟ್ಟರು.
 
ಅವರು ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ನೂತನ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ನಿರ್ವಹಿಸಿ ಮಾತನಾಡಿದರು.

ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಹಾಸ ರೈ, ಶಿಕ್ಷಕರಾದ ಚಂದ್ರಶೇಖರ ರೈ, ಮಾಲತಿ ವೈ, ಲಲಿತಕುಮಾರಿ.ಎನ್.ಎಚ್, ಶೃತಿ, ಜಯಶ್ರೀ ಉಪಸ್ಥಿತರಿದ್ದರು. ಬೆಲೂನ್ ಮತ್ತು ಟೊಪ್ಪಿಗಳೊಂದಿಗೆ ನವವಿದ್ಯಾರ್ಥಿಗಳ ಆಕರ್ಷಕ ಮೆರವಣಿಗೆ ನಡೆಯಿತು. ಕಲಿಕೋಪಕರಣ ಮತ್ತು ಸಿಹಿತಿಂಡಿಗಳನ್ನು ವಿತರಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯಿನಿ ಎಚ್.ಎನ್. ಮೀನಾಕ್ಷಿ ಸ್ವಾಗತಿಸಿದರು. ಶಿಕ್ಷಕಿ ಮಾಲತಿ.ಎಂ ಧನ್ಯವಾದ ಸಮರ್ಪಿಸಿದರು.
More in this category: « ಪಟ್ಟಾಜೆ ಸೇವಾ ಗ್ರಾಮದ ಉದ್ಘಾಟನೆ ಶಿಕ್ಷಣ ಸುಸಂಸ್ಕೃತ ಸಮಾಜ ರೂಪಿಸುವುದು »
back to top