Menu

ಬೆಳ್ಳೂರಿನಲ್ಲಿ 8 ಮಂದಿಗೆ ಡೆಂಗ್ಯೂ

  • Published in ಕೇರಳ
  • Read 62 times
  • Comments::DISQUS_COMMENTS
ಬದಿಯಡ್ಕ: ಮಳೆಗಾಲ ಆರಂಭಕ್ಕೆ ಮುನ್ನವೇ ಮುಳ್ಳೇರಿಯ ಸಮೀಪದ ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಡೆಂಗೂ ಜ್ವರ ವ್ಯಾಪಿಸುತ್ತಿದ್ದು 8 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
 
 
ಡೆಂಗ್ಯೂ ಜ್ವರ ಬಾಧಿಸಿದ ಬೆಳ್ಳೂರು ಗ್ರಾಮ ಪಂಚಾಯತ್‍ನ 9ನೇ ವಾರ್ಡ್ ಸದಸ್ಯ ಶ್ರೀಧರ ಎಂ, ಅಡ್ವಳ ನಿವಾಸಿಗಳಾದ ಮರಿಯಯ್ಯ ಬಲ್ಲಾಳ್, ಪದ್ಮನಾಭ, ದಾಮೋದರ, ಪುಳಿತ್ತಡಿಯ ಲಕ್ಷ್ಮಿ ಸಹಿತ 8 ಮಂದಿಯನ್ನು ಮುಳ್ಳೇರಿಯದ ಆಸ್ಪತ್ರೆಗೆ ಸೇರಿಸಲಾಗಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಇನ್ನೂ ಕೆಲವರಿಗೆ ಡೆಂಗ್ಯೂ ಬಾಧಿಸಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಲಂಪಾಡಿ, ಅಡೂರು, ಪಾಂಡಿ, ಕಿನ್ನಿಂಗಾರು, ಕೊರಕ್ಕೋಡು ಪರಿಸರದಲ್ಲಿ ವಿವಿಧ ಜ್ವರ ಪ್ರಕರಣಗಳು ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿವೆ.
More in this category: « ಶಿಕ್ಷಣ ಸುಸಂಸ್ಕೃತ ಸಮಾಜ ರೂಪಿಸುವುದು ನೆಟ್ಟಣಿಗೆ ಜ್ವರ ತಪಾಸಣಾ ಶಿಬಿರ »
back to top