Menu

ಬದಿಯಡ್ಕ: ವಿವಿಧೆಡೆ ವ್ಯಾಪಕ ಮಳೆ; ಅಪಾರ ಹಾನಿ

  • Published in ಕೇರಳ
  • Read 53 times
  • Comments::DISQUS_COMMENTS
ಬದಿಯಡ್ಕ: ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ವ್ಯಾಪಕ ಮಳೆಯಾಗುತ್ತಿದ್ದು, ವಿವಿಧೆಡೆ ಅಪಾರ ನಾಶ - ನಷ್ಟ ಉಂಟಾಗಿದೆ. ವಿವಿಧೆಡೆ ವಿದ್ಯುತ್ ಸರಬರಾಜು ವ್ಯತ್ಯಯವಾಗಿದೆ.  
  
 
ಕಾಸರಗೋಡು ಜಿಲ್ಲೆಯ ಕುಂಬಳೆ, ಮೊಗ್ರಾಲ್ ಪುತ್ತೂರು, ಕಾಸರಗೋಡು, ಬೋವಿಕ್ಕಾನ, ಚೆರ್ಕಳ, ಮುಳ್ಳೇರಿಯ, ಬದಿಯಡ್ಕ, ಪೆರ್ಲ, ಪಳ್ಳತ್ತಡ್ಕ, ಉಕ್ಕಿನಡ್ಕ, ಏಳ್ಕಾನ, ಪಳ್ಳ, ಮುಂಡಿತ್ತಡ್ಕ, ನೀರ್ಚಾಲು, ಬೇಳ, ಮಾನ್ಯ, ಮಧೂರು, ಸೀತಂಗೋಳಿ, ಸೂರಂಬೈಲು ಮೊದಲಾದ ಪ್ರದೇಶಗಳಲ್ಲಿ ಹಾಗೂ ಸಮೀಪದ ಗ್ರಾಮೀಣ ಭಾಗಗಳಲ್ಲಿಯೂ ಗುರುವಾರ ಭಾರೀ ಮಳೆಯಾಗಿದೆ. ಚರಂಡಿಯಲ್ಲಿ ಕಸಕಡ್ಡಿ ತುಂಬಿರುವುದರಿಂದ ಮಳೆ ನೀರು ಸಾಗಲು ಸಾಧ್ಯವಾಗದೆ ರಸ್ತೆಯಲ್ಲೇ ಹರಿಯುತ್ತಿದೆ.

ಸಿಡಿಲಿನ ಆಘಾತಕ್ಕೆ ಬದಿಯಡ್ಕ ಪಿಲಾಂಕಟ್ಟೆ ಮಸೀದಿ ಬಳಿಯ ಆಯಿಷಮ್ಮ (82) ಮತ್ತು ಪುತ್ರಿ ಉಮ್ಮಾ ಆಲೀಮ(30) ಗಾಯಗೊಂಡಿದ್ದಾರೆ. ಇವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಸಿಡಿಲಿನ ಆಘಾತಕ್ಕೆ ಮನೆಗೂ ಹಾನಿಯಾಗಿದೆ. ಮನೆಯ ಮುಂದೆ ಇದ್ದ ತೆಂಗಿನ ಮರಗಳು ನಾಶವಾಗಿದೆ. ಮೋಟಾರ್, ವಿದ್ಯುತ್ ಉಪಕರಣಗಳಿಗೂ ಹಾನಿಯಾಗಿದೆ.

ಬದಿಯಡ್ಕದ ಕಾಡಮನೆ ಮಾಡತ್ತಡ್ಕದಲ್ಲಿ ಮಹಾಲಿಂಗ ಅವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳು, ಸೋಲಾರ್, ಫ್ಯಾನ್ ಮೊದಲಾದವು ಹಾನಿಗೀಡಾಗಿದೆ. ಮನೆ ಬಳಿಯ ತೆಂಗಿನ ಮರಗಳಿಗೂ ಹಾನಿಯಾಗಿದೆ.
ಮುಳ್ಳೇರಿಯ ಕರ್ಮಂತೋಡಿಯ ಕುಂಞರಾಮ ಅವರ ಮನೆಗೆ ಬುಧವಾರ ರಾತ್ರಿ ಸಿಡಿಲು ಬಡಿದು, ಮನೆ ಗೋಡೆ ಬಿರುಕು ಬಿಟ್ಟಿದೆ. ಮನೆಯ ವಿದ್ಯುತ್ ಉಪಕರಣಗಳು, ಮೈನ್ ಸ್ವಿಚ್ ಬೋರ್ಡ್ ನಾಶವಾಗಿದೆ. ಮನೆಗೆ ಹಾನಿಯಾಗಿದೆ. ಮನೆ ಮುಂದಿನ ಮೂರು ತೆಂಗಿನ ಮರ ಹಾನಿಯಾಗಿದೆ.

ಮುಳ್ಳೇರಿಯ, ಅಡೂರು, ದೇಲಂಪಾಡಿ, ಕೊಟ್ಯಾಡಿ, ಕುಂಟಾರು, ಬೆಳ್ಳೂರು, ಕುಂಬ್ಡಾಜೆ, ಮವ್ವಾರು ಪರಿಸರದಲ್ಲಿ ಗುರುವಾರ ಮಧ್ಯಾಹ್ನದಿಂದ ನಿರಂತರ ಮಳೆ ಸುರಿಯುತ್ತಿದೆ.

ಕಂಬಾರು ಸರಕಾರಿ ಯು.ಪಿ. ಶಾಲೆಗೆ ಗುರುವಾರ ಮಧ್ಯಾಹ್ನ ಸಿಡಿಲು ಬಡಿದು ಶಾಲೆ ಗೋಡೆ ಹಾನಿಗೀಡಾಗಿದೆ. ತರಗತಿ ನಡೆಯುತ್ತಿದ್ದ ವೇಳೆ ಘಟನೆ ಸಂಭವಿಸಿದ್ದು, ವಿದ್ಯಾರ್ಥಿಗಳು ಯಾವುದೇ ಅಪಾಯ ಉಂಟಾಗಿಲ್ಲ. ಧ್ವಜ ಕಂಬ ಹಾಗೂ ಶಾಲಾ ಕಾಂಕ್ರೀಟ್ ಹಾನಿಗೀಡಾಗಿದೆ. ವಿದ್ಯುತ್ ಉಪಕರಣಗಳು ಬೆಂಕಿಗಾಹುತಿಯಾಗಿದೆ.
More in this category: « ಬೆಳ್ಳೂರು: ಸ್ವಚ್ಛತಾ ಶಿಬಿರ
back to top