Menu

ಮೇ.19 : ಗಂಗೊಳ್ಳಿಯಲ್ಲಿ ಪ್ರಸಿದ್ಧ ಸಂಗೀತ ಕಲಾವಿದರ ಸಂಗಮ

  • Published in ಉಡುಪಿ
  • Read 37 times
  • Comments::DISQUS_COMMENTS
ಗಂಗೊಳ್ಳಿ : ಗಂಗೊಳ್ಳಿಯ ನಿನಾದ ಸಂಸ್ಥೆಯ ದಶಮಾನೋತ್ಸವದ ಪ್ರಯುಕ್ತ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಆಯೋಜಿಸಲಾಗಿರುವ ಕಲಾವಿದರುಗಳ ಏಕಾಹ ಭಜನೆ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಪ್ರಸಿದ್ಧ ಜಿಎಸ್‍ಬಿ ಸಂಗೀತ ಕಲಾವಿದರು ಪಾಲ್ಗೊಳ್ಳಲಿದ್ದಾರೆ.
 
ಮೇ.19 ರಂದು ಬೆಳಿಗ್ಗೆ 8 ಗಂಟೆಯಿಂದ ದೇವರಾಯ ಕಿಣಿ ಮುಂಬೈ, 10 ಗಂಟೆಯಿಂದ ಮಹಾಲಕ್ಷ್ಮೀ ಶೆಣೈ ಕಾರ್ಕಳ, 12 ಗಂಟೆಯಿಂದ ಬಾಲಚಂದ್ರ ಪ್ರಭು ಮುಂಬೈ, ಮಧ್ಯಾಹ್ನ 2 ಗಂಟೆಯಿಂದ ಅನನ್ಯಾ ಭಗತ್ ಬೆಂಗಳೂರು, ಸಂಜೆ 4 ಗಂಟೆಯಿಂದ ರಾಜೇಶ ಪಡಿಯಾರ್ ಮೈಸೂರು, ಸಂಜೆ 6 ಗಂಟೆಯಿಂದ ಕಿರಣ್ ಕಾಮತ್ ಮುಂಬೈ, ರಾತ್ರಿ 8 ಗಂಟೆಯಿಂದ ಪಂಡಿತ್ ಉಪೇಂದ್ರ ಭಟ್ ಮುಂಬೈ, ರಾತ್ರಿ 10 ಗಂಟೆಯಿಂದ ಸತ್ಯಚರಣ್ ಶೆಣೈ ಉಡುಪಿ, ರಾತ್ರಿ 12 ಗಂಟೆಯಿಂದ ವೀಣಾ ನಾಯಕ್ ಕೋಟ, 2 ಗಂಟೆಯಿಂದ ಆಶಿಷ್ ನಾಯಕ್ ಬೆಂಗಳೂರು, 4 ಗಂಟೆಯಿಂದ ರಘುನಂದನ್ ಭಟ್ ಬೆಂಗಳೂರು, ಬೆಳಿಗ್ಗೆ 6 ಗಂಟೆಯಿಂದ ಶಂಕರ ಶ್ಯಾನುಭಾಗ್ ಬೆಂಗಳೂರು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ಇವರಿಗೆ ಸಮಾಜದ ಸ್ಥಳೀಯ ಪ್ರಸಿದ್ಧ ಕಲಾವಿದರು ಸಾಥ್ ನೀಡಲಿದ್ದಾರೆ.

ಪ್ರಸಿದ್ಧ ಕಲಾವಿದರನ್ನೊಳಗೊಂಡ ಇಂತಹ ಅಪರೂಪದ ಕಾರ್ಯಕ್ರಮಕ್ಕೆ ಗಂಗೊಳ್ಳಿಯ ನಿನಾದ ಸಂಸ್ಥೆಯ ದಶಮಾನೋತ್ಸವ ಸಮಾರಂಭ ಸಾಕ್ಷಿಯಾಲಿದ್ದು, ವಿವಿಧ ರಾಜ್ಯಗಳ ಸುಮಾರು 12 ಮಂದಿ ಪ್ರಸಿದ್ಧ ಕಲಾವಿದವರು ಗಂಗೊಳ್ಳಿ ಮೇಲಿನ ಪ್ರೀತಿ ಅಭಿಮಾನದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಜನಾ ಸೇವೆಯನ್ನು ಶ್ರೀದೇವರಿಗೆ ಅರ್ಪಿಸಲಿದ್ದಾರೆ. 24 ಗಂಟೆಗಳ ಕಾಲ ನಿರಂತರವಾಗಿ ನಡೆಯಲಿರುವ ಪ್ರಸಿದ್ಧ ಕಲಾವಿದರ ಈ ಕಾರ್ಯಕ್ರಮವನ್ನು ನೋಡಲು ಸಮಾಜದ ಜನರು ಕಾಯುತ್ತಿದ್ದಾರೆ.
More in this category: « ಹಟ್ಟಿಕುದ್ರುವಿನಲ್ಲಿ ಅಕ್ರಮ ಮರಳುಗಾರಿಕೆ : ಅಪಾಯದ ಭೀತಿಯಲ್ಲಿ ಜನತೆ ಕೋಟೇಶ್ವರ: ಗ್ಯಾಸ್ ಸ್ಟವ್ ರಿಪೇರಿ ಅಂಗಡಿ ಬೆಂಕಿ ಅಪಾರ ನಷ್ಟ »
back to top