Menu

ಕೋಟೇಶ್ವರ: ಗ್ಯಾಸ್ ಸ್ಟವ್ ರಿಪೇರಿ ಅಂಗಡಿ ಬೆಂಕಿ ಅಪಾರ ನಷ್ಟ

  • Published in ಉಡುಪಿ
  • Read 43 times
  • Comments::DISQUS_COMMENTS
ಕುಂದಾಪುರ: ತಾಲೂಕಿನ ಕೋಟೇಶ್ವರದಲ್ಲಿರುವ ಗ್ಯಾಸ್ ಸ್ಟವ್ ರಿಪೇರಿ ಅಂಗಡಿಗೆ ಮಾಲೀಕ ಕೆಲಸ ಮಾಡುತ್ತಿರುವ ವೇಳೆ ಬೆಂಕಿ ಹತ್ತಿದ ಘಟನೆ ಶುಕ್ರವಾರ ಸಂಜೆ ವರದಿಯಾಗಿದೆ. ಈ ಘಟನೆಯಲ್ಲಿ ಅಂಗಡಿ ಮಾಲಿಕನಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಂಗಡಿಯಲ್ಲಿದ್ದ ಪರಿಕರಿಗಳು ಬೆಂಕಿಗಾಹುತಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ.
 
 
 
 
 
 
 
 
 
 
 
 
 
ಕೋಟೇಶ್ವರದ ಸೀತಾರಾಮ್ ಶೇಟ್ ಮಾಲೀಕತ್ವದ ಅಂಗಡಿ ಇದಾಗಿದ್ದು ಶುಕ್ರವಾರ ಸಂಜೆ ವೇಳೆಗೆ ಗ್ಯಾಸ್ ಸ್ಟವ್ ರಿಪೇರಿ ಮಾಡುವಾಗ ಅಚಾನಕ್ ಆಗಿ ಈ ಘಟನೆ ಸಂಭವಿಸಿದ್ದು ಸೀತಾರಮ್ ಅವರಿಗೆ ಗಾಯಗಳಾಗಿದೆ. ಅಲ್ಲದೇ ಬೆಂಕಿ ತೀವ್ರತೆಗೆ ಅಂಗಡಿ ಭಾಗಶಃ ಸುಟ್ಟುಹೋಗಿದ್ದು ಅಪಾರ ಪ್ರಮಾಣದ ನಷ್ಟ ಆಗಿದೆ ಎನ್ನಲಾಗಿದೆ.
 
ಕುಂದಾಪುರ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯವನ್ನು ಮಾಡಿದ್ದಾರೆ.
More in this category: « ಮೇ.19 : ಗಂಗೊಳ್ಳಿಯಲ್ಲಿ ಪ್ರಸಿದ್ಧ ಸಂಗೀತ ಕಲಾವಿದರ ಸಂಗಮ ವಾರಾಹಿ ನೀರು ತಂದಿತು ಜೀವಕ್ಕೆ ಕುತ್ತು:ಕೆಸರು ಮಿಶ್ರಿತ ಮದಗದ ನೀರಲ್ಲಿ ಮುಳುಗಿ ವ್ಯಕ್ತಿ ಸಾವು »
back to top