ರಾಷ್ಟ್ರ ಪಕ್ಷಿ ವಾಹನ ಅಪಘಾತಕ್ಕೆ ಬಲಿ
- Published in ಉಡುಪಿ
- Read 37 times
- Comments::DISQUS_COMMENTS
ಕುಂದಾಪುರ: ದೇಶದ ರಾಷ್ಟ್ರೀಯ ಪಕ್ಷಿ ಗಂಡು ನವಿಲೊಂದು ರಸ್ತೆ ಅಪಘಾತದಲ್ಲಿ ಬುಧವಾರ ಮೃತಪಟ್ಟಿದೆ. ಗಂಗೊಳ್ಳಿ ಸಮೀಪದ ಗುಜ್ಜಾಡಿ ಚೆಕ್‍ಪೋಸ್ಟ್ ಬಳಿಯಲ್ಲಿ ಘಟನೆ ನಡೆದಿದ್ದು, ನವಿಲು ರಸ್ತೆಗಡ್ಡವಾಗಿ ಹಾರುತ್ತಿದ್ದ ವೇಳೆ ರಸ್ತೆಯಲ್ಲಿ ಅತೀ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ.

ತಕ್ಷಣ ಸ್ಥಳೀಯರು ಧಾವಿಸಿ ಬಂದು ನೀರು ಕುಡಿಸಿದರಾದರೂ ಗಂಭೀರ ಗಾಯಗೊಂಡಿದ್ದ ನವಿಲು ಅಸುನೀಗಿದೆ. ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಸುದ್ಧಿ ನೀಡಿದ್ದು, ಅಧಿಕಾರಿಗಳು ದಫನ ಮಾಡಿದ್ದಾರೆ.
Tweet