Menu

ಹಾಲ್ಕಲ್ : ಬೈಕಿಗೆ ಡಿಕ್ಕಿಯಾದ ಟ್ರಾವೆಲ್ಲರ್ ಕಂದಕಕ್ಕೆ

  • Published in ಉಡುಪಿ
  • Read 29 times
  • Comments::DISQUS_COMMENTS
ಕುಂದಾಪುರ: ಕೊಲ್ಲೂರು ಸಮೀಪದ ಹಾಲ್ಕಲ್‍ನ ಆನೆಝರಿಯ ಸಮೀಪ ಬೈಕ್ ಹಾಗೂ ಟೆಂಪೋ ಟ್ರಾವೆಲರ್ ನಡುವೆ ನಡೆದ ಅಪಘಾತದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಟ್ರಾವೆಲ್ಲರ್ ರಸ್ತೆ ಬದಿಯ 15 ಅಡಿ ಆಳದ ಕಂದಕಕ್ಕೆ ಬಿದ್ದ ಘಟನೆ ನಡೆದಿದೆ. ಅಪಘಾತದ ಪರಿಣಾಮ ಬೈಕಿನಲ್ಲಿದ್ದ ಇಬ್ಬರು ಸೇರಿದಂತೆ 7 ಮಂದಿ ಗಾಯಗೊಂಡು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಬಳಿಕ ಮಂಗಳೂರಿಗೆ ಕೊಂಡೊಯ್ಯಲಾಗಿದೆ. 
 
ಟೆಂಪೋ ಟ್ರಾವೆಲ್ಲರ್‍ನಲ್ಲಿ ಮಕ್ಕಳು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಜನರಿದ್ದು, ಮಂಗಳೂರಿನಿಂದ ಕೊಲ್ಲೂರಿಗೆ ಬಂದು ಹಿಂತಿರುಗುತ್ತಿದ್ದರು. ಈ ವೇಳೆ ಆನೆಝರಿ ಸಮೀಪದ ತಿರುವಿನಲ್ಲಿ ಬೈಕೊಂದು ಬರುತ್ತಿರುವುದನ್ನು ಗಮನಿಸಿದ ಚಾಲಕ ಅಪಘಾತ ತಪ್ಪಿಸಲು ಯತ್ನಿಸಿದ್ದಾನೆ. ಆದರೆ ಅದಾಗಲೇ ಬೈಕಿಗೆ ಡಿಕ್ಕಿಯಾಗದ ಟ್ರಾವೆಲ್ಲರ್, ಚಾಲಕನ ಹತೋಟಿ ತಪ್ಪಿ ಸುಮಾರು 15 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಟೆಂಪೋ ಟ್ರಾವೆಲ್ಲರ್‍ನಲ್ಲಿದ್ದ ಪ್ರಯಾಣಿಕರಲ್ಲಿ ಲಿಂಗಪ್ಪ ಆಚಾರಿ (51), ಚಂದ್ರಾವತಿ ಆಚಾರಿ (42) ಎಂಬುವರಿಗೆ ಗಂಭೀರ ಗಾಯಗಳಾಗಿದ್ದರೆ, ಉಳಿದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಸತ್ಯನಾರಾಯಣ ಗಾಣಿಗ ಹಾಗೂ ಹಿಂಬದಿ ಕುಳಿತಿದ್ದ ರಂಜನಿ ಗಾಯಗೊಂಡಿದ್ದಾರೆ.
More in this category: « ಅಕ್ರಮ ದನ ಸಾಗಾಟ: ಆರೋಪಿಗಳು ಪರಾರಿ : 5 ದನ ಸಾವು ಗಂಗೊಳ್ಳಿಯಿಂದ ಚೆನ್ನೈಗೆ ತೆರಳುತ್ತಿದ್ದ ಇನ್ಸುಲೇಟರ್ ಮೀನು ಲಾರಿ ಕಮರಿಗೆ »
back to top