Menu

ಗಂಗೊಳ್ಳಿಯಿಂದ ಚೆನ್ನೈಗೆ ತೆರಳುತ್ತಿದ್ದ ಇನ್ಸುಲೇಟರ್ ಮೀನು ಲಾರಿ ಕಮರಿಗೆ

  • Published in ಉಡುಪಿ
  • Read 37 times
  • Comments::DISQUS_COMMENTS
ಕುಂದಾಪುರ: ಗಂಗೊಳ್ಳಿಯಿಂದ ಚೆನ್ನೈಗೆ ತೆರಳುತ್ತಿದ್ದ ಗಂಗೊಳ್ಳಿಯ ಮಹೇಶ್ ಅವರಿಗೆ ಸೇರಿದ ಇನ್ಸುಲೇಟರ್ ಮೀನು ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಮರಿಗೆ ಉರುಳಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ ಬೀಚ್ ಸಮೀಪ ನಡೆದಿದೆ.
 
ಗಂಗೊಳ್ಳಿಯಿಂದ ಚೆನ್ನೈಗೆ ತೆರಳಲು ಬೆಳಿಗ್ಗೆ ಸುಮಾರು 6 ಗಂಟೆಗೆ ಲೋಡ್ ಮಾಡಿ ಹೊರಟಿದ್ದ ಮೀನು ಲಾರಿಯು ಚೆನ್ನೈಗೆ ಕುಂದಾಪುರ ಮಾರ್ಗವಾಗಿ ತೆರಳಬೇಕಿತ್ತೆನ್ನಲಾಗಿದೆ. ಆದರೆ ಲಾರಿಯ ಇನ್ನೊಬ್ಬ ಚಾಲಕ ಮನೆಯಲ್ಲಿದ್ದ ಕಾರಣ ಆತನನ್ನು ಕರೆತರಲೆಂದು ಮರವಂತೆ ಮಾರ್ಗವಾಗಿ ತೆರಳಿದ್ದ ಕಾರಣ ತ್ರಾಸಿ ಬೀಚ್ ಸಮೀಪ ಘಟನೆ ನಡೆದಿದೆ. ಆದರೆ ಯಾವದೇ ಪ್ರಣ ಹಾನಿ ಸಂಭವಿಸಿಲ್ಲ. ತ್ತು. ಬದಲಿ ಚಾಲಕನನ್ನು ಕರೆತರುವ ಸಲುವಾಗಿ ಮರವಂತೆ ಮಾರ್ಗವಾಗಿ ಲಾರಿಯನ್ನು ತರಲಾಗಿತ್ತು ಎನ್ನಲಾಗಿದ್ದು ದುರದೃಷ್ಟವಷಾತ್ ಈ ಅವಘಡ ಸಂಭವಿಸಿದೆ. ಲಾರಿ ಪಲ್ಟಿಯಾಗಿ ಕಮರಿಗೆ ಬಿದ್ದಿತ್ತು. ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಂಜೆಯ ವೇಳೆಗೆ ಎರಡು ಕ್ರೇನ್‍ಗಳನ್ನು ಬಳಸಿ ಮೇಲೆತ್ತಲಾಗಿದೆ. ಘಟನೆಯಿಂದಾಗಿ ಸುಮಾರು ಎರಡು ತಾಸುಗಳ ಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು.
More in this category: « ಹಾಲ್ಕಲ್ : ಬೈಕಿಗೆ ಡಿಕ್ಕಿಯಾದ ಟ್ರಾವೆಲ್ಲರ್ ಕಂದಕಕ್ಕೆ ಮತ್ಸ್ಯಗಂಧ ರೈಲಿನಲ್ಲಿ ವ್ಯಕ್ತಿಯೋರ್ವರ ಬ್ಯಾಗಿನಿಂದ ಚಿನ್ನಾಭರಣ ಕಳವು »
back to top