ಶಾಸಕ ಹಾಲಾಡಿ ಅವರಿಗೆ ಮತ್ತೆ ಪಾತಕಿಯಿಂದ ಬೆದರಿಕೆ ಕರೆ; ಹಾಲಾಡಿ ನಿವಾಸಕ್ಕೆ ಎಸ್ಪಿ ಭೇಟಿ
- Published in ಉಡುಪಿ
- Read 34 times
- Comments::DISQUS_COMMENTS
                ಕುಂದಾಪುರ: ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಮಂಗಳವಾರವೂ ೨-೩ ಬಾರಿ ಅಪರಿಚಿತ ವಿದೇಶಿ ನಂಬರ್ ಮೂಲಕ ಬೆದರಿಕೆ ಕರೆ ಬಂದಿದೆ ಎನ್ನಲಾಗಿದ್ದು ಎರಡೂ ಬಾರಿಯೂ ಹಾಲಾಡಿ ಅವರ ಆಪ್ತ ಸಹಾಯಕರು ಕರೆ ಸ್ವೀಕರಿಸಿದ್ದಾರೆ.
                
                ಸೋಮವಾರ ಮಧ್ಯಾಹ್ನದ ಸುಮಾರಿಗೆ ಹಾಲಾಡಿಯವರ ಮೊಬೈಲ್ ನಂಬರ್‌ಗೆ ಕರೆ ಮಾಡಿದ ರವಿ ಪೂಜಾರಿ ಎಂದು ಹೇಳಿಕೊಂಡ ವ್ಯಕ್ತಿಯೋರ್ವ ಆಸ್ಟ್ರೇಲಿಯಾದಿಂದ ಕರೆ ಮಾಡುತ್ತಿದ್ದು, ೧೦ ಕೋಟಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. ಅಲ್ಲದೇ ಹಣ ನೀಡದಿದ್ದಲ್ಲಿ ಕೊಲ್ಲುವ ಬೆದರಿಕೆಯನ್ನು ಹಾಕಿದ್ದ. ಈ ಬಗ್ಗೆ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಸೋಮವಾರ ಶಂಕರನಾರಾಯಣ ಠಾಣೆಯಲ್ಲಿ ದೂರು ನೀಡಿದ್ದರು.
                
ಮಂಗಳವಾರವೂ ಕರೆ ಮಾಡಿದ ಪಾತಕಿ: ಸೋಮವಾರ ಮಧ್ಯಾಹ್ನ ಶಾಸಕರು ಹಾಲಾಡಿಯಿಂದ ಶುಭ ಕಾರ್ಯಕ್ರಮಕ್ಕೆ ತೆರಳುತ್ತಿರುವಾಗ ರವಿ ಪೂಜಾರಿ ಎಂದು ಹೇಳಿಕೊಂಡ ವ್ಯಕ್ತಿ ಮೊಬೈಲ್ ಕರೆ ಮಾಡಿ ತುಳುವಿನಲ್ಲಿ ಮಾತನಾಡುತ್ತಾ ನಿಮಗೆ ತುಂಬಾ ಜಾಗ ಹಾಗೂ ತೋಟವಿದೆ, ಅದನ್ನು ಮಾರಿ ನನಗೆ ಹತ್ತು ಕೋಟಿ ಹಣ ನೀಡಿ, ಇಲ್ಲವಾದಲ್ಲಿ ನಿಮಗೆ ವ್ಯವಸ್ಥೆ ಮಾಡುತತೇನೆ ಎಂದು ಹೇಳಿದ್ದ. ಈ ಬೆದರಿಕೆಗೆ ಪ್ರತಿಕರಿಸಿದ ಶಾಸಕರು ತಾನು ಯಾವುದೇ ಕಾನೂನು ಬಾಹಿರ ವ್ಯವಹಾರವನ್ನು ಮಾಡಿಲ್ಲ, ಚುನಾವಣೆಯ ಸಮಯದಲ್ಲೂ ಯಾರಿಂದಲೂ ಹಣ ಪಡೆದಿಲ್ಲ. ನನ್ನ ಬಳಿ ಹಣ ಇಲ್ಲವೆಂದು ಕಡ್ಡಿಮುರಿದಂತೆ ಹೇಳಿ ಕರೆ ಸ್ಥಗಿತಗೊಳಿಸಿದ್ದ್ರು. ಪುನಃ ಬಂದ ಕರೆಯಲ್ಲಿ ಹಣ ಕೊಡುವ ಬಗ್ಗೆ ಆಲೋಚಿಸಿ ಮಂಗಳವಾರ ಕರೆ ಮಾಡುವುದಾಗಿಯೂ ಹೇಳಿದ್ದ. ಅಂತೆಯೇ ಮಂಗಳವಾರ ಎರಡರಿಂದ ಮೂರು ಬಾರಿ ಹಾಲಾಡಿಯವರ ಮೊಬೈಲ್‌ಗೆ ಕರೆ ಬಂದಿದೆ.
                
                  ಹಾಲಾಡಿ ನಿವಾಸಕ್ಕೆ ಎಸ್‌ಪಿ: ಹಾಲಾಡಿಯಲ್ಲಿರುವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನಿವಾಸಕ್ಕೆ ಮಂಗಳವಾರ ಮಧ್ಯಾಹ್ನ ಉಡುಪಿ ಎಸ್ಪಿ ಅಣ್ಣಾಮಲೈ ಭೇಟಿ ನೀಡಿದರು. ಬಳಿಕ ಕುಂದಾಪುರದಲ್ಲಿ ಪ್ರತಿಕ್ರಿಸಿದ ಅವರು ರವಿ ಪೂಜಾರಿ ಕರೆ ಮಾಡಿ ಬೆದರಿಕೆ ಹಾಕಿರುವ ಕುರಿತು ದೂರವಾಣಿ ಸಂಖ್ಯೆಯನ್ನು ಟ್ರೇಸ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ, ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಭೂಗತ ಲೋಕದ ಅಸ್ತಿತ್ವವನ್ನು ಬಲಪಡಿಸಲು ಹಾಗೂ ಜನರಿಗೆ ಭಯಗೊಳಿಸುವ ಸಲುವಾಗಿ ರವಿ ಪೂಜಾರಿ ಕೃತ್ಯಕ್ಕೆ ಕೈ ಹಾಕಿರಬಹುದು.
                
                  ಜನರು ಭಯಪಡುವ ಅಗತ್ಯವೇನೂ ಇಲ್ಲ. ಶಾಸಕರಿಗೆ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಶಾಸಕರಿಗೆ ೨೪*೭ ಭದ್ರತೆ ಹಾಗೂ ಅವರ ನಿವಾಸಕ್ಕೆ ಸಕಲ ಭದ್ರತೆ ನೀಡಲಾಗುತ್ತದೆ. ಈಗಾಗಲೇ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.
                
                    Tweet 